ಕಾಂಗ್ರೆಸ್ ಪಕ್ಷದವರು ತಾಲೀಬಾನಿಗಳಿಗೆ ನೆರವು ನೀಡುತ್ತಿದ್ದಾರೆ ಎಂದು ಸಚಿವ ಸಿ. ಟಿ. ರವಿ ಆರೋಪಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು(ಡಿ.16): ಕಾಂಗ್ರೆಸ್ ಪಕ್ಷದವರು ತಾಲೀಬಾನಿಗಳಿಗೆ ನೆರವು ನೀಡುತ್ತಿದ್ದಾರೆ ಎಂದು ಸಚಿವ ಸಿ. ಟಿ. ರವಿ ಆರೋಪಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಕಾಂಗ್ರೆಸ್‌ನವರು ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಪೌರತ್ವ ಕಾಯ್ದೆ ವಿಚಾರವಾಗಿ ಒಂದು ಪಿತೂರಿ ನಡೆಯುತ್ತಿದೆ. ಆ ಪಿತೂರಿಯಲ್ಲಿ ತಾಲಿಬಾನಿಗಳು, ಕಾಂಗ್ರೆಸಿಗರು, ಕಮ್ಯೂನಿಸ್ಟ್ ಒಟ್ಟಾಗಿ ಪಿತೂರಿ ಭಾಗ ಆಗಿರೋದು ದುರದೃಷ್ಟಕರ ಎಂದಿದ್ದಾರೆ.
ಪಬ್ಲಿಕ್ ವಾಲ್‌ನಲ್ಲಿ ಅಶ್ಲೀಲ ಚಿತ್ರ, ಗೋಡೆ ವಿರೂಪಗೊಳಿಸುವವರ ವಿರುದ್ಧ ತಿರುಗಿ ಬಿದ್ದ ಪೊಲೀಸರು
ನಿರಾಶ್ರಿತರು ಹಾಗೂ ನುಸುಳುಕೋರರಿಗೆ ವ್ಯತ್ಯಾಸವಿಲ್ಲವೇ ಎಂದು ಕಾಯ್ದೆ ವಿರೋಧ ಮಾಡುವವರಿಗೆ ಸಿಟಿ ರವಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನ, ಆಫಘಾನಿಸ್ಥಾನದಿಂದ ಧಾರ್ಮಿಕ ಕಾರಣಕ್ಕೆ, ಭಯೋತ್ಪಾದಕ ಕಾರಣಕ್ಕೆ ಬಂದವರು ನಿರಾಶ್ರಿತರು. ಅವರಿಗಿದ್ದಿದ್ದು ಮೂರೇ ದಾರಿ ಸಾವು,ಮಾತಾಂತರ, ಪೂರ್ವಜನರನ್ನ ತೋರಿಯೋದು. ಪಾಕಿಸ್ತಾನ, ಅಪಘಾನಿಸ್ಥಾನ, ಬಾಂಗ್ಲಾದೇಶದಿಂದ ಮತೀಯ ಕಾರಣಕ್ಕೆ ಬಂದವರು ನಿರಾಶ್ರಿತರು ಅವರಿಗೆ ಭಾರತ ಆಶ್ರಯ ಕೊಡದೇ ಬೇರೆ ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅದು ತಪ್ಪು ಎನ್ನುವುದಾದರೇ ಪಾಕಿಸ್ತಾನ ರಚನೆಗೆ ಯಾಕೆ ಕಾಂಗ್ರೆಸ್ ಅವಕಾಶ ಕೊಟ್ಟಿತ್ತು ಎಂದು ಪ್ರಶ್ನಿಸಿರುವ ಅವರು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದ ಪಾಪದ ಕೂಸಿನ ಪರಿಣಾಮ ಇಂದು ಜನ ಕಷ್ಟ ಅನುಭವಿಸುವಂತಾಗಿದೆ. ಹಿಂದೂ, ಸಿಕ್, ಭೌದ್ದರೂ ಪಾಕಿಸ್ತಾನ, ಬಾಂಗ್ಲದಲ್ಲಿ ಅಲ್ಪಸಂಖ್ಯಾತರು. ಆ ಕಾರಣಕ್ಕೆ ಅವರಿಗೆ ಪೌರತ್ವ ಕೊಡೋ ತಿರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?
ಈಗ ಮಾಡುತ್ತಿರುವ ವಿರೋಧ ಪಾಕಿಸ್ತಾನ ರಚನೆಗೆ ಮಾಡಿದ್ರೆ ಪಾಕಿಸ್ತಾನ ಹುಟ್ಟುತ್ತಲೇ ಇರಲಿಲ್ಲ. ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು. ಅದಕ್ಕೆ ಅವರೇ ಹೊಣೆ. ಭಯೋತ್ಪಾದಕರಿಗೆ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್ ಭಯಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದಕರಿಗೆ ಪೌರತ್ವ ಕೊಟ್ಟರೆ ದೇಶ ಏನಾಗಬಹುದು..? ದೇಶದ ನಾಗರಿಕರ ರಕ್ಷಣೆ ನಮ್ಮ ಕರ್ತವ್ಯ ಅದನ್ನ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ತಾಲಿಬಾನಿಗಳ ಜೊತೆ ಸೇರಿ ಮೋದಿ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿದೆ. ಅದಕ್ಕೆ ದೇಶದ ಜನ ಅವಕಾಶ ಕೊಡಲ್ಲ, ಇವರ ಹುನ್ನಾರ ಜನರಿಗೆ ಗೊತ್ತಿದೆ. ನಾವು ಅದನ್ನು ಬಯಲಿಗೆಳೆಯುತ್ತೇವೆ ಎಂದು ಹೇಳಿದ್ದಾರೆ.
'ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದವ್ನಿಗೆ ಈಗ ನೊಣ ಹೊಡೆಯೋರು ಇಲ್ಲ'..!