‘ಆರೋಗ್ಯ ಸಚಿವನಾಗಿ ಎಷ್ಟು ದಿನ ಇರ್ತಿನೋ ಗೊತ್ತಿಲ್ಲ‌, ಇದೊಂದು ಕೆಲಸ ಮಾಡೇ ಮಾಡ್ತಿನಿ’

By Web Desk  |  First Published Sep 26, 2019, 11:23 PM IST

ಮಡಿಕೇರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವರ ವಾಸ್ತವ್ಯ/ ರೋಗಿಗಳ ಯೋಗ ಕ್ಷೇಮ ವಿಚವಾರಿಸಿದ ಸಚಿವರು/ ಸರ್ಕಾರಿ ಆಸ್ಪತ್ರೆಗಳನ್ನ ಸುಧಾರಿಸುವ ಸಂಕಲ್ಪ ಮಾಡಿದ್ದೇನೆ.


ಕೊಡಗು[ಸೆ. 26] ನಾನು ಆರೋಗ್ಯ ಸಚಿವನಾಗಿ ಎಷ್ಟು ದಿನ ಇರ್ತಿನೋ ಗೊತ್ತಿಲ್ಲ‌. ಸರ್ಕಾರಿ ಆಸ್ಪತ್ರೆಗಳನ್ನ ಸುಧಾರಿಸುವ ಸಂಕಲ್ಪ ಮಾಡಿದ್ದೇನೆ. ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಸೇವೆ ಮಾಡೊದನ್ನ ನಿಲ್ಲಿಸಲಿ. ನಿಮಗೆ ಸರಿಯಾಗಿ ಕೆಲಸ ಮಾಡಲು ಆಗಲಿಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಯುವಕರು ಸಾಕಷ್ಟು ಓದಿದ್ದಾರೆ ಅವರಾದ್ರೂ ಕೆಲಸ ಮಾಡ್ತಾರೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ. ಕಾರ್ಪೋರೇಟ್ ಸೆಕ್ಟರ್ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಆಗಬೇಕು ಅನ್ನೋದೆ ನನ್ನ ಗುರಿ. ಸರ್ಕಾರಿ ಆಸ್ಪತ್ರೆಗಳನ್ನ ಶುಚಿಯಾಗಿಡಲು ಟೆಂಡರ್ ಮೂಲಕ ನಿರ್ವಹಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

Tap to resize

Latest Videos

ಆಸ್ಪತ್ರೆಗಳಲ್ಲಿರೋ  ವೈದ್ಯರ ಕೊರೆತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತೆ. ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳು ವೈದ್ಯರನ್ನ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ‌ಮ ಎಂದು ಸಚಿವರು ತಿಳಿಸಿದರು. ಒಂದೊಂದು ದಿನ ಒಂದೊಂದು ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುವ ನಿರ್ಧಾರ ಮಾಡಿರುವ ಶ್ರೀರಾಮುಲು ಚಾಮರಜನಾಗರ ನಂತರ ಇದೀಗ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

‘ಜೀವಕ್ಕೆ ಬೆಲೆ ಕಟ್ಟಲಾಗದು. ಆಪತ್ಕಾಲದಲ್ಲಿ ಹೆಣ್ಣುಮಗಳ ಜೀವ ರಕ್ಷಿಸಿ ಧನ್ಯನಾದೆ‘

‘ಚಾಮರಾಜನಗರಿಂದ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿಯ ಮನೆಯೊಂದರ ಬಳಿ ಮಹಿಳೆಯೊಬ್ಬರು ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿ ನನ್ನದೇ ವಾಹನದಲ್ಲಿ ಆಕೆಯನ್ನು ಮಲೆ ಮಹದೇಶ್ವರದ ಆಸ್ಪತ್ರೆಗೆ ಕಳುಹಿಸಿಕೊಟ್ಟು ಚಿಕಿತ್ಸೆ ಕೊಡಿಸಿದೆ. ಬೆಟ್ಟದಿಂದ ವಾಪಸಾಗುವಾಗ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ. ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವನಾಗಿ ಅಲ್ಲದೇ ಇದ್ದರೂ ಒಬ್ಬ ಸಾಮಾನ್ಯನಾಗಿ ಇನ್ನೊಬ್ಬರ ಪ್ರಾಣ ಉಳಿಸಿದ್ದಕ್ಕಿಂತ ಸಮಾಧಾನದ ಸಂಗತಿ ಇನ್ನೇನಿದೆ?

ನಾನೇನೋ ದೊಡ್ಡ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರಿಗೂ ಮಾನವೀಯ ಕಳಕಳಿ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂಬುದು ನನ್ನ ಆಶಯ’

ಹೀಗೆಂದು ಬರೆದುಕೊಂಡಿದ್ದ ಆರೋಗ್ಯ ಸಚಿವರು ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ಮಹಿಳೆಯನ್ನು ಮಲೆಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ಸೇರಿಸಿದ ಘಟನೆಯ ವಿವರ ತಿಳಿಸಿದ್ದಾರೆ.

click me!