ಕೊಟ್ಟೂರಿನಲ್ಲಿ ಪಾರಿವಾಳಕ್ಕೂ ಟಿಕೆಟ್ ಕೊಟ್ಟ ಬಸ್ ಕಂಡಕ್ಟರ್| ವಿದ್ಯಾರ್ಥಿಯ ಉದ್ದಟತನಕ್ಕೆ ತಕ್ಕ ಉತ್ತರ ಕೊಟ್ಟ ನಿರ್ವಾಹಕ| ನಿರ್ವಾಹಕನ ಅನಿರೀಕ್ಷಿತ ನಡೆಗೆ ವಿದ್ಯಾರ್ಥಿ ಶಾಕ್
ಬಳ್ಳಾರಿ[ಸೆ.26]: ಬಸ್‌ನಲ್ಲಿ ಪ್ರಯಾಣಿಸುವಾಗ ಪ್ರಾಣಿಗಳನ್ನು ಒಯ್ಯುವಂತಿಲ್ಲ ಇದು ನಿಯಮ. ಹೀಗಿದ್ದರೂ ಅನೇಕರು ಈ ನಿಯಮವನ್ನು ಗಾಳಿಗೆ ತೂರಿ ಸಾಕು ಪ್ರಾಣಿಗಳನ್ನು ಸಾರಿಗೆ ವಾಹನದಲ್ಲಿ ಕರೆದೊಯ್ಯುತ್ತಾರೆ. ಆದರೀಗ ಇದೇ ರೀತಿ ಪಾರಿವಾಳವನ್ನು ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದ ವಿದ್ಯಾರ್ಥಿ ಗೆ ಬಸ್ ಕಂಡಕ್ಟರ್ ಶಾಕ್ ನೀಡಿದ್ದಾರೆ.
ಹೌದು ಬಳ್ಳಾರಿಯ ಕೊಟ್ಟೂರಿನಲ್ಲಿ ವಿಚಿತ್ರ ಪ್ರಕರಣ ನಡೆದಿದ್ದು, ವಿದ್ಯಾರ್ಥಿಯೊಬ್ಬ ಬಸ್‌ನಲ್ಲಿ ಪ್ರಯಾಣಿಸುವಾಗ ತನ್ನೊಂದಿಗೆ ಪಾರಿವಾಳವನ್ನೂ ಕರೆತಂದಿದ್ದ. ಇದನ್ನು ಗಮನಿಸಿದ ಕಂಡಕ್ಟರ್ ಪಾರಿವಾಳಕ್ಕೂ ಟಿಕೆಟ್ ನೀಡಿದ್ದಾರೆ.
ನಿಂಬಳಗೆರೆಯಿಂದ ಕೊಟ್ಟೂರಿಗೆ ಹೊರಟಿದ್ದ ಬಸ್ ಹತ್ತಿದ್ದ ವಿದ್ಯಾರ್ಥಿ ಕೈಯ್ಯಲ್ಲಿ ಪಾರಿವಾಳ ಇರುವುದನ್ನು ಗಮನಿಸಿದ ನಿರ್ವಾಹಕ ಏನನ್ನೂ ಮಾತನಾಡದೇ 5ರೂ. ಟಿಕೆಟ್ ಹರಿದು ನೀಡಿದ್ದಾರೆ.
ನಿರ್ವಾಹಕನ ಈ ಅನಿರೀಕ್ಷಿತ ನಡೆ ವಿದ್ಯಾರ್ಥಿ ಸೇರಿದಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಅಚ್ಚರಿಗೀಡು ಮಾಡಿದೆ.