ವೃತ್ತಿ ಜೀವನದ ಯಶಸ್ಸಿಗೆ ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ: ಹಿರಿಯ ನಟ ದೊಡ್ಡಣ್ಣ

Published : Oct 05, 2026, 07:13 PM IST
Doddanna

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಆಯೋಜಿಸಿದ್ದ ಎರಡು ವಾರಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಹಿರಿಯ ನಟ ಎಸ್. ದೊಡ್ಡಣ್ಣ ಉದ್ಘಾಟಿಸಿದರು. ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು..

ಬೆಂಗಳೂರು (ಅ.05): ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ವಿನಯತೆ ಹಾಗೂ ಪ್ರಾಮಾಣಿಕತೆ ಮುಖ್ಯ, ಉತ್ತಮ ನಡವಳಿಕೆ ಮಾಧ್ಯಮ ಕ್ಷೇತ್ರದಲ್ಲಿಉನ್ನತಿ ಸಾಧಿಸಲು ನೆರವಾಗುತ್ತದೆ ಎಂದು ಹಿರಿಯ ನಟ ಎಸ್‌ ದೊಡ್ಡಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಏರ್ಪಡಿಸಿದ್ದ ಎರಡು ವಾರಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಣದ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು. ಕನ್ನಡ ಚಲನಚಿತ್ರದ ದಿಗ್ಗಜ ನಟರೊಂದಿಗಿನ ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಆಸಕ್ತಿ ಬೆಳೆಸಿಕೊಂಡರೆ ಯಶಸ್ವಿ

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಮಾತನಾಡಿ, ಪತ್ರಿಕೋದ್ಯಮವನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ ತೀವ್ರ ಆಸಕ್ತಿ ಬೆಳೆಸಿಕೊಂಡರೆ ಯಶಸ್ವಿಯಾಗಲು ಸಾಧ್ಯ ಎಂದರು. ತಂತ್ರಜ್ಞಾನ ಹಾಗೂ ಡಿಜಿಟಲ್ ಮಾಧ್ಯಮದ ಪರಿಣಾಮಕಾರಿ ಬಳಕೆಯಿಂದ ಪತ್ರಕರ್ತರಿಗೆ ಹೊಸ ಅವಕಾಶಗಳಿವೆ. ಇಂದಿಗೂ ಗಟ್ಟಿಯಾದ ಪತ್ರಕರ್ತರಿಗೆ ಮನ್ನಣೆ ಇದ್ದು, ಓದುಗರ-ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಗೌರವ ಅತಿಥಿಗಳಾದ್ದ ಖ್ಯಾತ ಛಾಯಾಚಿತ್ರಗ್ರಾಹಕ ಅಶೋಕ್‌ ಕಶ್ಯಪ್‌ ಅವರು ಮಾತನಾಡಿ, ಹಿಂದೆ ಚಲನಚಿತ್ರ ವೃತ್ತಿಪರ ತರಬೇತಿ ಪಡೆಯಲು ಅವಕಾಶ ಇರಲಿಲ್ಲ. ಇಂದಿನ ವಿದ್ಯಾರ್ಥಿಗಳು ಚಲನಚಿತ್ರ ನಿರ್ಮಾಣ ಶಿಕ್ಷಣವನ್ನು ಔಪಚಾರಿಕವಾಗಿ ಕಲಿಯಲು ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ಪ್ರೊ. ವಾಹಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ, ಪ್ರೊ. ರಾಜೇಶ್ವರಿ ಆರ್‌, ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Read more Articles on
click me!

Recommended Stories

ಕಾಸರಗೋಡು ಮಂಜೇಶ್ವರದಲ್ಲಿ ಕನ್ನಡ ಶಿಕ್ಷಕರ ಹುದ್ದೆಗೆ ಮಲಯಾಳಿಗಳ ನೇಮಕ, ಇಲಾಖೆ ವಿರುದ್ಧ ಕನ್ನಡಿಗರ ತೀವ್ರ ಆಕ್ರೋಶ
ಮಾಲ್ಗುಡಿ ಡೇಸ್ ಸ್ವಾಮಿಯ ಮಗ ಈಗ ನ್ಯಾಷನಲ್ ಸ್ವಿಮ್ಮಿಂಗ್‌ ಚಾಂಪಿಯನ್: ಪುತ್ರ ವೇದಾಂತ್ ಸಾಧನೆಗೆ ಮಾಸ್ಟರ್ ಮಂಜುನಾಥ್ ಖುಷ್