ಚಾರ್ಮಾಡಿ ಬೆಟ್ಟದ ಮೇಲೆ ಕನ್ನಡ ಬಾವುಟ, ಸಾಹಿತ್ಯದ ಧ್ಯಾನ

By Web Desk  |  First Published Oct 22, 2018, 6:32 PM IST

ಹಚ್ಚ ಹಸಿರಿನ, ದಟ್ಟ ಕಾನನದ ಚಾರ್ಮಾಡಿ ಘಾಟ್ ನಲ್ಲಿ ಜಲ ಧಾರೆಗಳ ಸೆಲೆಯಿಂದ ಒರತೆ ಹುಟ್ಟುವುದು ಸಾಮಾನ್ಯ. ಆದರೆ ಈ ಒಂದು ದಿನ ಕಥೆಗಳು ಹುಟ್ಟಿದವು. ಯಾವ ಸಾಹಿತ್ಯ ಸಮ್ಮೇಳನಕ್ಕೂ ಇದು ಕಡಿಮೆ ಇರಲಿಲ್ಲ. ಪೂರ್ಣ ಕುಂಭ ಸ್ವಾಗತದ ಮುಖೇನ ಗಣ್ಯರನ್ನು ಕರೆತರಲಾಯಿತು. ಜಾನಪದ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕಥಾ ಕಮ್ಮಟದಲ್ಲಿ ಕನ್ನಡದ ಕಂಪು ಮೂಡಿಬಂತು.


ನಂದೀಶ್, ಕೊಟ್ಟಿಗೆಹಾರ, ಮೂಡಿಗೆರೆ
ಮೂಡಿಗೆರೆ[ಅ.22] 
ನಿಸರ್ಗವೇ ಕರುಣಿಸಿದ ಹವಾನಿಯಂತ್ರಿತ ಸುಂದರ ತಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಣಕಲ್  ಹೋಬಳಿ ಆಶ್ರಯದಲ್ಲಿ ಅಕ್ಟೋಬರ್ 21ರಂದು ಜರುಗಿದ  'ಕಥಾ ಕಮ್ಮಟ-2018'ನ್ನು ಹೊಸ ಸಾಹಿತ್ಯದ ಹುಟ್ಟಿಗೆ ಪ್ರೇರಣೆಯಾಯಿತು.

ಒಂದು ಅರ್ಥಪೂರ್ಣ ಭಾನುವಾರ ಸಾಹಿತ್ಯ ಆಸಕ್ತರಿಗೆ ದಕ್ಕಿದ್ದು ಸುಳ್ಳಲ್ಲ. ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ  ಮೋಹನ್ ಕುಮಾರ್ ಎಸ್ ಶೆಟ್ಟಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಕುಂದೂರು ಅಶೋಕ್,  ಕನ್ನಡಪ್ರಭ ಪುರವಣಿ ಸಂಪಾದಕ, ಕಥೆಗಾರ ಜೋಗಿ, ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ  ಎಸ್.ಕೆ.ಶಾಮಸುಂದರ್ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು.

Tap to resize

Latest Videos

ಕಥಾ ಕಮ್ಮಟದಲ್ಲಿ ಭಾಗವಹಿಸಿದ್ದವರ ಸಂಪೂರ್ಣ ಪಟ್ಟಿ,,ನಿಮ್ಮ ಹೆಸರಿದೇಯಾ?

"

ರಿಪ್ಪನ್ ಪೇಟೆ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ  ಡಾ.ಶ್ರೀಪತಿ ಹಳಗುಂದ, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನಿತಾ ಹೆಗ್ಗೋಡು, ಬಾಳೂರು ಹೋಬಳಿ ಕಸಾಪ ಅಧ್ಯಕ್ಷ ಎಂ.ವಿ.ಚೆನ್ನಕೇಶವ ಹಿರಿಯರಾದ ಎಚ್. ಕೆ.ಮಂಚೇಗೌಡ ಉಪಸ್ಥಿತರಿದ್ದರು.

ವಿಭಿನ್ನ-ವಿಶಿಷ್ಟ ಕಾರ್ಯಾಗಾರಗಳು: ಕಾರ್ಯಾಗಾರಗಳು ಸಾಹಿತ್ಯ ಆಸಕ್ತರನ್ನು ಸೆಳೆಯಿತು. ಕಥೆಯ ಸೃಷ್ಟಿ ಮತ್ತು  ಕಥಾ ರಚನಾ ತಂತ್ರದ ಬಗ್ಗೆ ಸಾಕಷ್ಟು ತಿಳಿವಳಿಕೆ ಲಭ್ಯವಾಯಿತು.

click me!