ಹುಲಿಗೆಮ್ಮ ದೇವಿಗೂ ಕೊರೋನಾ ಕಾಟ: ರಥೋತ್ಸವ ರದ್ದು

By Kannadaprabha News  |  First Published May 6, 2020, 8:07 AM IST

ಹುಲಿಗೆಮ್ಮ ದೇವಿ ಜಾತ್ರೆ ರಥೋತ್ಸವ ರದ್ದು: ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ| ಕೊಪ್ಪಳ ತಾಲೂಕಿನಲ್ಲಿರುವ  ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ|ಮೇ 15 ರಿಂದ 18ರ ವರೆಗೆ ನಡೆಯಬೇಕಿದ್ದ ಜಾತ್ರೆ| ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ|


ಕೊಪ್ಪಳ(ಮೇ.06): ಕೋವಿಡ್‌-19 ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಹುಲಿಗೆಮ್ಮ ಜಾತ್ರೆ ರದ್ದುಪಡಿಸಲಾಗಿದೆ. 

ಮಂಗಳವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಈ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಅವರು, ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮೇ 15 ರಿಂದ 18ರ ವರೆಗೆ ನಡೆಯಬೇಕಿದ್ದ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರೆಯ ರಥೋತ್ಸವ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 

Latest Videos

undefined

ಎಣ್ಣೆ ಖರೀದಿಸಲು ಸರ್ಕಾರಿ ವಾಹನವನ್ನೇ ಬಾರ್‌ಗೆ ತಂದ ಕುಡುಕ..!

ಪ್ರಸ್ತುತ ನಿಯಮಗಳನ್ವಯ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆ ಮೂಲಕ ಕೋರಿದ್ದಾರೆ.
 

click me!