ಆನೆ ಲಾಂಛನದೊಂದಿಗೆ ಹೊಸ ರೂಪ ಪಡೆದ ಕೊಡಗಿನ ಲೆವಿಸ್ಟಾ, ದೇಶಾದ್ಯಂತ ಕಾಫಿ ಘಮಲು ವಿಸ್ತರಣೆಗೆ ಭರ್ಜರಿ ಸಿದ್ಧತೆ!

Published : Nov 19, 2026, 05:37 PM IST
Levista

ಸಾರಾಂಶ

ಕರ್ನಾಟಕ ಮೂಲದ ಜನಪ್ರಿಯ ಕಾಫಿ ಬ್ರ್ಯಾಂಡ್ ಲೆವಿಸ್ಟಾ ಕಾಫಿ ತನ್ನ ಬ್ರ್ಯಾಂಡ್ ಗುರುತಿಗೆ ಹೊಸ ರೂಪ ನೀಡಿದೆ. ಕೊಡಗಿನ ಶ್ರೀಮಂತ ಕಾಫಿ ಪರಂಪರೆ ಮತ್ತು ಪ್ರಕೃತಿ ಸೌಂದರ್ಯವನ್ನು ಆಧಾರವಾಗಿಟ್ಟುಕೊಂಡು ಹೊಸ ಲೋಗೋ, ಆಕರ್ಷಕ ಪ್ಯಾಕೇಜಿಂಗ್ ವಿನೂತನ ಪ್ರಚಾರ ಅಭಿಯಾನವನ್ನು ಕಂಪನಿ ಪರಿಚಯಿಸಿದೆ.

ಬೆಂಗಳೂರು: ಕರ್ನಾಟಕ ಮೂಲದ ಪ್ರಮುಖ ಕಾಫಿ ಬ್ರ್ಯಾಂಡ್‌ ‘ಲೆವಿಸ್ಟಾ ಕಾಫಿ’ ಕೊಡಗಿನ ಕಾಫಿ ಪರಂಪರೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಬ್ರ್ಯಾಂಡ್ ವಿನ್ಯಾಸ, ಲೋಗೋ, ಆಕರ್ಷಕ ಪ್ಯಾಕೇಜಿಂಗ್ ಹಾಗೂ ‘ಟೇಸ್ಟ್ ದಿ ಜಾಯ್ ಆಫ್ ಕೂರ್ಗ್’ ಎಂಬ ನೂತನ ಅಭಿಯಾನವನ್ನು ಆರಂಭಿಸಿದೆ.

ಕಾಫಿ ಪ್ರಿಯರಿಗೆ ಕೊಡಗು ಎಂದರೆ ಕೇವಲ ಕಾಫಿ ಬೆಳೆಯುವ ಸ್ಥಳವಷ್ಟೇ ಅಲ್ಲ, ಅದು ಪ್ರಕೃತಿ, ಆತ್ಮೀಯತೆ ಮತ್ತು ಸಂತೋಷದ ಪ್ರತೀಕ. ಈ ಅಭಿಯಾನದ ಮೂಲಕ ಪ್ರತಿ ಕಪ್ ಕಾಫಿಯಲ್ಲೂ ಗ್ರಾಹಕರಿಗೆ ಆ ಸಂತೋಷವನ್ನು ನೀಡಲು ಕಂಪನಿ ಹೊರಟಿದೆ.

ಆಕರ್ಷಕ ಜಾಹೀರಾತು!

ಈ ಅಭಿಯಾನದ ಕೇಂದ್ರಬಿಂದುವಾಗಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 30 ಸೆಕೆಂಡುಗಳ ವಿಶೇಷ ಡಿಜಿಟಲ್ ವಿಡಿಯೋ ಜಾಹೀರಾತನ್ನು ಲೆವಿಸ್ಟಾ ಬಿಡುಗಡೆ ಮಾಡಿದೆ. ಕಾಫಿಯ ಮೊದಲ ಗುಟುಕು ಕುಡಿಯುತ್ತಿದ್ದಂತೆಯೇ ಕಥಾನಾಯಕ ಕೊಡಗಿನ ಹಸಿರು ಕಾಫಿ ತೋಟಗಳು ಹಾಗೂ ಪ್ರಕೃತಿ ಸೌಂದರ್ಯದ ಲೋಕಕ್ಕೆ ಸಾಗುವ ಆಕರ್ಷಕ ದೃಶ್ಯಾವಳಿ ಈ ಚಿತ್ರದಲ್ಲಿದೆ. ಕೇವಲ ಕಾಫಿಯ ಗಾಢತೆ, ಬಣ್ಣ ಮತ್ತು ರುಚಿಯನ್ನಷ್ಟೇ ತೋರಿಸುವ ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಭಿನ್ನವಾಗಿ, ಕಾಫಿ ಕುಡಿಯುವಾಗ ಸಿಗುವ ಸಹಜ ಸಂತೋಷವನ್ನು ಇದರಲ್ಲಿ ಕಟ್ಟಿಕೊಡಲಾಗಿದೆ.

ಹೊಸ ಬ್ರ್ಯಾಂಡ್ ವಿನ್ಯಾಸದಲ್ಲೂ ಕೊಡಗಿನ ಆನೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ಲೋಗೋದಲ್ಲಿ ಆನೆಯ ಸೊಂಡಿಲಿನ ಸೂಕ್ಷ್ಮ ವಿನ್ಯಾಸ ಹಾಗೂ ಪ್ಯಾಕೇಜಿಂಗ್ ಮೇಲೆ ಆನೆಯ ಲಾಂಛನವನ್ನು ಅಳವಡಿಸಲಾಗಿದೆ. ಗ್ರಾಹಕರು ಸುಲಭವಾಗಿ ಆಯ್ಕೆ ಮಾಡಲು ಅನುಕೂಲವಾಗುವಂತೆ ವಿಭಿನ್ನ ಬಣ್ಣಗಳು ಹಾಗೂ ಕಾಫಿ ಬ್ಲೆಂಡ್, ಸ್ಟ್ರೆಂತ್ ಮತ್ತು ರೋಸ್ಟ್ ಮಟ್ಟದ ಮಾಹಿತಿಯನ್ನು ಹೊಸ ಪ್ಯಾಕ್‌ಗಳಲ್ಲಿ ಸರಳವಾಗಿ ನೀಡಲಾಗಿದೆ.

ಟಿವಿ, ಒಟಿಟಿ, ಡಿಜಿಟಲ್, ಹೊರಾಂಗಣ ಜಾಹೀರಾತುಗಳು ಹಾಗೂ ಉತ್ಸವ, ಸಂಗೀತ ಕಾರ್ಯಕ್ರಮಗಳ ಮೂಲಕ ಈ ಅಭಿಯಾನವನ್ನು ತಲುಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

70 ವರ್ಷಗಳಿಂದ ಕಾಫಿ ಉದ್ಯಮ

ನಂತರ ದಕ್ಷಿಣ ಭಾರತ ಸೇರಿದಂತೆ ಮುಂಬೈ ಹಾಗೂ ದೆಹಲಿಯಂತಹ ಪ್ರಮುಖ ಮಹಾನಗರಗಳಿಗೆ ಇದನ್ನು ವಿಸ್ತರಿಸಲು ಕಂಪನಿ ಉದ್ದೇಶಿಸಿದೆ. ಈ ಕುರಿತು ಮಾತನಾಡಿದ ಮಾತೃಸಂಸ್ಥೆ ಎಸ್‌ಎಲ್‌ಎನ್ ಕಾಫಿ ಪ್ರೈವೇಟ್ ಲಿ. ಸಿಇಒ ಸಾಹಿಬ್ ಸಿಂಗ್, "ಕೊಡಗು ಯಾವಾಗಲೂ ಲೆವಿಸ್ಟಾ ಕಾಫಿಯ ಹೃದಯಭಾಗವಾಗಿದ್ದು, ಈ ನೂತನ ಅಭಿಯಾನ ಮತ್ತು ಪ್ಯಾಕೇಜಿಂಗ್ ಮೂಲಕ ಕೊಡಗಿನ ಕಾಫಿ ಕಥೆಯನ್ನು ಜಗತ್ತಿಗೆ ತಲುಪಿಸಿ, ಅತ್ಯುತ್ತಮ ಕಾಫಿ ಎಂದರೆ ಲೆವಿಸ್ಟಾ ಎಂಬ ಗುರುತನ್ನು ಮೂಡಿಸುವುದು ನಮ್ಮ ಗುರಿ,” ಎಂದರು.

ನಾಲ್ಕನೇ ತಲೆಮಾರಿನ ಎಸ್‌ಎಲ್‌ಎನ್ ಸಮೂಹವು ಕೊಡಗಿನಲ್ಲಿ 70 ವರ್ಷಗಳಿಂದ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಡಗಿನ ಎಸ್ಟೇಟ್‌ಗಳ ತಾಜಾ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬೀಜಗಳಿಂದ ಲೆವಿಸ್ಟಾ ಕಾಫಿಯನ್ನು ತಯಾರಿಸುತ್ತಿದೆ. ಇನ್‌ಸ್ಟಂಟ್ ಕಾಫಿ, ಫಿಲ್ಟರ್ ಕಾಫಿ, ಕೋಲ್ಡ್ ಕಾಫಿ, ಫ್ಲೇವರ್ಡ್ ಕಾಫಿ ಹಾಗೂ 3 ಇನ್ 1 ಪ್ರೀಮಿಕ್ಸ್‌ಗಳ ಜೊತೆಗೆ ಲೆವಿಸ್ಟಾ ಕ್ಲಾಸಿಕ್, ಪ್ರೀಮಿಯಂ, ಸುಪ್ರೀಂ ಮತ್ತು ಸ್ಟ್ರಾಂಗ್ ಶ್ರೇಣಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

PREV
Read more Articles on
click me!

Recommended Stories

ಬೆಂಗಳೂರು ಕುದುರೆ ರೇಸ್ ಜಾಗದಲ್ಲಿ ಇನ್ಮುಂದೆ ಆಡಳಿತದ ಓಟ, ತಲೆ ಎತ್ತಲಿದೆ ಬೃಹತ್ ಬಹುಮಹಡಿ ಸರ್ಕಾರಿ ಸಂಕೀರ್ಣ!
ಕಾಡಿನಂತಿದ್ದ 5 ಎಕರೆಯಲ್ಲಿ ಸಾವಯವ ಕೃಷಿ ಸಾಮ್ರಾಜ್ಯ ಕಟ್ಟಿದ 71ರ ಹರೆಯದ ಮಂಡ್ಯದ ವಿರೂಪಾಕ್ಷ ಮೂರ್ತಿ