ಪಕ್ಷ ಕೇಳಿದ್ರೆ ಸಚಿವ ಸ್ಥಾನದಿಂದ ಇಳಿತೀನಿ ಎಂದ ಸಿಟಿ ರವಿ

By Suvarna NewsFirst Published Dec 16, 2019, 11:32 AM IST
Highlights

ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಅವರಾಗಿಯೇ ಕೊಟ್ಟಿದ್ದಾರೆ. ಸ್ಥಾನದಿಂದ ಇಳಿ ಎಂದರೆ ಇಳಿಯುತ್ತೇನೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಡಿಸಿಎಂ ಸ್ಥಾನದ ಬಗ್ಗೆಯೂ ಮಾತನಾಡಿದ್ದಾರೆ.

ತುಮಕೂರು(ಡಿ.16): ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಅವರಾಗಿಯೇ ಕೊಟ್ಟಿದ್ದಾರೆ. ಸ್ಥಾನದಿಂದ ಇಳಿ ಎಂದರೆ ಇಳಿಯುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಡಿಸಿಎಂ ಸ್ಥಾನದ ಬಗ್ಗೆಯೂ ಮಾತನಾಡಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಸಿಟಿ ರವಿ ಮಾತನಾಡಿ, ಡಿಸಿಎಂ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಸಿಎಂ ಆಯ್ಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ‌ ವಿಚಾರ. ಪಕ್ಷದ ವರಿಷ್ಠರ ಜೊತೆ ಸಮಾಲೋಚನೆ ಮಾಡಿ ನಿರ್ಣಯ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ತಾಲಿಬಾನಿಗಳಿಗೆ ನೆರವು: ಸಿಟಿ ರವಿ

ಮುಂಚೆ ಕೊಟ್ಟ ಮಾತು ಈಡೇರಿಸುತ್ತೆನೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ಪಕ್ಷದ ನಿದರ್ಶನದಂತೆ ನಡೆಯುತ್ತೇನೆ. ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಆದರೂ ಕೊಟ್ಟಿದ್ದಾರೆ. ನಾಳೆ ಪಕ್ಷ ಇಳಿ ಅಂದರೆ ಇಳಿಯುತ್ತೇನೆ ಎಂದಿದ್ದಾರೆ.

ನನಗೆ ಪಕ್ಷಕ್ಕಿಂತ ದೊಡ್ಡ ಸಂಗತಿ ಇದೆ ಎಂದು ಅನಿಸಿಲ್ಲ. ಪಕ್ಷದ ಸುಗ್ರಿವಾಜ್ಞೆ ಎಲ್ಲರೂ ಪಾಲಿಸಬೇಕು. ಅವರವರ ಅಭಿಮಾನಿಗಳು ಅವರವರ ನಾಯಕರಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ..? ಏನೇ ಆದರೂ ಪಕ್ಷ ನಿರ್ಣಯ ಮಾಡಲಿದೆ ಎಂದಿದ್ದಾರೆ.

'ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದವ್ನಿಗೆ ಈಗ ನೊಣ ಹೊಡೆಯೋರು ಇಲ್ಲ'..!

click me!