ಸರ್ಕಾರದ ವಿರುದ್ಧ ಗರಂ ಆದ ಜ್ಯೋತಿರಾಜ್

By Suvarna News  |  First Published Dec 16, 2019, 11:33 AM IST

ಟೋಲ್ ಟ್ರಾಫಿಕ್ ನಲ್ಲಿ ನಿಂತು ಜ್ಯೋತಿರಾಜ್ ಅಸಮಾಧಾನ ಹೊರಹಾಕಿದ್ದಾರೆ. ದುಡ್ಡು ಬರೋ ನಿಯಮಗಳನ್ನು ಮಾತ್ರ ಮಾಡ್ತಾರೆ ಎಂದು ಹೇಳಿದ್ದಾರೆ. 


ನೆಲಮಂಗಲ [ಡಿ.16] : ಫಸ್ಟ್ಯಾಗ್ ನಿಯಮ ಕಡ್ಡಾಯದಿಂದಾಗಿ ಎಲ್ಲಾ ಟೋಲ್ ಗಳಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಇದಕ್ಕೆ ಬಂಡೆಗಳನ್ನು ಏರುವ ಕೋತಿರಾಜ್ ಎಂದೇ ಕರೆಸಿಕೊಳ್ಳುವ ಜ್ಯೋತಿರಾಜ್ ಅಸಮಧಾನ ಹೊರಹಾಕಿದ್ದಾರೆ. 

ನೆಲಮಂಗಲದ ಟೋಲ್ ಬಳಿಯಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದ್ ಜ್ಯೋತಿರಾಜ್, ಇದರಿಂದ ಸಮಸ್ಯೆಯಾಗುತ್ತಿದ್ದು ಟೋಲ್ ಗಳಲ್ಲಿ ಕಿಲೋಮೀಟರ್ ವರೆಗೆ ಟ್ರಾಫಿಕ್ ಉಂಟಾಗುತ್ತಿದೆ. 

Latest Videos

undefined

20 ವರ್ಷದವರೆಗೆ ಮದ್ಯಪಾನ ಮಾಡಬಾರದು ಎಂದು ನಿಯಮಗಳನ್ನು ಮಾಡಲಿ, ಆದರೆ ಸರ್ಕಾರ ದುಡ್ಡು ಬರುವ ನಿಯಮಗಳನ್ನು ಮಾತ್ರ ಮಾಡ್ತಾರೆ. ಫಾಸ್ಟ್ ಟ್ಯಾಗಿಂದ ಯಾರಿಗೂ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ. 

ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಡಿ.15ರಿಂದ ಕಡ್ಡಾಯವಾಗಿದ್ದ ಫಾಸ್ಟ್ಯಾಗ್ ಅಳವಡಿಕೆಗೆ ಒಂದು ತಿಂಗಳು ಮುಂದೂಡಲಾಗಿದೆ. 

ಫಾಸ್ಟ್ಯಾಗ್ ಅಳವಡಿಕೆ ಮುಂದೂಡಿಕೆ : ಸವಾರರು ನಿರಾಳ!...

ಆದರೆ ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ಶೇ.75ರಷ್ಟು ದ್ವಾರಗಳನ್ನು ಫಾಸ್ಟ್ಯಾಗ್ ವಾಹನಗಳಿಗೆ ಮೀಸಲಿಟ್ಟಿದ್ದು, ಇಲ್ಲದ ವಾಹನಗಳಿಗೆ ಶೇ.25ರಷ್ಟು ದ್ವಾರಗಳನ್ನು ಮಾತ್ರವೇ ಮೀಸಲಿಡಲಾಗಿದೆ. ಇದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಕಲ್ಲು ಬಂಡೆಗಳು, ಕಟ್ಟಡಗಳನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೇ ಏರುವ ಜ್ಯೋತಿರಾಜ್ ಈ ಮೂಲಕವೇ ಪ್ರಸಿದ್ಧರಾಗಿದ್ದು, ಚಲನಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

click me!