ಕೆರೆಯ ಕೆಸರಲ್ಲಿ ಮುಳುಗಿ, ಕೇವಲ ಕೈ ಮೇಲಕ್ಕೆತ್ತಿ ಸಾವಿನಂಚಿನಲ್ಲಿದ್ದ ವ್ಯಕ್ತಿ ಕಾಪಾಡಿದ ಪೊಲೀಸರು

By Sathish Kumar KH  |  First Published May 24, 2024, 5:37 PM IST

ಕೆರೆಯ ಕೋಡಿಯ ಪಕ್ಕದ ಕೆಸರಿನಲ್ಲಿ ಸಂಪೂರ್ಣವಾಗಿ ಮುಳುಗಿ ಕೇವಲ ಕೈ ಮೇಲಕ್ಕೆತ್ತಿ ಸಹಾಯಕ್ಕಾಗಿ ಬೇಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಜೀವದ ಹಂಗು ತೊರೆದು ಕೆಸರಿಗಿಳಿದು ರಕ್ಷಿಸಿದ್ದಾರೆ.


ತುಮಕೂರು (ಮೇ 24): ಕೆರೆಯ ಕೋಡಿಯ ಪಕ್ಕದ ಕೆಸರಿನಲ್ಲಿ ಸಂಪೂರ್ಣವಾಗಿ ಮುಳುಗಿ ಕೇವಲ ಕೈ ಮೇಲಕ್ಕೆತ್ತಿ ಸಹಾಯಕ್ಕಾಗಿ ಬೇಡುತ್ತಿದ್ದ ವ್ಯಕ್ತಿಯನ್ನು ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಸರಿಗಿಳಿದು ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ.

ಹೌದು, ಕೆಸರಿನಲ್ಲಿ ಮುಳುಗಿ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸರು ಕರ್ತವ್ಯ ಪ್ರಜ್ಞೆ ಹಾಗೂ ಸಾಹಸ ಮೆರೆದಿದ್ದಾರೆ. ತುಮಕೂರು ನಗರದ ಹೊರವಲಯದ ದೇವರಾಯಪಟ್ಟಣದ ಕೆರೆಕೋಡಿಯಲ್ಲಿ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮೀನು ಹಿಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ವ್ಯಕ್ತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಈ ಘಟನೆ ಬಗ್ಗೆ ದಾರಿ ಹೋಕರು ನೋಡಿ ಕ್ಯಾತ್ಸಂದ್ರ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನಿಡಿದ್ದಾರೆ.

Latest Videos

undefined

ಕುಡಿದ ಮತ್ತಿನಲ್ಲಿ ಈಜಲು ತೆರಳಿದ ಯುವಕ: ಬ್ರಿಡ್ಜ್‌ ಕಮ್‌ ಬ್ಯಾರೇಜ್‌ನಲ್ಲಿ ಜಲಸಮಾಧಿ

ದಾರಿ ಹೋಕರ ಕರೆ ಮಾಡಿ ತಿಳಿಸಿದ ಮಾಹಿತಿ ಆಧರಿಸಿ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಹೆಡ್ ಕಾನ್ ಸ್ಟೇಬಲ್ ಮಹೇಶ್ ಹಾಗೂ  ಹೊಯ್ಸಳ ಕಾರು ಚಾಲಕ ಬಸವರಾಜು ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ಕೆಸರಿಗಿಳಿದು ಕೆರಸರಲ್ಲಿ ಹುದುಗಿ ಹೋಗುತ್ತಿದ್ದ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಆಗ ವ್ಯಕ್ತಿಯ ಧ್ವನಿಯೂ ಬಾರದೇ ಸಂಪೂರ್ಣವಾಗಿ ಮುಳುಗಿ ಕೇವಲ ಕೈಯನ್ನು ಮಾತ್ರ ಮೇಲಕ್ಕೆತ್ತಿಕೊಂಡು ಸಾವಿನಂಚಿನಲ್ಲಿದ್ದನು. ಇದನ್ನು ಗಮನಿಸಿದ ಪೊಲೀಸರು ಕೆಸರಿನಲ್ಲಿಯೇ ಆತನಿರುವ ಸ್ಥಳಕ್ಕೆ ಹೋಗಿ ಮುಳುಗಿದ್ದ ವ್ಯಕ್ತಿಯನ್ನು ಸ್ಥಳೀಯರ ಸಹಾಯದೊಂದಿಗೆ ಮೇಲಕ್ಕೆ ಎತ್ತಿ  ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಅಪಘಾತ; ಒಂದೇ ಕುಟುಂಬದ 7 ಮಂದಿ ಸಾವು, 25 ಜನರಿಗೆ ಗಾಯ!

ಇನ್ನು ಕೆಸರಿನಲ್ಲಿ ಸಂಪೂರ್ಣವಾಗಿ ಮುಳುಗಿ ಉಸಿತರಾಟ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕೂಡಲೇ ತಮ್ಮದೇ ಜೀಪಿನಲ್ಲಿ ಕರೆದೊಯ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆರೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಸಮಯ ಪ್ರಜ್ಞೆ ಮೂಲಕ ಕಾಪಾಡಿದ ಪೊಲೀಸರಿಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಶೋಕ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

click me!