‘ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟರೂ ನಾವು ಬಿಡಲ್ಲ : ನಿತ್ಯ ನನ್ನ ಸಂಪರ್ಕದಲ್ಲಿದ್ದಾರೆ’

Published : Sep 10, 2019, 10:39 AM ISTUpdated : Sep 10, 2019, 10:46 AM IST
‘ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟರೂ ನಾವು ಬಿಡಲ್ಲ : ನಿತ್ಯ ನನ್ನ ಸಂಪರ್ಕದಲ್ಲಿದ್ದಾರೆ’

ಸಾರಾಂಶ

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕೈ ಬಿಟ್ಟರೂ ಸಹ ನಾವು ಕೈ ಬಿಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಅವರನ್ನು ಆಹ್ವಾನಿಸಿಯೇ ಸದರಾ ಮಾಡುತ್ತೇವೆ ಎಂದರು. 

ಮೈಸೂರು [ಸೆ.10] : ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕೈ ಬಿಟ್ಟರೂ ನಾವು ಕೈ ಬಿಡಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಅರಮನೆಯಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಸಿದ್ದರಾಮಯ್ಯ ಅವರನ್ನು ದಸರೆಗೆ ಆಹ್ವಾನ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರನ್ನು ಸೇರಿಸಿಕೊಂಡೆ ದಸರಾ ಮಾಡುತ್ತೇವೆ  ಎಂದರು. 

ಸಿದ್ದರಾಮಯ್ಯ ದಿನ ನಿತ್ಯ ನನ್ನ ಸಂಪರ್ಕದಲ್ಲಿ ಇದ್ದಾರೆ. ಆಹ್ವಾನ ಪತ್ರಿಕೆ ಇನ್ನು ಮುದ್ರಣಕ್ಕೆ ಹೋಗಿಲ್ಲ. ಅವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ ಎಂದು ಸಚಿವ ಸಿ.ಟಿ ರವಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ನೀವು ಬನ್ನಿ ನಿಮ್ಮ ಜತೆ ಸಿದ್ದರಾಮಯ್ಯರ ಮನೆಗೆ ಹೋಗುತ್ತೇನೆ ಎಂದಿದ್ದು, ಸಿದ್ದರಾಮಯ್ಯ ಅವರನ್ನು ಕೈ ಬಿಡುವ ಮಾತೇ ಇಲ್ಲ ಎಂದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC