ತುಮಕೂರು: ಪುತ್ರಿಯನ್ನ ಶಾಲೆಗೆ ಬಿಡಲು ಹೊರಟಿದ್ದವರಿಗೆ ಗುದ್ದಿದ ಬಸ್‌, ಸ್ಥಳದಲ್ಲೇ ತಾಯಿ, ಮಗಳು ಸಾವು..!

By Girish Goudar  |  First Published Sep 9, 2024, 11:58 AM IST

ಕಮಲಮ್ಮ ಇಂದು ಬೆಳಗ್ಗೆ ಮಗಳನ್ನ ಶಾಲೆಗೆ ಬಿಡಲು ಮಗಳ ಜೊತೆ ತೆರಳುತ್ತಿದ್ದರು.  ಈ ವೇಳೆ ಹಿಂಬದಿಯಿಂದ ಬಂದ ಗಾರ್ಮೆಂಟ್ಸ್ ಬಸ್ ಏಕಾಏಕಿ ತಾಯಿ ಮಗಳಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 


ತುಮಕೂರು(ಸೆ.09):  ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು(ಸೋಮವಾರ) ನಡೆದಿದೆ. ಕಮಲಮ್ಮ (35) ಹಾಗೂ ವೀಣಾ (16) ಮೃತ ದುರ್ದೈವಿಗಳು.

ಕಮಲಮ್ಮ ಇಂದು ಬೆಳಗ್ಗೆ ಮಗಳನ್ನ ಶಾಲೆಗೆ ಬಿಡಲು ಮಗಳ ಜೊತೆ ತೆರಳುತ್ತಿದ್ದರು.  ಈ ವೇಳೆ ಹಿಂಬದಿಯಿಂದ ಬಂದ ಗಾರ್ಮೆಂಟ್ಸ್ ಬಸ್ ಏಕಾಏಕಿ ತಾಯಿ ಮಗಳಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವೀಣಾ 10 ನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮತ್ತೊರ್ವ ಬೈಕ್ ಸವಾರನಿಗೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮುದ್ದಪ್ಪ (50) ಗಾಯಾಳು. ಗಾಯಾಳುವನ್ನ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Latest Videos

undefined

ಹಬ್ಬದ ಖುಷಿಯನ್ನೇ ಕಸಿದ ಜವರಾಯ, ತುಮಕೂರು ಬಳಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: 6 ಮಂದಿ ದುರ್ಮರಣ..!

ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಅಧಿಕಾರಿಗಳ ಬೇಜವ್ದಾರಿತನಕ್ಕೆ ಇವರಿಬ್ಬರ ಸಾವಾಗಿದೆ ಎಂದು ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನ ರಸ್ತೆಯಲ್ಲಿಟ್ಟು ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. 

ಹಲವು ಬಾರಿ ಅಂಡರ್ ಪಾಸ್ ನಿರ್ಮಿಸುವಂತೆ ಮನವಿ ಮಾಡಿದರು ಅಧಿಕಾರ ನಿರ್ಲಕ್ಷ್ಯ ಎಂದು ಗ್ರಾಮಸ್ಥರು  ಆರೋಪಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವವನ್ನ ಎತ್ತಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. 

click me!