ಉಡುಪಿಯಲ್ಲಿ ಅಪಘಾತ ಹೆಚ್ಚಳ : ಪ್ರತಿ ಮೂರು ದಿನಕ್ಕೆ ಇಬ್ಬರ ಸಾವು

By Sathish Kumar KH  |  First Published Jun 25, 2023, 8:51 PM IST

ಉಡುಪಿ ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದ್ದು, ಪ್ರತಿ ಮೂರು ದಿನಗಳಲ್ಲಿ ತಲಾ ಇಬ್ಬರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. 


ಉಡುಪಿ (ಜೂ.25): ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 19 ಅಪಘಾತ ಪ್ರದೇಶಗಳನ್ನು (Highway black spots) ಗುರುತಿಸಲಾಗಿದ್ದು, ಈ ವರ್ಷದ ಜನವರಿ 1 ರಿಂದ ಜೂ.15ರವರೆಗೆ ಅಪಘಾತದಲ್ಲಿ 120 ಮಂದಿ  ಸಾವನ್ನಪ್ಪಿದ್ದಾರೆ. ಅಂದರೆ, ಪ್ರತಿ ಮೂರು ದಿನಕ್ಕೆ ತಲಾ ಇಬ್ಬರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. 

ಈ ಬಗ್ಗೆ  ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ, ಪೋಲಿಸ್ ಇಲಾಖೆ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾರಿಗೆ (ಆರ್‌ಟಿಒ) ಇಲಾಖೆ ಅಧಿಕಾರಿಗಳು ಜಂಟಿಯಾಗಿ ವೈಜ್ಞಾನಿಕ ತನಿಖಾ ವರದಿಯನ್ನು ತಯಾರಿಸುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 19 ಅತ್ಯಂತ ಅಪಾಯಕಾರಿ ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಅಪಘಾತ ನಿಯಂತ್ರಣಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ಇಲಾಖೆಯಿಂದ ತೆಗೆದುಕೊಂಡ ಸುಧಾರಣಾ ಕ್ರಮಗಳು ಕೂಡ ಅಪಘಾತ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿವೆ. 

Latest Videos

undefined

ಪ್ರೀತಿ ಹೆಸರಲ್ಲಿ ಹಣ ದೋಚಿದ ಪ್ರಿಯತಮೆ: ಪ್ರಿಯಕರನಿಗೆ 21 ಲಕ್ಷ ರೂ. ಪಂಗನಾಮ

ರಸ್ತೆಯಲ್ಲಿನ ದೋಷಗಳ ಪತ್ತೆ:  ಇಂಜಿನಿಯರಿಂಗ್ ದೋಷಗಳು, ತಾಂತ್ರಿಕ ದೋಷಗಳು, ಚಾಲಕನ ದೋಷಗಳನ್ನು ಗುರುತಿಸಿ ಅದಕ್ಕೆ ಪರಿಹಾರವನ್ನು ಸೂಚಿಸಿ ವರದಿಯನ್ನು ತಯಾರಿಸಲಾಗುತ್ತದೆ. ಕಳೆದ ಐದು ತಿಂಗಳ ಹಿಂದೆ ಜಿಲ್ಲೆಯ ಕಟಪಾಡಿ ಮತ್ತು ಕೋಟ ಜಂಕ್ಷನ್ ಗಳಿಗೆ ಭೇಟಿ ನೀಡಿದ್ದು, ಕೋಟ ಜಂಕ್ಷನ್ ನ 50 ಮೀ ಹಿಂಭಾಗದಲ್ಲಿ ಬಿಳಿ ಬಣ್ಣದಲ್ಲಿ ದಪ್ಪವಾಗಿ ಹೆದ್ದಾರಿಗೆ ಪೇಂಟ್ ಮಾಡಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ಕಟಪಾಡಿಯಿಂದ ಶಿರ್ವಕ್ಕೆ ತೆರಳುವ ರಸ್ತೆಯಲ್ಲಿ ಡಿವೈಡರ್ ಗಳನ್ನು ಸ್ಥಾಪಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕಳೆದ ಐದು ತಿಂಗಳಲ್ಲಿ ಯಾವುದೇ ಅಪಘಾತಗಳು ಸಂಭವಿಸಿಲ್ಲ ಎಂದರು. 

ಶಾಲಾ ಸೆಕೂಟಿರಿ ಗಾರ್ಡ್‌ಗಳಿಗೆ ಟ್ರಾಫಿಕ್ ತರಬೇತಿ: 
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಒಳಗೊಂಡಂತೆ ರಸ್ತೆಯ ಪಕ್ಕದಲ್ಲಿರುವ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಶಾಲಾ ಮಕ್ಕಳು ಶಾಲೆಗೆ ಬರುವ ವೇಳೆ ಮತ್ತು ತೆರಳುವ ವೇಳೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲೆಯ ಕಾವಲುಗಾರರೇ (ಸ್ಕೂಲ್‌ ಸೆಕ್ಯೂರಿಟಿ ಗಾರ್ಡ್‌) ತಾತ್ಕಾಲಿಕ ಟ್ರಾಫಿಕ್ ಪೋಲಿಸ್ ರಾಗಿ ಕರ್ತವ್ಯ ನಿರ್ವಹಿಸಲು ಜೂನ್ 26 ರಿಂದ ಪೋಲಿಸ್ ಇಲಾಖೆ ವತಿಯಿಂದ ತರಬೇತಿ ಆರಂಭಿಸಲಾಗುತ್ತದೆ ಎಂದರು.

ಅಪಘಾತಗಳ ವಿವರ

  • 2021ರ ಅಪಘಾತದ ಅಂಕಿ- ಅಂಶಗಳು: 
  • ಒಟ್ಟು ಅಪಘಾತಗಳ ಸಂಖ್ಯೆ - 1,010 
  • ಗಾಯಾಳು ಸಂಖ್ಯೆ - 1,356
  • ಮೃತರ ಸಂಖ್ಯೆ - 189
  • ಅತೀ ವೇಗದ ಚಾಲನೆ ಅಪಘಾತ - 866
  • ಅತೀ ವೇಗದ ಚಾಲನೆ ಮೃತರ ಸಂಖ್ಯೆ - 183
  • ವಿರುದ್ದ ದಿಕ್ಕಿನಲ್ಲಿ ಚಲಾಯಿಸಿ ಅಪಘಾತ - 14

ತವರಿನಲ್ಲೇ ಸೊರಗಿದ ಕಾವೇರಿ: ಕೃಷಿ ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಸಂಕಷ್ಟ

2022ರ ಅಪಘಾತದ ಅಂಕಿ- ಅಂಶಗಳು: 
ಒಟ್ಟು ಅಪಘಾತಗಳ ಸಂಖ್ಯೆ - 1,232
ಗಾಯಾಳು ಸಂಖ್ಯೆ - 1,720
ಮೃತರ ಸಂಖ್ಯೆ - 234
ಅತೀ ವೇಗದ ಚಾಲನೆ ಅಪಘಾತ - 1,098
ಅತೀ ವೇಗದ ಚಾಲನೆ ಮೃತರ ಸಂಖ್ಯೆ - 232
ವಿರುದ್ದ ದಿಕ್ಕಿನಲ್ಲಿ ಚಲಾಯಿಸಿ ಅಪಘಾತ - 35
ವಿರುದ್ದ ದಿಕ್ಕಿನಲ್ಲಿ ಚಲಾಯಿಸಿ ಮೃತರ ಸಂಖ್ಯೆ - 3

  • 2023ರ ಜ.1ರಿಂದ ಜೂ.15ರವರೆಗೆ ಅಪಘಾತ ಪ್ರಮಾಣ
  • ಒಟ್ಟು ಅಪಘಾತಗಳ ಸಂಖ್ಯೆ - 566
  • ಒಟ್ಟು ಆಸ್ಪತ್ರೆಗೆ ದಾಖಲಾದ ಗಾಯಾಳು - 883
  • ಅಪಘಾತದಲ್ಲಿ ಮೃತರ ಸಂಖ್ಯೆ - 120
click me!