ಚಿಕ್ಕಮಗಳೂರಿನಲ್ಲೇ ಮತ ಟ್ಯಾಂಪರಿಂಗ್ ಆರೋಪಕ್ಕೆ ಭಾರಿ ಪುಷ್ಠಿ ಸಿಕ್ಕಿದೆ. ಹೈಕೋರ್ಟ್ ಸೂಚನೆಯಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತ ಮರು ಎಣಿಕೆ ಮಾಡಲಾಗಿದೆ. 1822 ಅಂಚೆ ಮತಗಳನ್ನ ಮರು ಪರಿಶೀಲನೆ ಮಾಡಲಾಗಿದೆ. 2023ರ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾದ್ 692 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ 569 ಮತ ಪಡೆದಿದ್ದರು. ಇದೀಗ 2026ರ ಮರು ಎಣಿಕೆಯಲ್ಲಿ 690 ಮತ (2 ಮತ ಕಡಿಮೆ) ರಾಜೇಗೌಡ 314 ಮತ (255 ಮತ ಕಡಿಮೆ) ಪಡೆದಿದ್ದಾರೆ.

10:24 AM (IST) May 03
ಬೆಂಗಳೂರಿಗೆ ಬೆಲೆ ಏರಿಕೆ ಶಾಕ್, ಹೊಟೆಲ್‌ಗಳಲ್ಲಿ ಕಾಫಿ ತಿಂಡಿಗಳ ಬೆಲೆ ಹೆಚ್ಚಳ, ಹಲವು ಹೊಟೆಲ್‌ಗಳಲ್ಲಿ ಈಗಾಗಲೇ ಹೊಸ ದರ ಜಾರಿಗೆ ಬಂದಿದೆ. ಟೀ ಹಾಗೂ ಕಾಫಿ ದರ ಇದೀಗ ಬಲು ದುಬಾರಿಯಾಗಿದೆ.
09:59 AM (IST) May 03
ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಹಳಿಯಾಳದ ದುಸಗಿ ಗ್ರಾಮದ ಸರ್ಕಾರಿ ಗೋಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸೋಲಾರ್ ವಿದ್ಯುತ್ ಸೌಲಭ್ಯ, ₹75 ಲಕ್ಷ ವೆಚ್ಚದ ನೂತನ ಆಶ್ರಯ ತಾಣ ಶಿಲಾನ್ಯಾಸ ನೆರವೇರಿಸಿ, ಗೋವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
09:23 AM (IST) May 03
ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು, ಘಟನೆಯಲ್ಲಿ 9 ವರ್ಷದ ಬಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಇಂದು ಬೆಳಗ್ಗೆ ನಡೆದ ಘಟನೆಗೆ ಆತಂಕ ತರಿಸಿದೆ.
08:57 AM (IST) May 03
ಹೇಳದೆ ಬೈಕ್ ತೆಗೆದುಕೊಂಡ ಹೋದ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ, ಬೆಂಗಳೂರಲ್ಲಿ ಘಟನೆ ನಡೆದಿದೆ. ಅಪ್ಪ ಹಾಗೂ ಮಗ ಇಬ್ಬರು ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾಗಿದ್ದಾರೆ.
08:55 AM (IST) May 03
ಬೆಂಗಳೂರಿನ ಜೆ.ಪಿ.ನಗರದಲ್ಲಿ ಕೋಟ್ಯಂತರ ರು. ಮೌಲ್ಯದ ಬಿಡಿಎ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಮಾಜಿ ಕೆಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಎಲ್.ಸಿ.ನಾಗರಾಜ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
08:35 AM (IST) May 03
ಬೆಂಗಳೂರಲ್ಲಿ ಇನ್ನು ಏರ್ ಶೋ ನಡೆಯಲ್ಲ, ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಲು ನಿರ್ಧಾರ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಭೂಮಿ ಅರಣ್ಯ ಇಲಾಖೆಯದ್ದು ಎಂದಿದ್ದಾರೆ.
08:31 AM (IST) May 03
08:11 AM (IST) May 03
Breaking News ಐಪಿಎಲ್ ಕ್ರಿಕೆಟ್ ಮೇಲೆ ಮತ್ತೆ ಬೆಟ್ಟಿಂಗ್ ಭೂತ,ಬೆಳಗಾವಿ ಕುಖ್ಯಾತ ಬುಕ್ಕಿ ಅರೆಸ್ಟ್ ಆಗಿದ್ದಾನೆ. ರಾಜಸ್ಥಾನ ರಾಯಲ್ಸ್ ಹಾಗೂ ಡಿಸಿ ಪಂದ್ಯದ ನಡುವೆ ಬೆಟ್ಟಿಂಗ್ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
07:30 AM (IST) May 03
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಡಿಸಿಎಂ ಪಟ್ಟಣಕ್ಕೆ ಆಗಮಿಸಲಿದ್ದು, ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
07:17 AM (IST) May 03
ರಾಜೇಗೌಡರಿಗೆ ಬಿದ್ದ 318 ಮತಗಳು ಮರು ಎಣಿಕೆಯಲ್ಲಿ ಅಸಿಂಧು ಎಂದು ಘೋಷಣೆ ಮಾಡಲಾಗಿದೆ. ಎಲ್ಲಾ ವರದಿಗಳನ್ನು ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹೇಳಿದ್ದಾರೆ.