ಮದ್ಯ ಅಂಗಡಿಗಳನ್ನು ರಾಜ್ಯ ಸರ್ಕಾರ ತೆರದಿದೆ| ದೇವಸ್ಥಾನವನ್ನು ಏಕೆ ತೆರೆದಿಲ್ಲ ಎಂದು ಜನರು ಪ್ರಶ್ನಿಸದೆ ಇರುವುದು ದುರ್ದೈವದ ಸಂಗತಿ: ಕಾಗಿನೆಲೆಯ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ|
ಹಾವೇರಿ(ಮೇ.06): ಕೊರೋನಾ ವೈರಸ್ ಭೀತಿಯ ನಡುವೆಯೂ 42 ದಿನಗಳಿಂದ ಸ್ಥಗಿತಗೊಂಡಿದ್ದ ಮದ್ಯದಂಗಡಿಗಳನ್ನು ರಾಜ್ಯ ಸರ್ಕಾರ ಸೋಮವಾರದಿಂದ ಪುನರಾರಂಭಿಸಿದೆ.
ಈ ಬಗ್ಗೆ ಮಾತನಾಡಿದ ಕಾಗಿನೆಲೆಯ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು, ಮದ್ಯ ಅಂಗಡಿಗಳನ್ನು ರಾಜ್ಯ ಸರ್ಕಾರ ತೆರದಿದೆ. ಆದರೆ, ದೇವಸ್ಥಾನವನ್ನು ಏಕೆ ತೆರೆದಿಲ್ಲ ಎಂದು ಜನರು ಪ್ರಶ್ನಿಸದೆ ಇರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
undefined
ಗ್ರೀನ್‌ಝೋನಲ್ಲಿದ್ದ ಹಾವೇರಿಗೆ ಕಂಟಕವಾದ ಮುಂಬೈ ಲಾರಿ
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಗಳು, ಎರಡು ದಿನಗಳಿಂದ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ದೇವಸ್ಥಾನ ತೆರೆದಿಲ್ಲ. ಈ ಕುರಿತು ಭಕ್ತರು ಯಾರೂ ಪ್ರಶ್ನಿಸಿಲ್ಲ. ಇದನ್ನು ನೋಡಿದರೆ ನಮ್ಮ ಜನರಿಗೆ ದೇವಸ್ಥಾನದ ತೀರ್ಥಕ್ಕಿಂತ ಮದ್ಯದಂಗಡಿಯಲ್ಲಿ ಸಿಗುವ ತೀರ್ಥವೇ ಮುಖ್ಯವಾಗಿರಬೇಕು ಎಂದು ಹೇಳಿಕೊಂಡಿದ್ದಾರೆ.