ಹನಿಟ್ರ್ಯಾಪ್‌, ಬಲಾತ್ಕಾರದ ಪ್ರಕರಣದಿಂದ ಕಲಬುರಗಿಗೆ ಕುಖ್ಯಾತಿ: ಆಂದೋಲಾ ಶ್ರೀ

Published : Sep 09, 2024, 02:56 PM IST
ಹನಿಟ್ರ್ಯಾಪ್‌, ಬಲಾತ್ಕಾರದ ಪ್ರಕರಣದಿಂದ ಕಲಬುರಗಿಗೆ ಕುಖ್ಯಾತಿ: ಆಂದೋಲಾ ಶ್ರೀ

ಸಾರಾಂಶ

ಡಿಎಲ್‌ಟಿ ಸಂಘಟನೆ ಉಭಯೋತ್ಪಾದಕ ಲಷ್ಕರ್‌ ಏ ತೋಯ್ಬಾ ಸಂಘಟನೆಗಿಂತಲೂ ಕ್ರೌರ್ಯ ಮೆರೆಯುತ್ತಿದೆ. ಇದನ್ನು ಹೀಂಗೇ ಬೆಳೆಯಲು ಬಿಟ್ಟಲ್ಲಿ ಕಲಬರಗಿಯನ್ನೇ ಆಪೋಷನ ತೆಗೆದುಕೊಳ್ಳುತ್ತದೆ ಎಂದು ಆತಂಕ ಹೊರಹಾಕಿದ ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಶ್ರೀಗಳು 

ಕಲಬುರಗಿ(ಸೆ.09):  ಹನಿಟ್ರ್ಯಾಪ್‌, ಬ್ಲಾಕ್‌ಮೇಲ್‌, ರೇಪ್‌ನಂತಹ ಅಪರಾಧ ಪ್ರಕರಣಗಳಿಂದಾಗಿ ಕಲಬರಗಿ ಹೆಸರು , ಇಲ್ಲಿನ ಜನರ ನೆಮ್ಮದಿ ಹಾಳಾಗಿ ಹೋಗುತ್ತಿದೆ, ಮಳೆಯಿಂದಾಗಿ ಹಳ್ಳಿಜನರ ಬಾಳು ಹಾಳಾಗುತ್ತಿದೆ. ಕಲಬುರಗಿ ಪ್ರಗತಿ ಮಾಡುವೆ ಎಂದು ಹೇಳಿಕೆ ಕೊಡುವ ಸ್ಟ್ರಾಂಗ್‌ ಮಿನಿಸ್ಟರ್‌ ಎಲ್ಲಿದ್ದಾರೆ? ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಶ್ರೀಗಳು ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸ್ಟ್ರಾಂಗ್‌ ಮಿನಿಸ್ಟರ್‌ ಎಂದು ಹೇಳಿಕೊಳ್ಳುವ ಖರ್ಗೆಯವರು ಎಲ್ಲಿದ್ದಾರೆ? ಇನ್ನು ಕಲಬರಗಿ ಕಂದ ಎಂದು ಸುದ್ದಿಯಲ್ಲಿರುವ ಪೊಲೀಸ್‌ ಕಮೀಶ್ನರ್‌ ಡಾ. ಶರಣಪ್ಪ ಸಾಹೇಬರು ಯಾಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.

ಹಿಂದೂಗಳ ಮೇಲೆ ದೌರ್ಜನ್ಯ, ಕೇಳೋರಿಲ್ಲ: ಆಂದೋಲಾ ಶ್ರೀ

ಸುದ್ದಿಗೋಷ್ಠಿಯುದ್ದಕ್ಕೂ ಶೀಗಳು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿಯವರನ್ನೇ ಗುರಿಯಾಗಿಸಿಕೊಂಡು ವಾಗ್ದಳಿ ನಡೆಸಿದರೂ ಕೂಡಾ ಎಲ್ಲಿಯ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ. ಇದಲ್ಲದೆ ಸೇನೆಯ ಹೆಸರನ್ನೂ ಹೇಳದೆ ಡಿಎಲ್‌ಟಿ ಸಂಘಟನೆ ಎಂದಷ್ಟೇ ಹೇಳುವ ಮೂಲಕ ಇಂತಹ ಚಟುವಟಿಕೆಗಳನ್ನು ಈಗಲೇ ಮಟ್ಟ ಹಾಕದೆ ಹೋದರೆ ಕಲಬುರಗಿ ಮುಂದೊಂದ ದಿನ ಭೂಗತ ಲೋಕದ ಕೇಂದ್ರವಾಗುತ್ತದೆ ಎಂದು ಕಳವಳ ಹೊರಹಾಕಿದರು.

ಡಿಎಲ್‌ಟಿ ಸಂಘಟನೆ ಉಭಯೋತ್ಪಾದಕ ಲಷ್ಕರ್‌ ಏ ತೋಯ್ಬಾ ಸಂಘಟನೆಗಿಂತಲೂ ಕ್ರೌರ್ಯ ಮೆರೆಯುತ್ತಿದೆ. ಇದನ್ನು ಹೀಂಗೇ ಬೆಳೆಯಲು ಬಿಟ್ಟಲ್ಲಿ ಕಲಬರಗಿಯನ್ನೇ ಆಪೋಷನ ತೆಗೆದುಕೊಳ್ಳುತ್ತದೆ ಎಂದು ಆತಂಕ ಹೊರಹಾಕಿದರು. ರೇಪ್‌, ಹನಿಟ್ರ್ಯಾಪ್‌ನಂತಹ ಸಮಾಜ ಗಾತುಕ ಕೆಲಸ ಮಾಡಜುತ್ತಿರುವ ದಲಿತ ಸಂಘಟನೆಯ ಕಾರ್ಯಕರ್ತರಿಗೆಲ್ಲರಿಗೂ ಅಧ್ಯಕ್ಷರೇ ಬಾಸ್‌. ಮೊದಲು ಡಿಎಲ್‌ಟಿ ಸಂಘಟನೆಯ ಅಧ್ಯಕ್ಷರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಿ ಪೊಲೀಸರು, ಇಲ್ಲದೆ ಹೋದಲ್ಲಿ ತಾವು ಕಮೀಷ್ನರ್‌ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿಎಲ್‌ಟಿ ಸಂಘಟನೆಯೊಂದಿಗೆ ಕಲಬುರಗಿ ಪೊಲೀಸರು ಡೀಲ್‌ ಕುದುರಿಸಿರುವ ಶಂಕೆ ಕಾಡುತ್ತಿದೆ. ಸಮಾಜ ಘಾತುಕ ಕೆಲಸಗಳಲ್ಲಿ ಈ ಸಂಘದವರೆಂದು ಹೇಳಿಕೊಂಡವರೇ ಇದ್ದರೂ ಸ್ವಯಂ ಪ್ರೇರಣೆಯ ಕೇಸ್ ಪೊಲೀಸರು ಹಾಕೋದಿಲ್ಲ. ಅವರನ್ನು ಕೇಳೋದಿಲ್ಲ. ನಾವು ಯಾರಾದರೂ ಇದ್ರೆ ಇಷ್ಟೊತ್ತಿಗೆ ನಮ್ಮನ್ನೆಲ್ಲ ಬೆಂಡೆತ್ತುತ್ತಿದ್ದರು. ಪೊಲೀಸರ ಈ ಸೆಲೆಕ್ಟವ್‌ ಅಪ್ರೋಚ್‌ ಕೂಡಾ ಕಲಬುರಗಿಗೆ ಅಪಾಯಕಾರಿ ಎಂದರು.

ಮಾತೆತ್ತಿದರೆ ಹಿಂದು ಸಂಘಟನೆಗಳು, ಸ್ವಾಮೀಜಿಗಳನ್ನೇ ಗುರಿಯಾಗಿಸಿ ಖಡಕ್‌ ಎಚ್ಚರಿಕೆ ನೀಡುವ ಸ್ಟ್ರಾಂಗ್‌ ಮಿನಿಸ್ಟರ್‌ ಪ್ರಿಯಾಂಕ್‌ ಖರ್ಗೆ ಇಂತಹ ಪ್ರಕರಣಗಳು ಪುಂಖಾನುಪುಂಖವಾಗಿ ಕೇಳಿ ಬಂದರೂ ಮೌನದ ಮೊರೆ ಹೊಕ್ಕಿದ್ದಾರೆ ಯಾಕೆ? ಅವರೆಲ್ಲರೂ ನಮ್ಮವರೇ ಬಿಡಿ ಅನ್ನೋ ಧೋರಣೆಯ? ಇಂತಹದ್ದೆಲ್ಲ ಆಗದು. ಕಾನೂನಿನ ಮುಂದೆ ಎಲ್ಲರು ಒಂದೇ. ಸಚಿವರು ಮೊದಲು ಇಂತಹ ಅಪರಾಧ ಪ್ರಕರಣಗಳಲ್ಲಿ ಖಡಕ್‌ ಕಾರ್ಯಚರಣೆಗೆ ಸೂಚಿಸಿ ಜನರ ನೆಮ್ಮದಿ ಮರಳಿ ತಂದುಕೊಡಲಿ ಎಂದರು.

ನನ್ನ ದೂಷಿಸುವ ಸಚಿವ ಪ್ರಿಯಾಂಕ್‌ ತಾವೇ ಮೈಪೂರ್ತಿ ಗ್ರೀಸ್‌ ಮೆತ್ತಿಕೊಂಡಿದ್ದಾರೆ: ಆಂದೋಲಾ ಶ್ರೀ ಲೇವಡಿ

ಸತತ ಮಳೆಗೆ ಜನತೆ ಕಂಗಾಲು

ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಸತತ ಮಳೆ ಸುರಿಯುತ್ತಿದೆ. ಇದರಿಂದಾಗಿ ಮನೆಗಳು ಬೀಳುತ್ತಿವೆ ಜನರ ಬದುಕೇ ಬರ್ಬಾದ್‌ ಆಗುವ ಸ್ಥಿತಿ ತಲುಪಿದೆ. ಬೆಳೆ ಹಾಳಾಗಿ ಜನ ನೆಮ್ಮದಿ ಇಲ್ಲದಂತಾಗಿದ್ದಾರೆ. ಇಷ್ಟಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಕಲಬುರಗಿಗೆ ಬಂದಿಲ್ಲ. ಜನರ ಸಂಕಷ್ಟ ಆಲಿಸಿಲ್ಲ. ಜಿಲ್ಲೆಯ ಜನರ ಸಂಕಷ್ಟ ಆಲಿಸದಷ್ಟು ಅದೆಂತಹ ಕೆಲಸದಲ್ಲಿ ಸಚಿವರು ಮಗ್ನರಾಗಿದ್ದಾರೋ ಎಂದು ಆಂದೋಲಾ ಶ್ರೀ ಪ್ರಶ್ನಿಸಿದರು.

ಕಲಬುರಗಿಯಲ್ಲಿ ಮಲೆಯಿಂದಾಗಿ ಸಾವಿರಾರು ಎಕರೆ ತೊಗರಿ ಹಾಳಾಗಿದೆ. ರೈತರು ಮರು ಬಿತ್ತನೆ ಮಾಡಲಿಕ್ಕೂ ಪುರಸೊತ್ತಿಲ್ಲ. ರಸ್ತೆಗಳು ಹಾಳಾಗಿದ್ದರೂ ಕೇಳೋರಿಲ್ಲ. ಮಳೆ ಬಿದ್ದು ಜನ ಪರೇಶಾನಿಯಲ್ಲಿದ್ದರೂ ಸಾಂತ್ವನ ಹೇಳೋರಿಲ್ಲ. ಮನೆ ಬಿದ್ದು, ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಜೀವಹಾನಿ ನಡೆದರೂ ಸಚಿವರು ಸಾಂತ್ವನ ಹೇಳಲು ಬಂದಿಲ್ಲ. ಇದೆಲ್ಲವೂ ಅವರ ಜನಪರ ಧೋರಣೆಗೆ ಕನ್ನಡಿ ಹಿಡಿದಿವೆ ಎಂದು ಆಂದೋಲಾ ಶೀಗಳು ಆಕ್ರೋಶ ಹೊರಹಾಕಿದರು. ಮಹೇಶ ಗೊಬ್ಬೂರ್‌ ಸೇರಿದಂತೆ ಶ್ರೀರಾಮ ಸೇನೆಯ ಮುಖಂಡರು ಹಾಜರಿದ್ದರು.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ