Chikkamagaluru: ವಾಹನ ಸವಾರರಿಗೆ ಕಂಟಕವಾದ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ!

By Govindaraj S  |  First Published Aug 11, 2023, 9:56 PM IST

ಜಿಲ್ಲೆಯ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಸಾವಿನ ಹೆದ್ದಾರಿಯಾಗಿ ವಾಹನ  ಸವಾರರಿಗೆ ಪರಿಣಾಮಿಸಿದೆ. ಈ ಡೇಂಜರ್ ರೋಡ್ ನಲ್ಲಿ ವಾರಕ್ಕೆ ನಾಲ್ಕು ಸಾವು ಸಂಭವಿಸಿದ್ರೆ  17 ಕ್ಕೂ ಹೆಚ್ಚು ಅಪಘಾತಕ್ಕೆ ಕಾರಣವಾಗುತ್ತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.11): ಜಿಲ್ಲೆಯ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಸಾವಿನ ಹೆದ್ದಾರಿಯಾಗಿ ವಾಹನ  ಸವಾರರಿಗೆ ಪರಿಣಾಮಿಸಿದೆ. ಈ ಡೇಂಜರ್ ರೋಡ್ ನಲ್ಲಿ ವಾರಕ್ಕೆ ನಾಲ್ಕು ಸಾವು ಸಂಭವಿಸಿದ್ರೆ  17 ಕ್ಕೂ ಹೆಚ್ಚು ಅಪಘಾತಕ್ಕೆ ಕಾರಣವಾಗುತ್ತಿದೆ. ಆಂಬುಲೆನ್ಸ್‌ಗಳನ್ನ ಅಪಘಾತವಾಗುವ ಸ್ಥಳದಲ್ಲೇ ನಿಲ್ಲಿಸಿರಬೇಕಾದ ಸ್ಥಿತಿಯೂ ಎದುರಾಗಿದೆ. ರೋಗಿಗಳನ್ನ ಕರ್ಕಂಡ್ ಹೋಗೋಕೆ ಆಂಬುಲೆನ್ಸ್ ಚಾಲಕರು ಪರಿಪಾಟಲು ಅನುಭವಿಸ್ತಿದ್ದು, ರಸ್ತೆ ದುರಸ್ಥಿ ಮಾಡಿಕೊಂಡಿ ಅಂತ ಆಂಬುಲೆನ್ಸ್ ಚಾಲಕರೇ ಮನವಿ ಮಾಡ್ತಿದ್ದಾರೆ.ಆದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ ಮಾತ್ರ ಕೋರ್ಟ್ ನತ್ತ ಮುಖ ಮಾಡಿದೆ. 

Tap to resize

Latest Videos

undefined

ರಾಷ್ಟ್ರೀಯ ಹೆದ್ದಾರಿ ಅಲ್ಲ ಸಾವಿನ ಹೆದ್ದಾರಿ: ಒಂದ್ ದಿನ ಟ್ರ್ಯಾಕ್ಟರ್ ಬಿತ್ತು, ಚಾಲಕ ಸಾವು. ಮತ್ತೊಂದ್ ದಿನ ಓಮ್ನಿ ಪಲ್ಟಿ, ಮೂವರು ಗಂಭೀರ. ಮಗದೊಂದು ದಿನ ಲಾರಿಯೇ ಪಲ್ಟಿ, ಚಾಲಕ ಫುಲ್ ಸೀರಿಯಸ್. ಇನ್ನು ಬೈಕಿನಲ್ಲಿ ಬಿದ್ದು-ಎದ್ದು ಹೋಗ್ತಿರೋರ ಸಂಖ್ಯೆ ಲೆಕ್ಕಕ್ಕೇ ಇಲ್ಲ,ಈ ಪರಿ ಸಾವು-ನೋವುಗಳಿಗೆ ಕಾರಣವಾಗುತ್ತಿರುವುದು ಕಾಫಿನಾಡು ಚಿಕ್ಕಮಗಳೂರಿನ ರಾಷ್ಟ್ರೀಯ ಹೆದ್ದಾರಿ 173. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿರೋ ಈ ಮಾರ್ಗಕ್ಕೆ ಕೋಟಿ-ಕೋಟಿ ಖರ್ಚು ಮಾಡಿ ಹೆದ್ದಾರಿ ಏನೋ ನಿರ್ಮಾಣವಾಯ್ತು. ಆದರೆ, ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮದ ಬಳಿ ಒಂದು ಕಿ.ಮೀ.ನಷ್ಟು ದೂರ ರಸ್ತೆ ನಿರ್ಮಾಣ ಮಾಡದೆ ಇರೋದು ಇಷ್ಟೆಲ್ಲಾ ಅವಘಡ-ಅವಾಂತರ-ಅಪಘಾತಕ್ಕೆ ಕಾರಣವಾಗ್ತಿದೆ. 

ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು: ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದು ನದಿಗೆಸೆದ ಪತಿ

ಈ ಒಂದು ಕಿ.ಮೀ. ರಸ್ತೆಯಾಗದಿರೋದು ಅಪಾಯವನ್ನ ಆಹ್ವಾನಿಸುತ್ತಿದೆ. ಕಿತ್ತು ಹೋಗಿರೋ ಹಳ್ಳ-ಗುಂಡಿ ರಸ್ತೆ, ಅಪಘಾತ-ಅವಘಡ, ಸಾವು-ನೋವು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ಒಂದಿಲ್ಲೊಂದು ಅಪಘಾತ ಗ್ಯಾರಂಟಿ. ಡೈಲಿ ಇದೇ ಜಾಗದಿಂದ 3-4 ಕರೆ ಬರ್ತಿರೋದ್ರಿಂದ ರೋಸಿ ಹೋಗಿರೋ ಆಂಬುಲೆನ್ಸ್ ಚಾಲಕರು ದಯವಿಟ್ಟು ರಸ್ತೆ ದುರಸ್ಥಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು ಒಂದು ಕಿ ಲೋ ಮೀಟರ್ ವ್ಯಾಪ್ತಿ ಜಮೀನಿನ ಮಾಲೀಕರು ಪರಿಹಾರದ ವಿಚಾರವಾಗಿ ಕೋರ್ಟ್ ಗೆ ಹೋಗಿದ್ದಾರೆ. ಈ ಕಾರಣಕ್ಕಾಗಿ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಿದ್ದಾರೆ. 

ಅಪಘಾತಕ್ಕೂ ಮೊದಲೇ ಆಂಬುಲೆನ್ಸ್: ಇನ್ನೊಂದು ವಿಶೇಷ ಅಂದ್ರೆ ಈ ರಸ್ತೆಯಲ್ಲಿ ಈ ಪ್ರಮಾಣದ ಅಪಘಾತ ನೋಡಿ ಸಾಕಾಗಿರೋ ಆಂಬುಲೆನ್ಸ್ ಚಾಲಕರು, ನಾವು ಅಪಘಾತಕ್ಕೂ ಮೊದಲೇ ಆಂಬುಲೆನ್ಸ್ ತಂದು ಇಲ್ಲಿ ನಿಲ್ಲಿಸಬೇಕಾಗಿದೆ ಅಂತಿದ್ದಾರೆ. ನಿತ್ಯ ಮೇಲಿಂದ ಮೇಲೆ ಅಪಘಾತ ಆಗ್ತಿರೋದ್ರಿಂದ ಅಪಘಾತದ ಮುನ್ಸೂಚನೆ ಸಿಕ್ಕಿರೋದ್ರಿಂದ ಆಂಬುಲೆನ್ಸ್‌ಗಳನ್ನ ಇಲ್ಲೇ ನಿಲ್ಲಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಸ್ಥಳಿಯರು ಹಾಗೂ ಆಂಬುಲೆನಸ್ ಚಾಲಕರು ಹತ್ತಾರು ಬಾರಿ ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. 

ಪ್ರಧಾನಿ ವಿರುದ್ಧ ಅವಿ​ಶ್ವಾಸ ನಿರ್ಣ​ಯಕ್ಕೆ ಮುಂದಾ​ಗಿ ಬೆತ್ತ​ಲೆ​ಯಾದ ಐಎನ್‌ಡಿಐಎ: ಸಂಸದ ರಾಘವೇಂದ್ರ

ಚೆನ್ನಾಗಿರೋ ರಸ್ತೆಯಲ್ಲಿ ವೇಗವಾಗಿ ಬಂದು ಏಕಾಏಕಿ ರಸ್ತೆ ಮಾಡದ ರಸ್ತೆಯೊಳಗಿನ ಗುಂಡಿ ಬಿದ್ದು ವಾಹನ ಕಂಟ್ರೋಲ್ ಸಿಗದೇ ನಿತ್ಯವೂ ಅಪಘಾತವಾಗುತ್ತಿವೆ. ಅಲ್ಲಲ್ಲಿ ರಸ್ತೆ ನಿರ್ಮಿಸಿದೆ ಹಾಗೇ ಬಿಟ್ಟಿರುವುದು ಚಾಲಕರ ಗೊಂದಲಕ್ಕೆ ಕಾರಣವಾಗಿದೆ. ಹೋಗಲಿ, ರಸ್ತೆ ನಿರ್ಮಾಣವಾಗದ ಹಿನ್ನೆಲೆ ಅಲ್ಲಿ ಸೂಚನಫಲಕಗಳು ಕೂಡ ಇಲ್ಲದಿರೋದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತಿದೆ. ಒಟ್ಟಾರೆ, ಗುಂಡಿ ಬಿದ್ದ ರಸ್ತೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಬೈಕಿನಲ್ಲಿ ನಿತ್ಯ ಎದ್ದು-ಬಿದ್ದು ಹೋಗ್ತಿರೋರು ಸರ್ಕಾರ ಹಾಗೂ ಅಧಿಕಾರಿಗಳಿಗೆ ಇಡಿಶಾಪ ಹಾಕಿಕೊಂಡೇ ಬದುಕುತ್ತಿದ್ದಾರೆ. ಚಿಕ್ಕಮಗಳೂರು-ಕಡೂರು ಮಾರ್ಗದ 40 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಕಡೆ ಸುಮಾರು ಒಂದು ಕಿ.ಮೀ. ರಸ್ತೆಯನ್ನ ಹಾಗೇ ಬಿಟ್ಟಿದ್ದಾರೆ. ಹೈವೆಯಲ್ಲಿ ವೇಗವಾಗಿ ಬರುವ ಚಾಲಕರು ತಕ್ಷಣ ಎದುರಾಗೋ ಗುಂಡಿಗೆ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ.

click me!