
ಬೆಂಗಳೂರು: ಉಪ್ಪು ಮನುಷ್ಯನ ಆರೋಗ್ಯಕ್ಕೆ ಅತ್ಯಗತ್ಯವಾದ ವಸ್ತು ಆಗಿದ್ದರು, ಇದರ ಅತಿಯಾದ ಬಳಕೆಯಿಂದ ಅನಾರೋಗ್ಯ ಸಮಸ್ಯೆಗಳು ಉದ್ಭವಿಸಲಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನ ಅತಿಯಾದ ಸೇವನೆ ತಪ್ಪಿಸಲು, ಕರ್ನಾಟಕ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಸಾರ್ವಜನಿಕರಿಗೆ, ಶಾಲೆಗಳಿಗೆ, ಹೋಟೆಲ್ ರೆಸ್ಟೋರೆಂಟ್, ಆಹಾರ ಪ್ಯಾಕೇಜ್ಡ್ ತಯಾರಕರಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ನೀಡಿದ್ದು, ಉಪ್ಪು ಬಳಕೆ ಮತ್ತು ಸೇವನೆ ಸಂಬಂಧ ವಿವರಣೆಗಳನ್ನು ನೀಡಿದೆ. ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣ ಹೆಚ್ಚಳ ಆಗಲಿದೆ. ಆದ್ದರಿಂದ ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡಬೇಕು ಆದರೆ ಅತಿಯಾದ ಸೇವನೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
1. ಸರ್ಕಾರದ ಉಪ್ಪು ಕಡಿತ ಪ್ರಯತ್ನಕ್ಕೆ ಬೆಂಬಲ ನೀಡಿ.
2. Low-sodium ಅಥವಾ iodised low-sodium ಉಪ್ಪಿನ ಬದಲಿ ತಯಾರಿಸಲು ಪ್ರಯತ್ನಿಸಿ.
3. Low-sodium ಉಪ್ಪು ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.
4. ಉತ್ಪನ್ನದ ಸಂಯೋಜನೆ, ಬಳಕೆ ಮತ್ತು ಮುನ್ನೆಚ್ಚರಿಕೆಗಳನ್ನು ಲೇಬಲ್ ನಲ್ಲಿ ಸ್ಪಷ್ಟವಾಗಿ ನಮೂದಿಸಿ.
5. ಗುಣಮಟ್ಟ ನಿಯಂತ್ರಣ ಕ್ರಮ ಕೈಗೊಳ್ಳಿ.
6. ಆರೋಗ್ಯ ಇಲಾಖೆ ಮತ್ತು FSSAI ಜೊತೆ ಸಹಕರಿಸಿ.
1. ತಮ್ಮ ಉತ್ಪನ್ನಗಳಲ್ಲಿ ಉಪ್ಪು / ಸೋಡಿಯಂ ಅಂಶವನ್ನು ಹಂತ ಹಂತವಾಗಿ ಕಡಿಮೆ ಮಾಡಿ.
2. ಆಹಾರ ಸುರಕ್ಷತೆ, ಗುಣಮಟ್ಟಕ್ಕೆ ಧಕ್ಕೆ ಬಾರದೆ ಉಪ್ಪು ಕಡಿಮೆ ಮಾಡಬಹುದಾದ ಉತ್ಪನ್ನಗಳನ್ನು ಗುರುತಿಸಿ.
3. ಸೋಡಿಯಂ ಬದಲಿಗೆ ತಾಂತ್ರಿಕವಾಗಿ ಸಾಧ್ಯವಿರುವ ಪರ್ಯಾಯಗಳನ್ನು ಬಳಸಿ.
4. ಲೇಬಲ್ ನಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ.
5. FSSAI ಮಾನದಂಡಗಳನ್ನು ಪಾಲಿಸಿ.
1 ಅಡುಗೆಯಲ್ಲಿ ಉಪ್ಪನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿ.
2. ಅಡುಗೆಯವರಿಗೆ ಕಡಿಮೆ ಉಪ್ಪಿನ ಅಡುಗೆ ಬಗ್ಗೆ ತರಬೇತಿ ನೀಡಿ.
3. ಅನಗತ್ಯವಾಗಿ ಉಪ್ಪು ಹಾಕುವುದನ್ನು ತಪ್ಪಿಸಿ.
4. ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ.
5. ಆರೋಗ್ಯಕರ ಮತ್ತು ಕಡಿಮೆ ಉಪ್ಪಿನ ಆಯ್ಕೆಗಳನ್ನು ನೀಡಿ.
6. "ಉಪ್ಪು ಕಡಿಮೆ ಮಾಡಿ" ಎಂಬ ಸಂದೇಶಗಳನ್ನು ಪ್ರದರ್ಶಿಸಿ.
1. ಉಪ್ಪು ಕಡಿತದ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
2. ತಯಾರಿಕೆ ಮತ್ತು ಬಡಿಸುವಾಗ ಅನಗತ್ಯ ಉಪ್ಪು ಹಾಕಬೇಡಿ.
3. ಸಾಧ್ಯವಾದಷ್ಟು ಕಡಿಮೆ ಉಪ್ಪಿನ ಅಡುಗೆ ಪದ್ಧತಿ ಅಳವಡಿಸಿ.
1. ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಮತ್ತು ಉಪ್ಪು ಕಡಿತದ ಬಗ್ಗೆ ಶಿಕ್ಷಣ ನೀಡಿ.
2. ಶಾಲೆಯಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್ ನಲ್ಲಿ ಉಪ್ಪು ಕಡಿಮೆ ಮಾಡಿ.
3. ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪು ಕಡಿತ ಸಂದೇಶ ಸೇರಿಸಿ.
4. ಪೋಷಕರಿಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಲು ಪ್ರೇರೇಪಿಸಿ.
5. ಅಡುಗೆಯವರು ಮತ್ತು ಆಹಾರ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆ ಬಗ್ಗೆ ತರಬೇತಿ ನೀಡಿ.