ಲಿಂಗತಾರತಮ್ಯ ಮಾಡಬಾರದು ಎಂದು ಸುಪ್ರೀಂ ಇಂತಹ ಆದೇಶ ಮಾಡಿರಬಹುದು. ಇಷ್ಟ ಇದ್ದವರು ದೇವಾಲಯಕ್ಕೆ ಹೋಗುತ್ತಾರೆ ,ಇಷ್ಟ ಇಲ್ಲದವರು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು[ಸೆ.28]: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಲಿಂಗತಾರತಮ್ಯ ಮಾಡಬಾರದು ಎಂದು ಸುಪ್ರೀಂ ಇಂತಹ ಆದೇಶ ಮಾಡಿರಬಹುದು. ಇಷ್ಟ ಇದ್ದವರು ದೇವಾಲಯಕ್ಕೆ ಹೋಗುತ್ತಾರೆ ,ಇಷ್ಟ ಇಲ್ಲದವರು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷ ಬಿಜೆಪಿ, ಕಾಂಗ್ರೆಸ್ ಅವರ ಗೊಂದಲದ ಹೇಳಿಕೆಗಳ ಬಗ್ಗೆ ಈಗಲೇ ಉತ್ತರ ಕೊಡಲು ಹೋಗುವುದಿಲ್ಲ. ಇನ್ನೊಂದು ತಿಂಗಳೊಳಗಾಗಿ ಮೈತ್ರಿ ಸರ್ಕಾರದ ಗೊಂದಲ ಬಗೆಹರಿಯಲಿದೆ ಎಂದು ಮಾಜಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಅಪಾಯಕ್ಕೀಡಾಗುವಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನು ಎಚ್.ಡಿ ಕುಮಾರಸ್ವಾಮಿ ಕೂಡಾ ಅದೇ ಮಾತನ್ನಾಡಿದ್ದಾರೆ. ಲೋಕಸಭೆ ಸೀಟು ಹಂಚಿಕೆಯಾದ ಮೇಲೆ ಮೈತ್ರಿ ಸರ್ಕಾರದಲ್ಲಿ ಒಡಕು ಬಾರದ ಹಾಗೆ ಜವಾಬ್ದಾರಿ ವಹಿಸುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.