Latest Videos

ಡಿಸಿಎಂ ಡಿ.ಕೆ.ಶಿವಕುಮಾರ ಭೇಟಿಯಾದ ಡಾ.ಪ್ರಭಾಕರ ಕೋರೆ

By Kannadaprabha NewsFirst Published May 24, 2024, 12:41 PM IST
Highlights

ರಾಯಬಾಗ ತಾಲೂಕಿನ ದಿಗ್ಗೇವಾಡಿ ಹಾಗೂ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಮ್ ಬ್ಯಾರೇಜ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಬಾಕಿ ಉಳಿದ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು.  ಈ ಬ್ಯಾರೆಜ್‌ ಮೇಲೆ ರಸ್ತೆ ನಿರ್ಮಾಣ ಕಾಮಗಾರಿಯು ತ್ವರಿತವಾಗಿ ನಡೆಯಲು ಕ್ರಮಕೈಗೊಳ್ಳುವಂತೆ ಡಿಸಿಎಂ ಶಿವಕುಮಾರಗೆ ಮನವಿ ಮಾಡಿದ ಡಾ.ಕೋರೆ 

ಬೆಳಗಾವಿ(ಮೇ.24):  ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿ ಗುರುವಾರ ಭೇಟಿಯಾಗಿ ಚರ್ಚಿಸಿದರು. 

ಈ ಸಮಯದಲ್ಲಿ ರಾಯಬಾಗ ತಾಲೂಕಿನ ದಿಗ್ಗೇವಾಡಿ ಹಾಗೂ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಮ್ ಬ್ಯಾರೇಜ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಬಾಕಿ ಉಳಿದ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು. 

ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆ: ಶಾಸಕ ಲಕ್ಷ್ಮಣ ಸವದಿ ಲೇವಡಿ

ಈ ಬ್ಯಾರೆಜ್‌ ಮೇಲೆ ರಸ್ತೆ ನಿರ್ಮಾಣ ಕಾಮಗಾರಿಯು ತ್ವರಿತವಾಗಿ ನಡೆಯಲು ಕ್ರಮಕೈಗೊಳ್ಳುವಂತೆ ಡಾ.ಕೋರೆ ಅವರು ಡಿಸಿಎಂ ಶಿವಕುಮಾರಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿ ಸಮಾಲೋಚಿಸಿದ ಡಿಸಿಎಂ ಶೀಘ್ರವಾಗಿ ಕ್ರಮಗೊಳ್ಳಲಾಗುವುದೆಂದು ತಿಳಿಸಿದರು.

click me!