ದೇಗುಲಗಳಲ್ಲಿ ಮದುವೆ ನಿಷೇಧವಿಲ್ಲ: ಸ್ಪಷ್ಟನೆ

Published : Nov 20, 2018, 02:46 PM ISTUpdated : Nov 20, 2018, 05:51 PM IST
ದೇಗುಲಗಳಲ್ಲಿ ಮದುವೆ ನಿಷೇಧವಿಲ್ಲ: ಸ್ಪಷ್ಟನೆ

ಸಾರಾಂಶ

ಆಡಂಬರದ ಮದುವೆ ನಮ್ಗೆ ಏಕೆ ಬೇಕಪ್ಪಾ, ದೇವಸ್ಥಾನಗಳಲ್ಲಿ ಸಿಂಪಲ್ ಮ್ಯಾರೇಜ್ ಆದ್ರೆ ಸಾಕು ಅನ್ನೋರಿಗೆ ರಾಜ್ಯ ಮೈತ್ರಿ ಸರ್ಕಾರ  ಶಾಕ್ ಕೊಟ್ಟಿದೆ, ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಸರಕಾರವಿನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬೆಂಗಳೂರು, [ನ.20]: ಮುಜರಾಯಿ ಇಲಾಖೆಗೆ ಸೇರಿದ ದೇಗುಲದಲ್ಲಿ ಮದುವೆ ಸಮಾರಂಭಕ್ಕೆ ಸರ್ಕಾರ ಬ್ರೇಕ್ ಹಾಕಿದೆ ಎನ್ನುವ ಸುದ್ದಿಯೊಂದು ಹರಿದಾಡಿದ್ದು, ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ.

ಮುಜರಾಯಿ ಇಲಾಖೆಗೆ ಒಳಪಡುವ ಬೆಂಗಳೂರಿನ ಎಲ್ಲ ದೇವಾಲಯಗಳಲ್ಲಿ ಇನ್ಮುಂದೆ ಮದುವೆ ಸಮಾರಂಭಗಳನ್ನ ನಿಷೇಧಿಸಿ, ಸರಕಾರ ಆದೇಶಿಸಿದೆ. ಅಲ್ಲದೇ ಈ ದೇವಸ್ಥಾನಗಳಲ್ಲಿ ಮದುವೆ ನಡೆಯಬೇಕಿದ್ದರೂ, ಕೆಲವು ಷರತ್ತುಗಳು ಅನ್ವಯವಾಗಲಿವೆ ಎಂದು ಹೇಳಲಾಗಿತ್ತು.

ಪತಿ ಅಥವಾ ಪತ್ನಿಗೆ ಕೈ ಕೊಟ್ಟು 2ನೇ ವಿವಾಹ, ಬಾಲ್ಯ ವಿವಾಹ, ಕುಟುಂಬದ ಒಪ್ಪಿಗೆ ಇಲ್ಲದ ಮದುವೆಗಳು ಹೆಚ್ಚಾಗಿ ದೇವಸ್ಥಾನಗಳಲ್ಲಿ ನಡೆಯುತ್ತವೆ. ಮದುವೆಯಲ್ಲಿ ಎಡವಟ್ಟಾದರೆ ಅದಕ್ಕೆ ದೇವಸ್ಥಾನದ ಅರ್ಚಕರೇ ಸಾಕ್ಷಿ ಆಗಬೇಕಾಗಿರುವುದರಿಂದ ಅರ್ಚಕರಿಗೆ ಕಾನೂನು ತೊಡಕಾಗುತ್ತದೆ. ಕೋರ್ಟ್, ಕಚೇರಿ ಅಲೆಯಬೇಕಾಗುತ್ತದೆ. ಈ ಕಾರಣದಿಂದ ದೇವಸ್ಥಾನಗಳಲ್ಲಿ ಮದುವೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಅರ್ಚಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅರ್ಚಕರ ಮನವಿ ಬಗ್ಗೆ ಮುಜರಾಯಿ ಇಲಾಖೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದ್ದರಿಂದ ಎಲ್ಲೆಡೆ ಹರಿದಾಡಿದ ಸುದ್ದಿಯಂತೆ ದೇವಸ್ಥಾನದಲ್ಲಿ ಮದುವೆ ನಿಷೇಧವಿಲ್ಲ.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌