ಬಿಬಿಎಂಪಿಯಿಂದ 24 ಗಂಟೆಯೂ ಚಿತಾಗಾರ ಸೇವೆ: ಸಹಾಯವಾಣಿ ಪ್ರಕಟ

By Suvarna News  |  First Published May 12, 2021, 6:30 PM IST

* ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಹಿನ್ನಲೆ
* ಬಿಬಿಎಂಪಿಯಿಂದ 24 ಗಂಟೆಯೂ  ಚಿತಾಗಾರ ಸೇವೆ 
* ಗೌರವ ಪೂರ್ವಕ ಅಂತ್ಯ ಸಂಸ್ಕಾರಕ್ಕಾಗಿ ಸಹಾಯವಾಣಿ ಪ್ರಕಟಿಸಿದ ಬಿಬಿಎಂಪಿ


ಬೆಂಗಳೂರು, (ಮೇ.12): ಕೊರೋನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 

ಸೂಕ್ತ ಸಮಯಕ್ಕೆ ಆಕ್ಸಿಜನ್, ಬೆಡ್ ಹಾಗೂ ಔಷಧಿ ಸಿಗದೇ  ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, ಮೃತಪಟ್ಟವರ ಅಂತ್ಯಕ್ರಿಯೆಗೂ ಚಿತಾಗಾರ ಸಮಸ್ಯೆ ಎದುರಾಗಿದೆ.

Latest Videos

undefined

ಬೆಂಗ್ಳೂರಲ್ಲಿ ಕಂಟ್ರೋಲ್‌ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..!

ಬೆಂಗಳೂರಿನಲ್ಲಿ ಈಗಾಗಲೇ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂಕ್ತ ಜಾಗದ ವ್ಯವಸ್ಥೆ ಮಾಡಿದೆ. ಈಗ ಬಿಬಿಎಂಪಿಯಿಂದ 24 ಗಂಟೆಯೂ  ಚಿತಾಗಾರ ಸೇವೆ ಇರಲಿದೆ.

ಕೋವಿಡ್-19 ಮತ್ತು ಇನ್ನಿತರ ಕಾರಣಗಳಿಂದ ಮೃತಪಟ್ಟವರ ಗೌರವ ಪೂರ್ವಕ ಅಂತ್ಯ ಸಂಸ್ಕಾರಕ್ಕಾಗಿ ಬಿಬಿಎಂಪಿ ಸಹಾಯವಾಣಿ ಪ್ರಕಟಿಸಿದ್ದು, ಅಂತ್ಯಸಂಸ್ಕಾರ ಮಾಡಲು ಏನಾದ್ರೂ ಸಮಸ್ಯೆ ಎದುರಾದ್ರೆ, 8495998495 ಈ ಸಹಾಯವಾಣಿ ಸಂಖ್ಯೆಗೆ ಕರೆಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.

click me!