ಆಲಮಟ್ಟಿ ಡ್ಯಾಂನಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ, ಕೃಷ್ಣಾನದಿ ತೀರದಲ್ಲಿ ಹೈ ಅಲರ್ಟ್..!

By Girish GoudarFirst Published Jul 26, 2024, 7:03 PM IST
Highlights

ಆಲಮಟ್ಟಿ ಡ್ಯಾಂನಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಡ್ಯಾಂಗೆ ಸದ್ಯ 3 ಲಕ್ಷ ಕ್ಯೂಸೆಕ್‌ ಒಳ ಹರಿವು ಇದೆ. ಹೀಗಾಗಿ ಯಾದಗಿರಿ ನಾರಾಯಣಪುರ ಡ್ಯಾಂಗೆ ನೀರು ರಿಲೀಸ್ ಮಾಡಲಾಗಿದೆ. ಕೃಷ್ಣಾನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 
 

ವಿಜಯಪುರ(ಜು.26):  ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗಿತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಆಲಮಟ್ಟಿ ಡ್ಯಾಂನಿಂದ ಮತ್ತೆ 3 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. 

ಆಲಮಟ್ಟಿ ಡ್ಯಾಂನಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಡ್ಯಾಂಗೆ ಸದ್ಯ 3 ಲಕ್ಷ ಕ್ಯೂಸೆಕ್‌ ಒಳ ಹರಿವು ಇದೆ. ಹೀಗಾಗಿ ಯಾದಗಿರಿ ನಾರಾಯಣಪುರ ಡ್ಯಾಂಗೆ ನೀರು ರಿಲೀಸ್ ಮಾಡಲಾಗಿದೆ. 

Latest Videos

ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದ ಒಳ ಹರಿವು: ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ!

ಸದ್ಯ 2.09 ಲಕ್ಷ ಒಳ ಹರಿವು ಇದ್ದು, ಕೃಷ್ಣಾನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳ ಹಾಗೂ ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. 

click me!