Karnataka election 2023: ಕಳೆದ ಬಾರಿಗಿಂತ 8 ಪಟ್ಟು ಚೆಕ್ ಪೋಸ್ಟ್ ಹೆಚ್ಚಳ: ಕಲಬುರಗಿ ಪೊಲೀಸ್ ಹೈಅಲರ್ಟ್!

By Ravi JanekalFirst Published Mar 30, 2023, 9:37 AM IST
Highlights

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಲಬುರಗಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. 

ಕಲಬುರಗಿ (ಮಾ.30) : ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಲಬುರಗಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಹಿಂದಿನ ಚುನಾವಣೆಗಿಂತಲೂ ಈ ಬಾರಿ ಭದ್ರತೆ ಹೆಚ್ಚಿಸುವ ಮೂಲಕ ಎಲ್ಲೂ ಅಹಿತಕರ ಘಟನೆ ಅಕ್ರಮ ಸಾಗಾಟಕ್ಕೆ ಅವಕಾಶ ಸಿಗದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್ ಇಲಾಕೆ.

ಕಲಬುರಗಿ(Kalaburagi) ಜಿಲ್ಲೆಯಲ್ಲಿ ಒಟ್ಟು 42  ಚೆಕ್ ಪೋಸ್ಟ್(Checkpost) ಸ್ಥಾಪನೆ ಮಾಡುವ ಮೂಲಕ ಎಲ್ಲಿಯೂ ಅಕ್ರಮ ಸಾಗಾಟ ಮಾಡಲಾಗದಂತೆ ಕಟ್ಟೆಚ್ಚರವಹಿಸಿದ್ದಾರೆ. ಪ್ರತಿವಾಹನಗಳನ್ನು ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಳೆದ ಚುನಾವಣೆಗಿಂತ ಈ ಬಾರಿ 8 ಪಟ್ಟು ಚೆಕ್ ಪೋಸ್ಟ್ ಗಳ ಸಂಖ್ಯೆ ಹೆಚ್ಚಳ ಮಾಡಿರುವ ಪೊಲೀಸರು. ಒಟ್ಟು ಚೆಕ್‌ಪೋಸ್ಟ್‌ಗಳ ಪೈಕಿ 9 ಚೆಕ್ ಪೋಸ್ಟ್ ಕಲಬುರಗಿ ಸಿಟಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗಿದೆ. 16 ಚೆಕ್ ಪೋಸ್ಟ್‌ಗಳನ್ನು ನೆರೆ ರಾಜ್ಯದ ಗಡಿಭಾಗಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಹೀಗೆ ಜಿಲ್ಲಾದ್ಯಂತ ಒಟ್ಟು 42 ಚೆಕ್ ಪೋಸ್ಟ್ ಗಳು ಕಾರ್ಯಾರಂಭ ಮಾಡಿವೆ.

ಮಾ.28ಕ್ಕೆ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು, ಕಲಬುರಗಿಗೆ 802 ಹೊಸ ಬಸ್ ಖರೀದಿ

ಇದುವರೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3 ಕೋಟಿ 50 ಲಕ್ಷ ರೂ. ಚೆಕ್ ಪೋಸ್ಟಗಳಲ್ಲಿ ತಪಾಸಣೆ ವೇಳೆ ಪತ್ತೆಯಾಗಿದೆ. ಅಕ್ರಮಗಳ ಮಾಹಿತಿ ಬಂದರೆ ತಕ್ಷಣಕ್ಕೆ ಕಾರ್ಯಪ್ರವರ್ತರಾಗಲು 44 ಫ್ಲೈಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ. ದೂರು ಅಥವಾ ಅಕ್ರಮದ ಮಾಹಿತಿ ಬಂದ 15 ನಿಮಿಷದಲ್ಲಿ ಸ್ಥಳದಲ್ಲಿರವ ರೀತಿಯಲ್ಲಿ ಫ್ಲೈಯಿಂಗ್ ಸ್ಕ್ವಾರ್ಡಗಳನ್ನು ಸಜ್ಜುಗೊಳಿಸಲಾಗಿದೆ.

ಮತದಾರರಿಗೆ ಬೆದರಿಕೆ ಸೇರಿ ಚುನಾವಣಾ ಅಕ್ರಮದ ಆರೋಪ ಇರುವ 28 ಜನರ ಗಡಿ ಪಾರು ಮಾಡುವ ಮೂಲಕ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಕಲಬುರಗಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದೆ.

ಕಳೆದ ಚುನಾವಣೆಗಿಂತ ಜೋರಾಗಿದೆ ಕುರುಡು ಕಾಂಚಾಣ ಸದ್ದು

ಕಲಬುರಗಿ : ರಾಜ್ಯ ಅಸೆಂಬ್ಲಿ ಚುನಾವಣೆ(Karnataka assembly election) ದಿನಾಂಕ ಘೋಷಣೆಗೂ ಮೊದಲೇ ಜಿಲ್ಲೆಯಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಂತೆ ಕಂತೆ ಹಣ ದೊರಕಿದೆ. ಜಿಲ್ಲೆಯ ಕಮಲಾಪುರದ ಕಿಣ್ಣಿ ಸಡಕ್‌ ಹಾಗೂ ಜೇವರ್ಗಿಯ ಚಿಗರಳ್ಳಿ ಚೆಕ್‌ಪೋಸ್ಟ್‌ ಬಳಿ ಅದಾಗಲೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2.15 ಕೋಟಿ ರುಪಾಯಿ ಹಣ ವಶಕ್ಕೆ ಪಡೆಯಲಾದ ಬೆನ್ನಲ್ಲೇ ಜಿಲ್ಲೆಯ ಸೇಡಂ, ಆಳಂದ ಇಲ್ಲೆಲ್ಲಾ ಲಕ್ಷಾಂತರ ಅಕ್ರಮ ಹಣ ಹಾಗೂ ಚಿನ್ನಾಭರಣ, ಗಿಫ್‌್ಟವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಚೆಕ್‌ಪೋಸ್ಟ್‌ ಕಾರ್ಯಾಚರಣೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಅಂದರೆ 2 ವಾರದಲ್ಲೇ 3.50 ಕೋಟಿ ರು. ನಷ್ಟುಅಕ್ರಮ ಹಣ, ಚಿನ್ನ, ಬೆಳ್ಳಿ ವಸ್ತುಗಳು ಜಪ್ತಿ ಮಾಡಲಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಅಕ್ರಮ ಜಪ್ತಿ ಹಣದ ಮೊತ್ತ 8 ಪಟ್ಟು ಹೆಚ್ಚಾಗಿದೆ. ಕಲೆದ ಚುನಾವಣೆಯಲ್ಲಿ ಈ ದಿನಗಳಲ್ಲಿ ಕೇವಲ 40 ಲಕ್ಷ ರು. ಮಾತ್ರ ಜಪ್ತಿಯಾಗಿತು. ಈಗ ಅದು 3.50 ಕೋಟಿ ರು.ಗೆ ತಲುಪಿದೆ ಎಂದು ಡಿಸಿ ಯಶವಂತ ಗುರುಕರ್‌ ಹೇಳಿದ್ದಾರೆ.

42 ಚೆಕ್‌ಪೋಸ್ಟ್‌ ಕಾರ್ಯಾಚರಣೆಯಲ್ಲಿವೆ. 9 ಆಯುಕ್ತಾಲಯ ವ್ಯಾಪ್ತಿಯಲ್ಲಿದ್ದರೆ, 16 ಅಂತರ್‌ ರಾಜ್ಯ ಗಡಿಯಲ್ಲಿ ಕಾರ್ಯಾರಂಭ ಮಾಡಿವೆ. ಇದಲ್ಲದೆ 44 ಫ್ಲೈಯಿಂಗ್‌ ಸ್ವಾ$್ಕಡ್‌ ತಂಡಗಳು ಕಾರ್ಯೋನ್ಮುಖವಾಗಿವೆ ಎಂದು ಡಿಸಿ ಗುರುಕರ್‌ ಹೇಳಿದ್ದಾರೆ.

ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್‌

ಪ್ರತಿ ಕಂದಾಯ ವೃತ್ತಕ್ಕೆ ಒಂದರಂತೆ ಚಿತ್ತಾಪುರದಲ್ಲಿ 6, ಚಿಂಚೋಳಿ 5, ಅಫಜಲ್ಪುರ 4, ಜೇವರ್ಗಿ 5 ಹೀಗೆ ಆಯಾ ಕ್ಷೇತ್ರಗಳಲ್ಲಿ ತಂಡಗಳನ್ನು ಹಾಕಲಾಗಿದೆ. ವಿಡಿಯೋ ಸರ್ವೇಲನ್ಸ್‌ ತಂಡಗಳು ಸಹ ಕೆಲಸದಲ್ಲಿವೆ. ಆರ್ಥಿಕವಾಗಿ ತುಂಬ ಸೂಕ್ಷ್ಮವೆಂದು ಚಿತ್ತಾಪುರ, ಜೇವರ್ಗಿ ಹಾಗೂ ಅಫಜಲ್ಪುರ ಕ್ಷೇತ್ರಗಳನ್ನು ಗುರುತಿಸಲಾಗಿದ್ದು ಇಲ್ಲೆಲ್ಲಾ ಮಾರ್ಗಸೂಚಿಯಂತೆ ಕೆಲಸ ಸಾಗಿದೆ ಎಂದರು.

click me!