ಸಿಸಿಬಿ ಮೇಜರ್ ಸರ್ಜರಿಗೆ ಬ್ರೇಕ್? ಯಾರಿದ್ದಾರೆ ಹಿಂದೆ!

By Web DeskFirst Published Nov 16, 2018, 3:53 PM IST
Highlights

ಒಂದು ಕಡೆ ರಾಜ್ಯ ಸರ್ಕಾರ ಕೇಂದ್ರ ಅಪರಾಧ ದಳ(ಸಿಸಿಬಿ) ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೆ ಇದೆ. ವಿಪಕ್ಷ ಬಿಜೆಪಿ ತಮ್ಮ ನಾಯಕರನ್ನೇ ಸಿಸಿಬಿ ಟಾರ್ಗೆಟ್ ಮಾಡುತ್ತಿದೆ ಎಂದು ಹೇಳುತ್ತಿದೆ. ಈ ನಡುವೆ ಸಿಸಿಬಿಯಲ್ಲಿ ಮಾಡಿದ್ದ ಮೇಜರ್ ಸರ್ಜರಿಗೆ ಬ್ರೇಕ್ ಬಿದ್ದಿದೆ.

ಬೆಂಗಳೂರು(ನ.16) ಸಿಸಿಬಿಯ ಮೂವರು ಎಸಿಪಿಗಳ ವರ್ಗಾವಣೆಗೆ ತಡೆ ಬಿದ್ದಿದೆ. ಕೆಲಸದಲ್ಲಿ ಮುಂದುವರೆಯುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿದೆ.

ಸುಬ್ರಹ್ಮಣಿ, ಮರಿಯಪ್ಪ, ಮಂಜುನಾಥ್ ಚೌದರಿಯನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಅಧಿಕಾರಿಗಳು ಮನವಿ ಮಾಡಿದ್ದರು.

ಸ್ನೇಹಿತನೂ ಇಲ್ಲ, ಸಾಂತ್ವನವೂ ಇಲ್ಲ.. ರೆಡ್ಡಿ ಈ ಸ್ಥಿತಿಗೆ ಯಾರು ಕಾರಣ?

ಇನ್ನು ಅಧಿಕೃತ ಆದೇಶ ಹೊರಬಂದಿಲ್ಲ. ಆದರೆ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್ ಬಿದ್ದಿರುವುದು ಪಕ್ಕಾ. ಜನಾರ್ದನ ರೆಡ್ಡಿ ಪ್ರಕರಣದಲ್ಲಿಯೂ ಸಹ ಸಿಸಿಬಿ ಟೀಕೆಗೆ ಗುರಿಯಾಗಿತ್ತು.

ಈಗಿನ ರಾಜ್ಯ ಸರ್ಕಾರ ಸಿಸಿಬಿಯನ್ನು ಮತ್ತು ಹಿಂದಿನ ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿಕೊಂಡೆ ಬಂದಿದೆ.

 

 

 

click me!