* ಪತ್ರಕರ್ತ, ಕೊರೋನಾ ವಾರಿಯರ್ ನಿಧನ
* ಖಾಸಗಿ ವಾಹಿನಿಯ ಕ್ಯಾಮರಾಮೆನ್ ಆಗಿದ್ದರು
* ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಸವರಾಜ್ ಕೋಟಿ
* ಮಾಧ್ಯಮ ಪ್ರತಿನಿಧಿಗಳೆ ದಯವಿಟ್ಟು ನಿಮ್ಮ ಎಚ್ಚರಿಕೆಯಲ್ಲಿರಿ
ಚಿತ್ರದುರ್ಗ (ಮೇ 12) ರಕ್ಕಸ ಕೊರೋನಾ ಮಾಧ್ಯಮ ಪ್ರತಿನಿಧಿಗಳ ಜೀವ ಬಲಿಪಡೆಯುತ್ತಿದೆ. ಪಬ್ಲಿಕ್ ಟಿವಿಯ ಚಿತ್ರದುರ್ಗದ ಕ್ಯಾಮರಾಮನ್, ಕೊರೊನಾ ಫ್ರಂಟ್ ಲೈನ್ ವಾರಿಯರ್ ಬಸವರಾಜ್ ಕೋಟಿ (35) ಮಾಧ್ಯಮ ಲೋಕ ಅಗಲಿದ್ದಾರೆ.
ಒಂದು ವಾರದಿಂದ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಮಾಧ್ಯಮ ವೃಂದ ಮತ್ತು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
undefined
ಕೊರೋನಾ ಭಯಕ್ಕೆ ರೈಲಿಗೆ ತಲೆಕೊಟ್ಟ ದಾವಣೆಗೆ ಪತ್ರಕರ್ತ
ಪತ್ರಕರ್ತ ಬಸವರಾಜ್ ಕೋಟಿ ಅವರ ಕುಟುಂಬಕ್ಕೆ ನೆರವು ನೀಡಬೇಕು ಎಂದು ಅವರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಾಲತೇಶ್ ಅರಸ್ ರಾಜ್ಯ ಸಮಿತಿ ಸದಸ್ಯರಾದ ಅರುಣ್ ಕುಮಾರ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್, ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೌಡಗೆರೆ ದಿನೇಶ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಧಾರವಾಡ ಮೂಲದ ಬಸವರಾಜ್ ಕೋಟಿ ಕೆಲಸ ಅರಸಿಕೊಂಡು ಚಿತ್ರದುರ್ಗಕ್ಕೆ ಬಂದಿದ್ದರು. ಇಬ್ಬರು ಮಕ್ಕಳು ಹಾಗೂ ಪತ್ನಿ ಇದ್ದು ಮಾಧ್ಯಮ ಲೋಕವನ್ನು ಅಗಲಿದ್ದಾರೆ. ಕಳೆದ ಒಂದು ವರಷ್ದ ಅವಧಿಯಲ್ಲಿ ನೂರಕ್ಕೂ ಅಧಿಕ ಪತ್ರಕರ್ತರು ಕೊರೋನಾಕ್ಕೆ ಬಲಿಯಾಗಿರುವುದು ದೇಶದ ಲೆಕ್ಕ.