
ಗುಂಡ್ಲುಪೇಟೆ (ಆ.18): ನಟ ಗಣೇಶ್ ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಬಳಿ ತಾತ್ಕಾಲಿಕ ವಾಸದ ಮನೆ ಕಟ್ಟಡದ ಬದಲು ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿರ್ವಹಣ ಸಮಿತಿಯ ಷರತ್ತು ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಿಸಿದ್ದೀರಾ ಎಂದು ಬಂಡೀಪುರ ಸೂಕ್ಷ್ಮ ಪರಿಸರ ವಲಯದ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಬೃಹತ್ ಕಟ್ಟಡ ಕಟ್ಟಿರುವ ಸಂಬಂಧ ನಟ ಗಣೇಶ್ ನೋಟಿಸ್ ಜಾರಿ ಮಾಡಿರುವ ಜೊತೆಗೆ ಬಂಡೀಪುರ ಸೂಕ್ಷ್ಮ ಪರಿಸರ ವಲಯದ ನಿರ್ವಹಣ ಸಮಿತಿಯ ಅಧ್ಯಕ್ಷರೂ ಆದ ಮೈಸೂರು ಪ್ರಾದೇಶಿಕ ಆಯುಕ್ತರಿಗೂ ಪತ್ರ ಬರೆದು ತಾತ್ಕಾಲಿಕ ವಾಸದ ಕಟ್ಟಡದ ಬದಲು ಶಾಶ್ವತ ಬೃಹತ್ ಕಟ್ಟಡ ನಿರ್ಮಿಸಿ ಸಮಿತಿ ಷರತ್ತು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಮಿತಿಗೆ ನಟ ಗಣೇಶ್ ನೀಡಿರುವ ಮುಚ್ಚಳಿಕೆ ಪತ್ರದಲ್ಲಿನ ಷರತ್ತು ಉಲ್ಲಂಘಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಲು ನಿಮ್ಮ ನಿರ್ದೇಶನ ನೀಡಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇಲ್ಲ: ಸಿ.ಟಿ.ರವಿ ಸ್ಪಷ್ಟನೆ
ಎಚ್ಚೆತ್ತ ಸಿಎಫ್: ನಟ ಗಣೇಶ್‌ಗೆ ಸೇರಿದ ಜಕ್ಕಹಳ್ಳಿ ಸ.ನಂ.105 ರಲ್ಲಿ 1.24 ಗುಂಟೆ ಜಾಗದಲ್ಲಿ ಶಾಶ್ವತ ಬೃಹತ್ ಕಟ್ಟಡ ನಿರ್ಮಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ದೂರು ಕೇಳಿ ಬಂದ ಹಿನ್ನೆಲೆ ಎಚ್ಚೆತ್ತ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ಕುಮಾರ್ ಪ್ರಾದೇಶಿಕ ಆಯುಕ್ತರೂ ಆದ ಬಂಡೀಪುರ ಸೂಕ್ಷತ್ರ್ಮ ಪರಿಸರ ವಲಯದ ನಿರ್ವಹಣ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದು ನಟ ಗಣೇಶ್‌ಗೂ ನೋಟಿಸ್ ನೀಡಿದ್ದಾರೆ.
ಆರ್‌ಎಪ್‌ಒ, ಎಸಿಎಫ್ ಗಮನಕ್ಕೆ ಬಂದೇ ಇಲ್ಲ!: ನಟ ಗಣೇಶ್ ಬಂಡೀಪುರ ಸೂಕ್ಷತ್ರ್ಮ ಪರಿಸರ ವಲಯದಂಚಿನ ಕೃಷಿ ಭೂಮಿಯಲ್ಲಿ ತಾತ್ಕಾಲಿಕ ವಾಸದ ಮನೆ ನಿರ್ಮಿಸುವ ಸಂಬಂಧ ಕುಂದಕೆರೆ ವಲಯ ಅರಣ್ಯಾಧಿಕಾರಿ ಹಾಗೂ ಗುಂಡ್ಲುಪೇಟೆ ಬಫರ್ ಜೋನ್ ಸಹಾಯಕ ಸಂರಕ್ಷಣಾಧಿಕಾರಿಗಳ ವರದಿಯನ್ನೇ ಪಡೆದಿಲ್ಲ. ಬಂಡೀಪುರ ಸೂಕ್ಷತ್ರ್ಮ ಪರಿಸರ ವಲಯದ ನಿರ್ವಹಣ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್ ನೇರವಾಗಿ ಬಂಡೀಪುರ ಸೂಕ್ಷತ್ರ್ಮ ಪರಿಸರ ವಲಯದ ನಿರ್ವಹಣ ಸಮಿತಿ ಸಭೆಯ ಮುಂದೆ ಇಟ್ಟಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ.
ಶಾಸಕ ಹೆಬ್ಬಾರ್ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್ ಮರಳಿ ಕಾಂಗ್ರೆಸ್‌ಗೆ?
ನಟ ಗಣೇಶ್ ತಾತ್ಕಾಲಿಕ ವಾಸದ ಮನೆ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಬಂಡೀಪುರ ಸೂಕ್ಷತ್ರ್ಮ ಪರಿಸರ ವಲಯದ ನಿರ್ವಹಣ ಸಮಿತಿಯಲ್ಲಿಟ್ಟು ಅನುಮತಿ ಪಡೆಯಲಾಗಿದೆ. ಆದರೆ, ಗಣೇಶ್‌ಗೆ ಸೇರಿದ ಜಮೀನಿನ ವ್ಯಾಪ್ತಿಯ ಕುಂದಕೆರೆ ವಲಯ ಅರಣ್ಯಾಧಿಕಾರಿ ಡಿ.ಶ್ರೀನಿವಾಸ್, ಎಸಿಎಫ್ ಜಿ.ರವೀಂದ್ರ ಗಮನಕ್ಕೆ ಬಂದೇ ಇಲ್ಲ. ಈ ಸಂಬಂಧ ಎಸಿಎಫ್ ಜಿ.ರವೀಂದ್ರ ಹಾಗೂ ಆರ್‌ಎಫ್‌ಒ ಡಿ.ಶ್ರೀನಿವಾಸ್ ಪ್ರಕಾರ ನಟ ಗಣೇಶ್ ಜಮೀನಿನಲ್ಲಿ ತಾತ್ಕಾಲಿಕ ವಾಸದ ಮನೆ ನಿರ್ಮಾಣದ ಸಂಬಂಧ ಯಾವ ಅರ್ಜಿ ಬಂದಿಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ.