ಜೂ.13ರಿಂದ ಕಲಬುರಗಿ-ಮುಂಬೈ ವಿಮಾನ ಸೇವೆ ಆರಂಭ

Kannadaprabha News   | Asianet News
Published : Jun 12, 2020, 09:47 AM ISTUpdated : Jun 12, 2020, 11:59 AM IST
ಜೂ.13ರಿಂದ ಕಲಬುರಗಿ-ಮುಂಬೈ ವಿಮಾನ ಸೇವೆ ಆರಂಭ

ಸಾರಾಂಶ

ಕಲಬುರಗಿಯಿಂದ ಬೆಳಗ್ಗೆ 10.20 ಗಂಟೆಗೆ ಹೊರಟು ವಿಮಾನ 11.25ಕ್ಕೆ ಬೆಂಗಳೂರು ತಲುಪಲಿದೆ| ಅಲ್ಲಿಂದ ಹೊರಟು ಮಧ್ಯಾಹ್ನ 1ಕ್ಕೆ ಬೆಳಗಾವಿ ತಲುಪಿಲಿದ್ದು, ಅಲ್ಲಿಂದ ಹೊರಡಲಿರುವ ವಿಮಾನ 2.40ಕ್ಕೆ ಮುಂಬೈ ತಲುಪಲಿದೆ|

ಕಲಬುರಗಿ(ಜೂ.12): 8 ತಿಂಗಳಿಂದ ಕಲಬುರಗಿ-ಬೆಂಗಳೂರು ನಡುವೆ ವಿಮಾನ ಸೇವೆ ನೀಡುತ್ತಿರುವ ಸ್ಟಾರ್‌ ಏರ್‌ ಸಂಸ್ಥೆ ಇದೀಗ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಮುಂಬೈಗೆ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಮುಂದಾಗಿದೆ. 

ಶನಿವಾರ ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದ್ದು, ಜೂ.13ರಂದು ವಿಮಾನಯಾನ ಆರಂಭವಾಗಲಿದೆ. ಕಲಬುರಗಿಯಿಂದ ಬೆಳಗ್ಗೆ 10.20 ಗಂಟೆಗೆ ವಿಮಾನ ಹೊರ​ಡ​ಲಿದೆ. ಹೊರಡಲಿರುವ ವಿಮಾನ 11.25ಕ್ಕೆ ಬೆಂಗಳೂರು ತಲುಪಲಿದ್ದು, ಅಲ್ಲಿಂದ ಹೊರಟು ಮಧ್ಯಾಹ್ನ 1ಕ್ಕೆ ಬೆಳಗಾವಿ ತಲುಪಿಲಿದ್ದು, ಅಲ್ಲಿಂದ ಹೊರಡಲಿರುವ ವಿಮಾನ 2.40ಕ್ಕೆ ಬಾಂಬೆ ತಲುಪಲಿದೆ.

ಬಿಜೆಪಿ ಶಾಸಕರು ಒಂದುಕಡೆ ಕೂಡೋದೇ ತಪ್ಪಾ?: ಸಚಿವ ಈಶ್ವರಪ್ಪ

ಕಲಬುರಗಿ- ಬೆಳಗಾವಿ ರೆಗ್ಯುಲರ್‌ 4,300, ಕಂಫರ್ಟ್‌ 5951, ಫ್ಲೆಕ್ಸಿ .6,152, ಕಲಬುರಗಿ- ಮುಂಬೈ ರೆಗ್ಯುಲರ್‌ 8,149, ಕಂಫರ್ಟ್‌ 10,200, ಫ್ಲೆಕ್ಸಿ 10,501 ನಿಗದಿ ಪಡಿಸಿದೆ.
 

PREV
click me!

Recommended Stories

Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!
ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’: ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!