ಬ​ಳ್ಳಾರಿ: ಜಿಂದಾಲ್‌ ಕಾರ್ಖಾನೆಯಲ್ಲಿ ಕೊರೋನಾ ಸ್ಫೋಟ, ಬೆಚ್ಚಿಬಿದ್ದ ಜನತೆ..!

Kannadaprabha News   | Asianet News
Published : Jun 12, 2020, 08:27 AM ISTUpdated : Jun 12, 2020, 10:11 AM IST
ಬ​ಳ್ಳಾರಿ: ಜಿಂದಾಲ್‌ ಕಾರ್ಖಾನೆಯಲ್ಲಿ ಕೊರೋನಾ ಸ್ಫೋಟ, ಬೆಚ್ಚಿಬಿದ್ದ ಜನತೆ..!

ಸಾರಾಂಶ

ಗಡಿ ಭಾಗದ ಜನರಲ್ಲಿ ಆತಂಕ| 50ಕ್ಕೂ ಅಧಿಕ ಕೊರೋನಾ ಪ್ರಕರಣ ಪತ್ತೆ| ಜಿಂದಾಲ್‌ ಕಾರ್ಖಾನೆಯಲ್ಲಿ 50000ಕ್ಕಿಂತ ಅಧಿಕ ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ| ಕಾರ್ಖಾನೆ ಸಿಬ್ಬಂದಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾಸ| 

ಬ​ಳ್ಳಾರಿ(ಜೂ.12): ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜಿಂದಾಲ್‌ ಕಾರ್ಖಾನೆಯಲ್ಲಿ ಗುರುವಾರ 50ಕ್ಕೂ ಅಧಿಕ ಕೊರೋನಾ ಪ್ರಕರಣ ಪತ್ತೆಯಾಗಿವೆ. ಇದರಿಂದ ಬಳ್ಳಾರಿ ಜಿಲ್ಲೆಯ ಪಕ್ಕದಲ್ಲಿರುವ ಕೊಪ್ಪಳ ಜಿಲ್ಲೆಯ ಜನರಲ್ಲಿ ಅದರಲ್ಲೂ ವಿಶೇಷವಾಗಿ ಕೊಪ್ಪಳ ನಗರ ಹಾಗೂ ಜಿಲ್ಲೆಯ ಗಡಿಭಾಗದ ಮುನಿರಾಬಾಗ್‌, ಲಿಂಗಾಪುರ, ಹೊಸಹಳ್ಳಿ ಹಾಗೂ ಹುಲಿಗಿ ಗ್ರಾಮದ ಜನರಲ್ಲಿ ಆತಂಕವುಂಟಾ​ಗಿ​ದೆ.

"

ಜಿಂದಾಲ್‌ ಕಾರ್ಖಾನೆಯಲ್ಲಿ 50000ಕ್ಕಿಂತ ಅಧಿಕ ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಖಾನೆ ಸಿಬ್ಬಂದಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಕೆಲ ಸಿಬ್ಬಂದಿ ತೋರನಗಲ್ಲಿನಲ್ಲಿನ ವಾಸವಾಗಿದ್ದರೆ ಇನ್ನೂ ಕೆಲವ​ರು ಬಳ್ಳಾರಿ, ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರ ಮತ್ತಿ​ತರ ಗ್ರಾಮ​ಗ​ಳಲ್ಲಿ ವಾಸವಾಗಿದ್ದಾರೆ. 

ಕೊರೋನಾ ರಣಕೇಕೆ: ಒಂದೇ ದಿನ ಜಿಂದಾಲ್‌ 20 ನೌಕರರಿಗೆ ವಕ್ಕರಿಸಿದ ಕೋವಿಡ್‌

"

ಅವರು ಪ್ರತಿನಿತ್ಯ ತಮ್ಮ ನಗರ ಹಾಗೂ ಗ್ರಾಮಗಳಿಂದ ಜಿಂದಾಲ್‌ ಕಾರ್ಖಾನೆಗೆ ಕೆಲಸಕ್ಕೆ ತೆರಳಿ ಮರ​ಳುತ್ತಾರೆ. ಈಗಾಗಲೇ ಕಾರ್ಖಾನೆಯಲ್ಲಿ ಕೋರೋನಾ ವ್ಯಾಪಕವಾಗಿ ಹಬ್ಬಿದ್ದು, ಇಲ್ಲಿನ ಕಾರ್ಮಿಕರು ಎಲ್ಲಿ ಕೊರೋ​ನಾವನ್ನು ತಮ್ಮ ಊರಿಗೆ ತಂದು ಹಬ್ಬಿಸುತ್ತಾ​ರೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

PREV
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು