Heart Attack| ಕನ್ನಡಪ್ರಭ ಕೋಲಾರ ಜಿಲ್ಲಾ ವರದಿಗಾರ ಸತ್ಯರಾಜ್‌ ನಿಧನ

Kannadaprabha News   | Asianet News
Published : Nov 22, 2021, 08:48 AM IST
Heart Attack| ಕನ್ನಡಪ್ರಭ ಕೋಲಾರ ಜಿಲ್ಲಾ ವರದಿಗಾರ ಸತ್ಯರಾಜ್‌ ನಿಧನ

ಸಾರಾಂಶ

*   ಹೃದಯಾಘಾತದಿಂದ ಜೆ.ಸತ್ಯರಾಜ್‌ ನಿಧನ *   ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತಕ್ಕೊಳಗಾಗಿದ್ದ ಸತ್ಯರಾಜ್‌ *   ಮೃತರ ಅಂತ್ಯಕ್ರಿಯೆ ಇಂದು ನಡೆಯಲಿದೆ

ಕೋಲಾರ(ನ.22):  ‘ಕನ್ನಡಪ್ರಭ’(Kannada Prabha) ಪತ್ರಿಕೆಯ ಕೋಲಾರ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಜೆ.ಸತ್ಯರಾಜ್‌(J Sathyaraj)(58) ಭಾನುವಾರ ತೀವ್ರ ಹೃದಯಾಘಾತದಿಂದ(Heart Attack) ನಿಧನರಾಗಿದ್ದಾರೆ(Passedaway). 

ಭಾನುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತಕ್ಕೊಳಗಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ(Hospital) ದಾಖಲಿಸಲು ಯತ್ನಿಸಿದರೂ ದಾರಿಮಧ್ಯೆ ಕೊನೆಯುಸಿರೆಳೆದರು. ಕೋಲಾರ(Kolar) ತಾಲೂಕಿನ ಬೆತ್ತನಿ ಗ್ರಾಮದವರಾದ ಸತ್ಯರಾಜ್‌, ಕೋಲಾರದ ಹೊನ್ನುಡಿ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಬಳಿಕ ಅಗ್ನಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದರು. 

ಕನ್ನಡ ಸುದ್ದಿವಾಹಿನಿ ಪತ್ರಕರ್ತ ನಿಧನ, ಅಂಗಾಂಗ ದಾನ ಮಾಡಿದ ಪೋಷಕರು

ಬಳಿಕ ವಿಜಯಕರ್ನಾಟಕ ವರದಿಗಾರರಾಗಿದ್ದ ಅವರು ಕಳೆದ 5 ವರ್ಷದಿಂದ ಕೋಲಾರ ಜಿಲ್ಲೆಯ ಕನ್ನಡಪ್ರಭ ಜಿಲ್ಲಾ ವರದಿಗಾರರಾಗಿ(Reporter) ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ. ಸತ್ಯರಾಜ್‌ ನಿಧನಕ್ಕೆ ‘ಕನ್ನಡಪ್ರಭ’ ಸಿಬ್ಬಂದಿ ಸಂತಾಪ(Condolences) ಸೂಚಿಸಿದ್ದಾರೆ.
 

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ