ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು,  ಆಮೇಲೆ!

Published : Jan 30, 2019, 06:28 PM ISTUpdated : Jan 30, 2019, 06:34 PM IST
ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು,  ಆಮೇಲೆ!

ಸಾರಾಂಶ

ಮಹಿಳೆಯರೇ ಎಚ್ಚರ ಎಂಬ ಟ್ಯಾಗ್ ಲೈನ್ ಈಗ ಬದಲಾಯಿಸುವ ಕಾಲ ಬಂದಿದೆ. ಬೆಂಗಳೂರು ಎಂಬ ಮಹಾನಗರದಲ್ಲಿ ಯುವಕರು ಸೇಫ್ ಅಲ್ಲ. ಹಾಗಾದರೆ ಏನಿದು ಪ್ರಕರಣ?

ಬೆಂಗಳೂರು[ಜ.30]  ಕ್ಯಾಬ್ ನಲ್ಲಿ ಸಂಚರಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ, ಬಸ್‌ಗೆ ಕಾಯುತ್ತಿದ್ದ ಯುವತಿ ಹೊತ್ತೊಯ್ದ ಕಾಮಾಂಧರು ಎಂಬ ಅನೇಕ ಸುದ್ದಿಗಳನ್ನು ಓದುತ್ತಲೇ ಇರುತ್ತವೆ. ಆದರೆ ಇಲ್ಲಿ ಬಸ್‌ಗೆ  ಕಾಯುತ್ತಿದ್ದ ಯುವಕನನ್ನೇ ಮಹಿಳೆಯರು ಹೊತ್ತೊಯ್ದಿದ್ದಾರೆ!

ಮಂಗಳವಾರ ತಡರಾತ್ರಿ ಬಸ್‌ಗೆ ಕಾಯುತ್ತಿದ್ದ ಯುವಕನಿಗೆ 500 ರೂ. ನೀಡಿ ಲೈಂಗಿಕ ಕ್ರಿಯೆಗೆ ಬರುವಂತೆ  ಇಬ್ಬರು ಮಹಿಳೆಯರು ಪುಸಲಾಯಿಸಿದ್ದಾರೆ. ನಂತರ ಬಲವಂತವಾಗಿ ಆತನನ್ನು ಆಟೋದಲ್ಲಿ ಕೂರಿಸಿ ಆತನ ಪರ್ಸ್ ಹಣ ದೋಚಲು ಯತ್ನಿಸಿದ್ದಾರೆ. ನಂತರ ಮಹಿಳೆಯರೇ ಕಿರುಚಿ ಅತ್ಯಾಚಾರ ಮಾಡ್ತಿದ್ದಾನೆ ಎಂದು ಹೇಳುತ್ತೇವೆ ಎಂದು ಬೆದರಿಸಿ ಹಣ ವಸೂಲಿ‌ ಮಾಡಿ ಎಸ್ಕೇಪ್ ಆಗಿದ್ದಾರೆ. 

ಓರಲ್‌ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!

ದರೋಡೆ ಮಾಡಿದ ಮಹಿಳೆಯರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಕೊಂಚ ಯಾಮಾರಿದರೂ ಹುಡುಗರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬುದನ್ನು ಈ ಪ್ರಕರಣ ಹೇಳಿದೆ.

PREV
click me!

Recommended Stories

ನಮ್ಮ ಮೆಟ್ರೋದಲ್ಲೊಂದು ಬಂಗಾರದ ಬಳೆ ಕಥೆ; ಒಂದು ಫೊಟೋ ಕೇಳಿದರೆ, ಕೈಬಳೆ ಬಿಚ್ಚಿಕೊಟ್ಟ ಅಪರಿಚಿತೆ!
ಸಿನಿಮಾನೇ ಜೀವನ ಅನ್ಕೊಂಡು ಆಕ್ಸಿಡೆಂಟ್ ಮಾಡಿದ ಆರೋಪಿಗಳು; ದೃಶ್ಯಂ ಶೈಲಿಯಲ್ಲಿ ತಪ್ಪಿಸಿಕೊಂಡವರು ಲಾಕ್!