Karnataka Congress ಹೊಸ ಸಂಪ್ರದಾಯ : ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಯಾರೂ ಕೂರಲ್ಲ!

Published : Nov 22, 2021, 08:30 AM IST
Karnataka Congress ಹೊಸ ಸಂಪ್ರದಾಯ : ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಯಾರೂ ಕೂರಲ್ಲ!

ಸಾರಾಂಶ

*ಎಲ್ಲಾ ಕಾಂಗ್ರೆಸ್‌ ನಾಯಕರಿಗೆ ವೇದಿಕೆ ಮುಂಭಾಗ ಆಸನ,  *ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಯಾರೂ ಕೂರಲ್ಲ *ಭಾಷಣಕ್ಕಷ್ಟೇ ವೇದಿಕೆಗೆ ಆಹ್ವಾನ : ಕಾಂಗ್ರೆಸ್‌ ತೀರ್ಮಾನ *ತುಮಕೂರು ಜನಜಾಗೃತಿ ಸಮಾವೇಶದಲ್ಲಿ ಸಂಪ್ರದಾಯ ಆರಂಭ

ತುಮಕೂರು(ನ.22); ತುಮಕೂರಿನಲ್ಲಿ (Tumkur) ಕಾಂಗ್ರೆಸ್‌ ( Karnataka Congress) ಪಕ್ಷದ ವತಿಯಿಂದ ನಡೆದ ಜನಜಾಗೃತಿ ಅಭಿಯಾನದಲ್ಲಿ ಗಣ್ಯರನ್ನು ವೇದಿಕೆ ಕೆಳಗೆ ಕೂರಿಸಿ ಭಾಷಣಕ್ಕೆ ಮಾತ್ರ ಕರೆಯುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದೆ. ಇನ್ನು ಮುಂದೆ ರಾಜ್ಯಾದ್ಯಂತ ನಡೆಯುವ ಎಲ್ಲ ಜನಜಾಗೃತಿ ಸಮಾವೇಶಗಳಲ್ಲೂ ಇದೇ ಸಂಪ್ರದಾಯ ಮುಂದುವರಿಸಲು ತೀರ್ಮಾನಿಸಲಾಗಿದೆ.

ಸಾಮಾನ್ಯವಾಗಿ ಪಕ್ಷದ ಸಮಾವೇಶಗಳು ವೇದಿಕೆಗಳು ರಾಜ್ಯ, ರಾಷ್ಟ್ರಮಟ್ಟದ ಮುಖಂಡರೊಂದಿಗೆ ಸ್ಥಳೀಯ ನಾಯಕರಿಂದಲೂ ತುಂಬಿ ತುಳುಕುತ್ತಿರುತ್ತವೆ. ಕೆಲವೊಮ್ಮೆ ವೇದಿಕೆ ಮೇಲೆ ಗಣ್ಯರಿಗೆ ಜಾಗ ಕಲ್ಪಿಸುವುದೂ ಆಯೋಜಕರಿಗೆ ಸವಾಲಾಗಿ ಪರಿಣಮಿಸುತ್ತದೆ. ಆದರೆ ತುಮಕೂರಿನ ಗಾಜಿನ  ಮನೆಯಿಂದ (Tumkuru Glass House) ಆರಂಭವಾದ ಈ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (KPCC D K Shivakumar),  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah), ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ (Dr̤ G Parameshwar) ಸೇರಿದಂತೆ ಎಲ್ಲಾ ಗಣ್ಯರು ವೇದಿಕೆ ಕೆಳಗೆ ಕೂರಿಸಲಾಗಿತ್ತು. ತಮ್ಮ ಭಾಷಣದ ಸರದಿ ಬಂದಾಗ ವೇದಿಕೆ ಏರಿ ಮತ್ತೆ ವಾಪಸ್‌ ಕೆಳಗೆ ಆಸೀನರಾದರು.

Karnataka Rain: 'ನಿಮ್ಮದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ'

ಆರಂಭದಲ್ಲಿ ಕಾರ್ಯಕ್ರಮ ಉದ್ಘಾಟನೆಗಷ್ಟೆಗಣ್ಯರೆಲ್ಲಾ ವೇದಿಕೆಗೆ (Stage) ಬಂದರು. ಉದ್ಘಾಟನೆ ನೆರವೇರಿಸಿದ ಬಳಿಕ ಎಲ್ಲಾ ಗಣ್ಯರು ವೇದಿಕೆ ಮುಂಭಾಗ ಆಸೀನರಾದರು. 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುವವರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶವಿರಲಿಲ್ಲ. ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಎಲ್ಲಾ ಜನಜಾಗೃತಿ ಅಭಿಯಾನಕ್ಕೂ ಇದೇ ಸಂಪ್ರದಾಯ ಮುಂದುವರೆಸುವುದಾಗಿ ಕಾಂಗ್ರೆಸ್‌ ಪಕ್ಷದ ವಕ್ತಾರ ಮುರಳೀಧರ ಹಾಲಪ್ಪ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿದ್ದು

ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತ (Minoity) ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲವರು ಡಿಕೆಶಿ, ಡಿಕೆಶಿ ಅಂತ ಮತ್ತು ಜಮೀರ್ ಹೆಸರು ಹೇಳಿ ಘೋಷಣೆ ಕೂಗಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದರು. ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ನೀವು ಕಾಂಗ್ರೆಸ್ ದ್ರೋಹಿಗಳೆಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.

Belagavi Session; ಸುವರ್ಣ ಸೌಧದಲ್ಲಿ ಅಧಿವೇಶನ, ಗದ್ದಲ ಮಾಡಿದ್ರೆ ಜೋಕೆ!

ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಣ ಮತ್ತೆ ಸ್ಫೋಟವಾಗದ್ಯಾ ಎನ್ನುವ ಗುಸು-ಗುಸು ಶುರುವಾಗಿದೆ. ಇನ್ನು ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಭಾಷಣ ಮಾಡುವುದಿಲ್ಲವೆಂದು ಮೊದಲೇ ಹೇಳಿದ್ದೆ.  ಭಾಷಣ ವೇಳೆ ಯಾರೂ ಅಡ್ಡಿಪಡಿಸಿಲ್ಲ. ಸಮಯದ ಅಭಾವದಿಂದ ಕಾರ್ಯಕ್ರಮದಿಂದ ಬಂದುಬಿಟ್ಟೆ ಎಂದು ಸ್ಪಷ್ಟಪಡಿಸಿದರು.

ವಿಸ್ತರಿಸಿಕೊಂಡ ಕಾಂಗ್ರೆಸ್​​ ಬಣ ರಾಜಕೀಯ..!

ಇಲ್ಲಿಯವರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ಕೋಲ್ಡ್ ವಾರ್ ನಡೆದಿತ್ತು. ಇದಿಷ್ಟೇ ಅಲ್ಲಾ ಹಲವು ಹಿರಿಯರ ನಡುವೆಯೂ ಬಣರಾಜಕೀಯವಿತ್ತು. ಅದು ಈಗ ಪಕ್ಷದ ಸಣ್ಣ ಘಟಕಗಳಿಗೂ ವಿಸ್ತರಣೆಯಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ̤

ಅಲ್ಪಸಂಖ್ಯಾತ ಸಮುದಾಯದ ನಾಯಕತ್ವಕ್ಕಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್​ ಹಾಗೂ ತನ್ವೀರ್ ಸೇಠ್ ನಡುವೆ ಕೋಲ್ಡ್ ವಾರ್ ನಡೆದಿತ್ತು. ನಂತರ ಅದು ಜಮೀರ್ ವರ್ಸಸ್ ಹ್ಯಾರಿಸ್ ಮಧ್ಯೆ ಮುಸುಕಿನ ಗುದ್ದಾಟ ಶರುವಾಗಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಜಮೀರ್​ ಆಪ್ತನಿಗೆ ತಪ್ಪಿಸಿ ಹ್ಯಾರಿಸ್‌ ಬೆಂಬಲಿಗ ಮಾಜಿ ಎಂಎಲ್​ಸಿ ಅಬ್ದುಲ್ ಜಬ್ಬಾರ್​ಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಜಮೀರ್ ಕಣ್ಣು ಕೆಂಪಾಗಿಸಿದೆ.

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್