ಮೈಸೂರು ದಸರಾ ಆಗಮಿಸುವ ಜನರಿಗೆ ಗುಡ್ ನ್ಯೂಸ್, ವಾಯುಪಡೆಯ ಏರೋಬ್ಯಾಟಿಕ್ ಶೋಗೆ ಗ್ರೀನ್ ಸಿಗ್ನಲ್

Published : Oct 05, 2026, 06:00 PM IST
Mysuru Dasara Air Force Aerobatic Show

ಸಾರಾಂಶ

ಮೈಸೂರು ದಸರಾ ವೀಕ್ಷಿಸಲು ಆಗಮಿಸುವ ಜನರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಈ ಬಾರಿಯ ವಾಯುಪಡೆಯಿಂದ ಏರೋಬ್ಯಾಟಿಕ್ ಶೋಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಯಾವಾಗ ನಡೆಯಲಿಗದೆ ವೈಮಾನಿಕ ಪ್ರದರ್ಶನ

ಬೆಂಗಳೂರು (ಅ.05) ಮೈಸೂರು ದಸರಾ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಅಂಬಾರಿ ಹೊರುವ ಆನೆಗಳು ಮೈಸೂರು ತಲುಪಿದೆ. ಇತ್ತ ಮೈಸೂರು ಅರಮನೆ, ನಗರದಲ್ಲಿ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಈ ಬಾರಿ ಮೈಸೂರು ದಸರಾದಲ್ಲಿ ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ಶೋಗೆ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರೋಬ್ಯಾಟಿಕ್ ಶೋಗೆ ಅನುಮತಿ ನೀಡಿದ್ದಾರೆ.

ಸೂರ್ಯ ಕಿರಣ್ ಏರೋಬ್ಯಾಟಿಕ್ ಶೋ

ಮೈಸೂರು ದಸರಾದಲ್ಲಿ ಸೂರ್ಯ ಕಿರಣ್ ತಂಡದ ಏರೋಬ್ಯಾಟಿಕ್ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಕ್ಟೋಬರ್ 18 ರಿಂದ 20ರ ವರೆಗೆ ಮೈಸೂರಿನಲ್ಲಿ ಸೂರ್ಯ ಕಿರಣ್ ತಂಡದ ವೈಮಾನಿಕ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಪಡೆಯ ವಿಶೇಷ ವೈಮಾನಿಕ ಪ್ರದರ್ಶನ ಮೈಸೂರು ದಸರಾದ ಮೆರುಗು ಹೆಚ್ಚಿಸಲಿದೆ. ಕನ್ನಡಿಗರು, ದಸರಾ ವೀಕ್ಷಿಸಲು ಆಗಮಿಸುವ ದೇಶ ವಿದೇಶಗಳ ಜನರಿಗೆ ಭಾರತೀಯ ವಾಯುಪಡೆಯ ಸಾಹಸ ವೈಮಾನಿಕ ಪ್ರದರ್ಶನದ ನೋಡುವ ಅವಕಾಶ ಲಭ್ಯವಾಗಿದೆ.

ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನವಿಲ್ಲ

ಮೈಸೂರು ದಸರಾದಲ್ಲಿ ಸೂರ್ಯ ಕಿರಣ್ ತಂಡದ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಆದರೆ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನಕ್ಕೆ ಅನುಮತಿ ಸಿಕ್ಕಿಲ್ಲ. ಸಾರಂಗ್ ಹೆಲಿಕಾಪ್ಟರ್ ಪೂರ್ವ ನಿಗದಿಯಾಗಿರುವ ಕಾರ್ಯಕ್ರಮಗಳಿಗೆ ನಿಯೋಜನೆಯಾಗಿದೆ. ಹೀಗಾಗಿ ಮೈಸೂರಿಗೆ ನಿಯೋಜನೆ ಮಾಡಲು ಅಸಾಧ್ಯ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಪಪಡಿಸಿದೆ. ಸೂರ್ಯ ಕಿರಣ್ ಹಾಗೂ ಸಾರಂಗ್ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಪತ್ರ ಬರೆದಿದ್ದರು.

ಭಾರತೀಯ ವಾಯುಪಡೆ ಜೊತೆ ಚರ್ಚಿಸಲು ಸೂಚನೆ

ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನಕ್ಕೆ ಭಾರತೀಯ ವಾಯುಪಡೆ ಜೊತೆ ಚರ್ಚಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಕೇಂದ್ರ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಸೂರ್ಯ ಕಿರಣ್ ಪ್ರದರ್ಶನಕ್ಕೆ ಅಗತ್ಯವಿರುವ ಸಮನ್ವಯ ಹಾಗೂ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಮೈಸೂರು ದಸರಾಗೆ ಅದ್ದೂರಿ ತಯಾರಿಗಳು ನಡೆಯುತ್ತಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ದಸರಾ ಹಬ್ಬ ಇದಾಗಿದೆ. ತಾಯಿ ಚಾಮಂಡೇಶ್ವರಿ ಸನ್ನಿಧಿಯಲ್ಲಿ ಗ್ಯಾರೆಂಟಿ ಯೋಜನೆಗಳ ಮುಂದಿಟ್ಟು ವಿಶೇಷ ಪ್ರಾರ್ಥನೆ ಮಾಡಿದ ಡಿಕೆ ಶಿವಕುಮಾರ್ ಇದೀಗ ಮುಖ್ಯಮಂತ್ರಿಯಾಗಿ ತಾಯಿ ಚಾಮಂಡೇಶ್ವರಿ ಸೇವೆ ಮಾಡಲು ಉತ್ಸುಕರಾಗಿದ್ದಾರೆ.

PREV
Read more Articles on
click me!

Recommended Stories

ಮಂಗಳೂರು-ಮಡ್ಗಾಂವ್ ರೈಲು ವೇಳಾಪಟ್ಟಿ ದಿಡೀರ್ ಬದಲಾವಣೆ, ಸೇವೆಗಳು ಭಾಗಶಃ ರದ್ದು, ಇಲ್ಲಿದೆ ಮಾಹಿತಿ
Mysuru Dasara: ಅಭಿಮನ್ಯು ಅರಮನೆ ಪ್ರವೇಶ: ನಿಶಾನೆ ಆನೆಯಾಗಿ ಆಯ್ಕೆ, ಅಭಿಮಾನಿಗಳಿಂದ ನಾಲ್ವಡಿ ಮಾದರಿಯ ವಿಶೇಷ ಪೇಟ!