ಜಾವಗಲ್ ಗ್ರಾಮದ ಮೆಕ್ಯಾನಿಕ್ ಏಝಾಜ್ ಪಾಷಾ ಸಮಸ್ಯೆಯನ್ನು ಪರಿಹರಿಸಿಕೊಂಡ ಭಾಗ್ಯಶಾಲಿ. ಏಝಾಜ್ ಪಾಷಾ ಒಂದು ವರ್ಷದಿಂದ ಹೊಟ್ಟನೋವು ಜ್ವರದಲ್ಲಿ ಬಳಲುತ್ತಿದ್ದರು. ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರದಿಂದ ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಹಲವು ವೈದ್ಯರಿಗೆ ತೋರಿಸಿದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಸ್ನೇಹಿತರ ಸಲಹೆಯಂತೆ ಏಝಾಜ್ ಆಶ್ರಯ ನರ್ಸಿಂಗ್ ಹೋಂ ಗೆ ಬಂದು ವೈದ್ಯ ಡಾ.ಕಾರ್ತಿರನ್ನು ಭೇಟಿಮಾಡಿ ಸಮಸ್ಯೆ ಹೇಳಿಕೊಂಡರು.
ಚಿಕ್ಕಮಗಳೂರು(ಅ.04): ಹೊಟ್ಟೆನೋವು, ಜ್ವರ ಕಾಣಿಸಿಕೊಂಡು ಯುರೋಟ್ರೂೕಸಿಲ್ ಸಮಸ್ಯೆಗೆ ಸಿಲುಕಿದ್ದ ರೋಗಿಗೆ ಆಪರೇಷನ್ ರಹಿತವಾಗಿ ನಯಾಪೈಸೆ ಖರ್ಚಿಲ್ಲದಂತೆ 55 ಕಲ್ಲುಗಳನ್ನು ಹೊರತೆಗೆದು ಒಂದೆ ದಿನದಲ್ಲಿ ಪರಿಹರಿಸುವ ಮೂಲಕ ವೈದ್ಯೋ ನಾರಾಯಣೋ ಹರಿ ಎಂಬ ನಾಣ್ನುಡಿಗೆ ಆಶ್ರಯ ನರ್ಸಿಂಗ್ ಹೋಂನ ಮೂತ್ರ ಶಾಸ್ತ್ರಜ್ಞ ಡಾ.ಕಾರ್ತಿಕ್ ವಿಜಯ್ ಪಾತ್ರರಾಗಿದ್ದಾರೆ.
ಜಾವಗಲ್ ಗ್ರಾಮದ ಮೆಕ್ಯಾನಿಕ್ ಏಝಾಜ್ ಪಾಷಾ ಸಮಸ್ಯೆಯನ್ನು ಪರಿಹರಿಸಿಕೊಂಡ ಭಾಗ್ಯಶಾಲಿ. ಏಝಾಜ್ ಪಾಷಾ ಒಂದು ವರ್ಷದಿಂದ ಹೊಟ್ಟನೋವು ಜ್ವರದಲ್ಲಿ ಬಳಲುತ್ತಿದ್ದರು. ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರದಿಂದ ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಹಲವು ವೈದ್ಯರಿಗೆ ತೋರಿಸಿದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಸ್ನೇಹಿತರ ಸಲಹೆಯಂತೆ ಏಝಾಜ್ ಆಶ್ರಯ ನರ್ಸಿಂಗ್ ಹೋಂ ಗೆ ಬಂದು ವೈದ್ಯ ಡಾ.ಕಾರ್ತಿರನ್ನು ಭೇಟಿಮಾಡಿ ಸಮಸ್ಯೆ ಹೇಳಿಕೊಂಡರು.
ವೈದ್ಯರು ರೋಗಿಯನ್ನು ಪರೀಕ್ಷಿಸಿ ಸಿಟಿ ಸ್ಕ್ಯಾನ್ ಮಾಡಿದ ನಂತರ ಸಮಸ್ಯೆ ತಿಳಿದು ಯುರೋಟ್ರೂಸಿಲ್ ಕಾಯಿಲೆ ಎಂದು ದೃಢಪಡಿಸಿಕೊಂಡು ಚಿಕಿತ್ಸೆಗೆ ಮುಂದಾಗಿ ಆಪರೇಷನ್ ರಹಿತವಾಗಿ ಒಂದೆ ದಿನದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರು.
ಮೂತ್ರ ಕಟ್ಟಿಮೂತ್ರ ನಾಳದಲ್ಲಿ ಕಲ್ಲುಗಳು ಕಟ್ಟಿವೆ. ಒಂದು ಎರಡು ಕಲ್ಲುಗಳು ಆಗುವುದು ಸಹಜ. ಆದರೆ ಇಝಾಜ್ ಅವರಿಗೆ 55 ಕಲ್ಲುಗಳು ಬ್ಲಾಕ್ ಆಗಿದ್ದವು. ಅದನ್ನು ಗಮನಿಸಿ ಆಪರೇಷನ್ ರಹಿತವಾಗಿ ಎಂಡೋಸ್ಕೋಪಿ ಮೂಲಕ ಸಮಸ್ಯೆ ಬಗೆಹರಿಸಿ ಎರಡೇ ದಿನದಲ್ಲಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಡಾ. ಕಾರ್ತೀಕ್ ತಿಳಿಸಿದ್ದಾರೆ.
ಟರ್ಕಿಯಲ್ಲಿ 2015ರಲ್ಲಿ ಇದೆ ರೀತಿ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಿ 116 ಕಲ್ಲುಗಳನ್ನು ಆಪರೇಷನ್ ರಹಿತವಾಗಿ ತೆಗೆಯಲಾಗಿತ್ತು. ಅದು ಬಿಟ್ಟರೆ ರಾಜ್ಯದಲ್ಲಿ ಇಂತಹ ಪ್ರಕರಣಗಳು ಅಪರೂಪದಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇಂತಹ ಪ್ರಕರಣವಿದ್ದವರೂ ಮೂತ್ರನಾಳದಲ್ಲಿ ಇಷ್ಟುದೊಡ್ಡ ಮಟ್ಟದಲ್ಲಿ 55 ಕಲ್ಲುಗಳು ಇದ್ದದ್ದು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.