ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

Published : Sep 10, 2019, 10:51 AM IST
ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

ಸಾರಾಂಶ

ಐಪಿಎಸ್‌ ಅಧಿಕಾರಿ, ತಮಿಳ್ನಾಡು ಮೂಲದ ಅಣ್ಣಾಮಲೈ ಕೂಡ ತುಳು ಭಾಷೆಯ ಪರವಾಗಿ ಟ್ವೀಟ್‌ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದ #TuluOfficialinKA_KL ಅಭಿಯಾನಕ್ಕೆ ಅಣ್ಣಾಮಲೈ ಅವರೂ ಟ್ವೀಟ್  ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಂಗಳೂರು(ಸೆ.10): ಐಪಿಎಸ್‌ ಅಧಿಕಾರಿ, ತಮಿಳ್ನಾಡು ಮೂಲದ ಅಣ್ಣಾಮಲೈ ಕೂಡ ತುಳು ಭಾಷೆಯ ಪರವಾಗಿ ಟ್ವೀಟ್‌ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದ #TuluOfficialinKA_KL ಅಭಿಯಾನಕ್ಕೆ ಅಣ್ಣಾಮಲೈ ಅವರೂ ಟ್ವೀಟ್  ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ತುಳುನಾಡಿನ ಇತಿಹಾಸದಲ್ಲಿ ಕೋಟಿ ಚೆನ್ನಯ ಹಾಗೂ ಸಿರಿ ಮಹಾತ್ಮೆಯ ಬಗ್ಗೆ ನನಗೆ ಅಭಿಮಾನ ಇದೆ. ಆದ್ದರಿಂದ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಅರ್ಹವಾಗಿದೆ ಎಂದು ಭಾನುವಾರ ರಾತ್ರಿ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ಗಮನಕ್ಕೆ ಟ್ವೀಟ್‌!

2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯವರಾಗಿದ್ದಾಗ ತುಳುವನ್ನು ಅಧಿಕೃತ ಭಾಷೆಯಾಗಿ ಮಾಡುವುದಕ್ಕೆ ಬದ್ಧ ಎಂದಿದ್ದರು. ಅದನ್ನು ಒಬ್ಬರು ಟ್ವೀಟ್‌ ಮಾಡಿದ್ದು, 10 ವರ್ಷವಾದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ನೆನಪಿಸಿದ್ದಾರೆ.

ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್‌ ಅಭಿಯಾನ!

ಅನೇಕರು ತುಳು ಲಿಪಿಯಲ್ಲೇ ಬರೆದು ಅದನ್ನು ಕೂಡ ಟ್ವೀಟ್‌ ಮಾಡಿರುವುದು ಅಭಿಯಾನದ ವಿಶೇಷ. ಕೆಲವು ಮಂದಿ ಮಲಯಾಳಂನಲ್ಲಿ ಟ್ವೀಟ್‌ ಅಭಿಯಾನದ ಬಗ್ಗೆ ಬರೆದು ಅದನ್ನು ಕೇರಳ ಮುಖ್ಯಮಂತ್ರಿಯವರಿಗೂ ಟ್ವೀಟ್‌ ಮಾಡಿದ್ದಾರೆ.

ತುಳು ಪರ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್: ಅಭಿಯಾನಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?