ಕೊಟ್ಟ ಹಣ ಹಿಂದಕ್ಕೆ ಬರಲ್ಲವೆಂದು ಬೆಂಗಳೂರಿನ ಇಡೀ ಕುಟುಂಬ ಆತ್ಮಹತ್ಯೆ

Published : Nov 12, 2018, 06:22 PM IST
ಕೊಟ್ಟ ಹಣ ಹಿಂದಕ್ಕೆ ಬರಲ್ಲವೆಂದು ಬೆಂಗಳೂರಿನ ಇಡೀ ಕುಟುಂಬ ಆತ್ಮಹತ್ಯೆ

ಸಾರಾಂಶ

ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಈ ಸುದ್ದಿ ಅದಕ್ಕೆ ವ್ಯತಿರಿಕ್ತ. ಕೊಟ್ಟ ಸಾಲ ವಾಪಸ್ ಬರಲ್ಲ ಎಂಧು ಗೊತ್ತಾಗಿದ್ದೆ  ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ.

ಬೆಂಗಳೂರು[ನ.12]  ಕೊಟ್ಟ ಹಣ  ಹಿಂದಕ್ಕೆ ಬರುವುದಿಲ್ಲ ಎಂಬುದು ಖಾತ್ರಿಯಾದ ನಂತರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ವಿದ್ಯಾರಣ್ಯಪುರದ ದೊಡ್ಡ ಬೊಮ್ಮಸಂದ್ರದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.

ಜನಾರ್ದನ್(52), ಸುಮಿತ್ರ(48), ಸುಧಾರಾಣಿ(29) ಸೋನಿಕಾ(6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮನೆ ತೆಗೆದುಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬರಿಗೆ 25 ಲಕ್ಷ ರೂ. ಸಾಲವನ್ನು ಜನಾರ್ದನ್ ನೀಡಿದ್ದರು. ಹಣ ಪಡೆದ ವ್ಯಕ್ತಿ ಆಕ್ಸಿಡೆಂಟ್ ಒಂದರಲ್ಲಿ ಸಾವನ್ನಪ್ಪಿದ. ಹಣ ಪಡೆದಾತ ಸಾವನ್ನಪ್ಪಿದ್ದರಿಂದ ನಮ್ಮ ಹಣ ವಾಪಸ್ ಬರೋದಿಲ್ಲ ಎಂದು ಅರಿತ ಕುಟುಂಬಸ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡ ಜನಾರ್ದನ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟಲ್ಲಿ ಮನೆ ಖರೀದಿ ಬಗ್ಗೆ ಜನಾರ್ದನ ಬರೆದಿದ್ದಾರೆ. ಎಂಎಸ್ ರಾಮಯ್ಯ ಅಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ.

PREV
click me!

Recommended Stories

ಅರ್ಜಿ ಸಲ್ಲಿಸಿ ಹಣ ಪಾವತಿಸಿದ ನಮಗೂ ಮನೆ ಕೊಡಿ : ಜಿಬಿಎಗೆ ಆಗ್ರಹ
ಸಮಾಜ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯ : ಡಾ.ಸಿ.ಎನ್‌.ಮಂಜುನಾಥ್‌