ಕನ್ನಡದ ನಿರ್ದೇಶಕನ ಕಿಡ್ನಾಪ್, ದುನಿಯಾ ವಿಜಯ್ ಸಿನೆಮಾದ ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್!

Published : Feb 26, 2026, 02:38 PM ISTUpdated : Feb 26, 2026, 04:26 PM IST
Film Director anish

ಸಾರಾಂಶ

ನಿರ್ದೇಶಕ ಅನೀಶ್ ಅವರನ್ನು ಕಾರು ಖರೀದಿಸುವ ನೆಪದಲ್ಲಿ ಮುಂಬೈನಿಂದ ಕರೆಸಿ ಅಪಹರಿಸಲಾಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ನಟಿಯೊಬ್ಬಳ ಸಹಾಯದಿಂದ ಈ ಕೃತ್ಯ ಎಸಗಲಾಗಿದ್ದು, ನಿರ್ದೇಶಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಈ ಸಂಬಂಧ ನಟಿ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಚಲನಚಿತ್ರ ನಿರ್ದೇಶಕನೊಬ್ಬರನ್ನು ಕಿಡ್ನ್ಯಾಪ್ ಮಾಡಿ ಅಮಾನವೀಯವಾಗಿ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಗಳ ಬಂಧನದಿಂದ ಪ್ರಕರಣದ ಸಂಪೂರ್ಣ ಸಂಚು ಬಹಿರಂಗವಾಗಿದೆ.

ಮುಂಬೈಗೆ ಸ್ಥಳಾಂತಗೊಂಡಿದ್ದ ನಿರ್ದೇಶಕ

ಕಿಡ್ನ್ಯಾಪ್‌ಗೆ ಒಳಗಾದವರು ಅನೀಶ್ ಎಂಬ ಯುವ ನಿರ್ದೇಶಕ. ಈ ಹಿಂದೆ ‘ಭರವಸೆಯೇ ಜೀವನ’ ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಚಲನಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದ ಅನೀಶ್, ಕೆಲ ಕಾರಣಗಳಿಂದಾಗಿ ಆ ಸಿನಿಮಾ ನಿಲ್ಲಿಸಿ ಮುಂಬೈಗೆ ಸ್ಥಳಾಂತರಗೊಂಡಿದ್ದರು.

ಪರಿಚಯಸ್ಥನಿಂದಲೇ ಕಿಡ್ನ್ಯಾಪ್ ಪ್ಲಾನ್

ಅನೀಶ್ ಅವರು ತಮ್ಮ ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಪರಿಚಯವಿದ್ದ ನಟಿಯೊಬ್ಬರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿಯನ್ನು ಬಳಸಿಕೊಂಡು ಆರೋಪಿಗಳು ನಟಿಯ ಮೂಲಕ ಅನೀಶ್ ಅವರನ್ನು ಸಂಪರ್ಕಿಸಿದ್ದರು. ಕಾರು ಖರೀದಿ ಮಾಡುವ ನೆಪದಲ್ಲಿ ಕರೆ ಮಾಡಿ, ನಟಿಯ ಮೂಲಕವೇ ಅನೀಶ್ ಅವರನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಆ ನಟಿಯ ಹೆಸರು ಐಶ್ವರ್ಯಾ ಈ ಹಿಂದೆ ನಟ ದುನಿಯಾ ಅವರ ಭೀಮಾ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದವರು.

ಕಿಡ್ನ್ಯಾಪ್, ಹಲ್ಲೆ ಮತ್ತು ಸುಲಿಗೆ

ಆರೋಪಿಗಳು ಅನೀಶ್ ಅವರನ್ನು ಆಡುಗೋಡಿ ಠಾಣೆ ವ್ಯಾಪ್ತಿಗೆ ಕರೆಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆ ನಡೆಸಿದ ಬಳಿಕ ಅನೀಶ್ ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಿತ್ತುಕೊಂಡ ಆರೋಪಿಗಳು, ನಂತರ ಅವರನ್ನು ಮಧುಗಿರಿ ಸಮೀಪ ಬಿಟ್ಟು ಪರಾರಿಯಾಗಿದ್ದರು.

ಐದು ಲಕ್ಷ ರೂ. ಹಣದ ಜಗಳ ಕಾರಣ

ತನಿಖೆಯ ವೇಳೆ, ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನ ನೇತೃತ್ವದಲ್ಲಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಲಾಗಿತ್ತು ಎಂಬುದು ಪತ್ತೆಯಾಗಿದೆ. ನಿರ್ದೇಶಕ ಅನೀಶ್ ಮತ್ತು ಆರೋಪಿ ಆಶೀರ್ವಾದ್ ಗೆ ಸುಮಾರು ₹5 ಲಕ್ಷ ಹಣದ ವಿಚಾರವಾಗಿ ಜಗಳ ಉಂಟಾಗಿದ್ದು, ಅದೇ ಕಾರಣಕ್ಕೆ ಈ ಅಪರಾಧ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಪೊಲೀಸ್ ತನಿಖೆ ಮತ್ತು ಡಿಸಿಪಿ ಹೇಳಿಕೆ

ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಒಬ್ಬ ಯುವತಿ (ನಟಿ) ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಅವರು ಮಾತನಾಡಿ, ಫೆಬ್ರವರಿ 11ರಂದು ಆಸ್ಪತ್ರೆಗೆ ಎಂಎಲ್‌ಸಿ ವರದಿ ಬಂದಿತ್ತು. ವಿಕ್ಟಿಮ್‌ ಅನೀಶ್ ಕೈ, ಕಾಲು ಸೇರಿದಂತೆ ದೇಹದ ಹಲವೆಡೆ ಗಾಯಗಳಿವೆ. ಆರೋಪಿಗಳು ಎಲ್ಲರೂ ಸಂತ್ರಸ್ಥನಿಗೆ ಪರಿಚಯದವರೇ ಆಗಿದ್ದಾರೆ. ಹಣಕಾಸಿನ ವಿಚಾರದಲ್ಲಿಯೇ ಗಲಾಟೆ ನಡೆದಿದೆ. ಯುವತಿಯೊಬ್ಬಳು ಸಂತ್ರಸ್ಥನನ್ನು ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ” ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು!
ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಪ್ರತ್ಯಕ್ಷ: 'ನಾನು ಓಡಿ ಹೋಗಿಲ್ಲ, ಪೊಲೀಸರು ಕರೆದಾಗ ಬರ್ತೀನಿ'