ಕೊಪ್ಪಳ: ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದ ತಾಯಿ..!

By Web Desk  |  First Published Sep 10, 2019, 10:30 AM IST

ಹೆತ್ತ ತಾಯಿಯೇ ಸ್ವಂತ ಮಗನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರೋ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ತುತ್ತು ಕೊಟ್ಟ ಕೈಗಳೇ ಮಗನ ಕುತ್ತಿಗೆಗೆ ಉರುಳಾಗಿದ್ದು, ಮಗನನ್ನು ಕೊಂದ ಮೇಲೂ ಮಹಿಳೆ ಹನಿ ಕಣ್ಣೀರು ಸುರಿಸದೆ ಕುಳಿತಿದ್ದಳು.


ಕೊಪ್ಪಳ(ಸೆ.10): ಗಂಡ ದುಡಿಯಲಿಲ್ಲ ಎಂದು ಪಾಪಿ ತಾಯಿಯೊಬ್ಬಳು ಸ್ವಂತ ಮಗನನ್ನೇ ಕುತ್ತಿಗೆ ಹಿಸುಕಿ ಕೊಂದಿದ್ದಾಳೆ. ತುತ್ತುಕೊಟ್ಟ ಕೈಗಳೇ ಹಸುಗೂಸಿನ ಕುತ್ತಿಗೆಗೆ ಉರುಳಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

ಗಂಡ ದುಡಿಯಲಿಲ್ಲ ಎಂದು ಮಗನಿಗೆ ಸಾವಿನ ಶಿಕ್ಷೆ ಕೊಟ್ಟಿದ್ದಾಳೆ.  ಹಾಲು ಕುಡಿಸಿದ ಕೈಯಿಂದ ಉಸಿರುಗಟ್ಟಿಸಿ ಮಗನನ್ನು ಕೊಲೆಗೈದ ಕ್ರೂರ ತಾಯಿ ಕೊಲೆ ಮಾಡಿದ ಮೇಲೂ ಮನೆಯಲ್ಲಿಯೇ ಇದ್ದಳು.

Tap to resize

Latest Videos

ಥೂ ಇದೆಂಥಾ ಜನ... 100 ರೂ. ಬಾಕಿ ಕೂಲಿ ಕೇಳಿದ್ದಕ್ಕೆ ಕೊಲೆ ಮಾಡ್ಬಿಟ್ರು!

ಕವಿತಾ ಅಲಿಯಾಸ್ ಪ್ರತಿಮಾ 16 ತಿಂಗಳ ಕಂದಮ್ಮಅಭಿನವನನ್ನು ಕೊಂದ ಕಟುಕ‌ ತಾಯಿ. ಗಂಡ ಪೆಟ್ರೋಲ್ ಬಂಕ್‌ಗೆ ತೆರಳಿದಾಗ ಘಟನೆ ನಡೆದಿದ್ದು ಬೆಳಗ್ಗೆ ಕೊಲೆ ಮಾಡಿ‌ ಪ್ರತಿಮಾ ಸಂಜೆವರೆಗೂ ಹನಿ ಕಣ್ಣೀರು ಹಾಕದೆ ಕುಳಿತಿದ್ದಳು. ಸಂಜೆ ಪ್ರತಿಮಾಳ ಪತಿ ಮನೆಗೆ ಬಂದಾಗ ಮಗ ಸತ್ತಿರುವುದು ನೋಡಿ ಶಾಕ್ ಆಗಿದ್ದಾನೆ.

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಬಂದ್..ಕಲ್ಯಾಣ ಕರ್ನಾಟಕವೇ ಎಲ್ಲ

ಪ್ರತಿಮಾಳನ್ನು ಪೊಲೀಸರು ಬಂಧಿಸಿದ್ದು,ಈ ಹಿಂದೆ ಎರಡು ಮೂರು ಬಾರಿ ಕವಿತಾ ಆತ್ಮಹತ್ಯೆಗೆ ಯತ್ನಿಸಿದ್ದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ.ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!