
ಬೆಂಗಳೂರು(ಮೇ. 12) ಕೊರೋನಾ ಸಂದರ್ಭದ ಬೆಡ್ ಬ್ಲಾಕಿಂಗ್ ದಂಧೆಯ ತನಿಖಾ ವರದಿಯನ್ನು ಹೈಕೋರ್ಟ್ ಪರಿಶೀಲಿಸಿದೆ. ಈ ಪ್ರಕರಣ ಗಂಭೀರವಾಗಿದ್ದು ಅನುಭವಿ ಐಪಿಎಸ್ ಅಧಿಕಾರಿ ಪ್ರಕರಣದ ವಿಚಾರಣೆ ನಡೆಸಬೇಕು. ಸೈಬರ್ ತಜ್ಞರು ಇರಬೇಕು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಆಸ್ಪತ್ರೆಗಳ ಬೆಡ್ ಬ್ಲಾಕ್ ಮಾಡಿಕೊಂಡು ಅದನ್ನು ದುಬಾರಿ ದರಕ್ಕೆ ಮಾರುತ್ತಿದ್ದ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗ ಮಾಡಿದ್ದರು. ಇದಾದ ಮೇಲೆ ತಂತ್ರಜ್ಞಾನ ಅಭಿವೃದ್ಧಿ ಮಾಡಿ ಹಲವು ಬದಲಾವಣೆಗಳನ್ನು ತಂದಿದ್ದರು.
ಲಸಿಕೆ ಸಿಗಲು ಇನ್ನೆಷ್ಟು ದಿನ ಕಾಯಬೇಕು?
ಬೆಡ್ ಬುಕಿಂಗ್ ಪ್ರಕರಣ ಏನಾಗಿದೆ? ವಿಚಾರಣೆ ವರದಿ ಏನು? ಎಂಬ ಎಲ್ಲ ಮಾಹಿತಿಯನ್ನು ನೀಡಬೇಕು. ಸರ್ಕಾರ ಇಂಥ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದದನ್ನು ಕಲಿಯಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
"