ಸರ್ಕಾರಿ ಕಾಲೇಜು ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಏಸುಕ್ರಿಸ್ತ, ಮೇರಿ ಮಾತೆ!

By Sathish Kumar KH  |  First Published Aug 28, 2024, 7:22 PM IST

ಚಾಮರಾಜನಗರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಲಾದ ಪ್ರಮಾಣ ಪತ್ರದಲ್ಲಿ ಏಸುಕ್ರಿಸ್ತ ಹಾಗೂ ಮಾತೆ ಮೇರಿ ಭಾವಚಿತ್ರಗಳನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ. 


ಚಾಮರಾಜನಗರ (ಆ.28): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಪ್ರಮಾಣಪತ್ರಗಳಲ್ಲಿ ಏಸುಕ್ರಿಸ್ತ ಹಾಗೂ ಮಾತೆ ಮೇರಿ ಭಾವಚಿತ್ರಗಳನ್ನು ಮುದ್ರಣ ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ಪ್ರಮಾಣಪತ್ರಗಳನ್ನು ಗೆದ್ದ ಮಕ್ಕಳಿಗೂ ಹಂಚಿಕೆ ಮಾಡಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಇತ್ತೀಚಿಗೆ ಹನೂರಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ನೀಡಲಾದ ಪ್ರಮಾಣ ಪತ್ರದಲ್ಲಿ ಏಸುಕ್ರಿಸ್ತ ಹಾಗೂ ಮಾತೆ ಮೇರಿ ಭಾವಚಿತ್ರಗಳನ್ನು ಮುದ್ರಿಸಿ ಕೊಡಲಾಗಿದೆ. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಹನೂರಿನ ಕ್ರಿಸ್ತರಾಜ ಪಪೂ ಕಾಲೇಜು ಹಾಗು ಮಾರ್ಟಳ್ಳಿಯ ಸೇಂಟ್ ಮೇರಿಸ್ ಸಂಯುಕ್ತ ಪಪೂ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪ್ರಮಾಣಪತ್ರವನ್ನು ಮುದ್ರಿಸಿರುವ ಕಾಲೇಜು ಆಡಳಿತ ಮಂಡಳಿಯು ಏಸುಕ್ರಿಸ್ತ ಮತ್ತು ಮೇರಿ ಫೋಟೋ ಅಳವಡಿಕೆ ಮೂಲಕ ಧರ್ಮ ಪ್ರಚಾರ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Tap to resize

Latest Videos

undefined

ಸರ್ಕಾರದಿಂದ ಆಯೋಜನೆ ಮಾಡಲಾದ ಕ್ರೀಡಾಕೂಟದಲ್ಲಿ ಅದೇಗೆ ನೀವು ಒಂದು ಧರ್ಮಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಳವಡಿಕೆ ಮಾಡಿದ್ದೀರಿ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಕಾಲೇಜುಗಳ ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಅಳವಡಿಕೆ ಮಾಡಿದ್ದರೂ, ಇದಕ್ಕೆ ಒಪ್ಪಿಗೆ ಕೊಡುವ ಮೂಲಕ ಚಾಮರಾಜನಗರ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಇನ್ನು ಪ್ರಮಾಣಪತ್ರ ವಿತರಣೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. 

ನೀವೊಬ್ಬ ಸಿಎಂ ಆಗಿ ವೈಟ್ನರ್ ಪೇಪರ್‌ಗೆ ಟಾರ್ಚ್‌ ಹಾಕಿ ನೋಡೋದು ಶೋಭೆ ತರೊಲ್ಲ: ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಏಸುಕ್ರಿಸ್ತ ಹಾಗೂ ಮೇರಿ ಚಿತ್ರಗಳನ್ನು ಅಳವಡಿಕೆ ಮಾಡಿ ನೀವು ಧರ್ಮ ಪ್ರಚಾರ ಮಾಡಬಹುದು. ಆದರೆ, ಬಹುಸಂಖ್ಯಾತರಾದ ಶಾಲೆ- ಕಾಲೇಜುಗಳಲ್ಲಿ ಗಣೇಶ, ಸರಸ್ವತಿ ಪೂಜೆ ಮಾಡಿದ್ರೆ ಕೋಮುವಾದ ಎಂದು ಹೇಳುತ್ತೀರಿ. ಕೋಮುವಾದ ಎಂದು ಎತ್ತಿ ತೋರಿಸುವ ಕಿಡಿಗೇಡಿಗಳ ಕಣ್ಣಿಗೆ ಏಸುಕ್ರಿಸ್ತ ಮತ್ತು ಮೇರಿ ಭಾವಚಿತ್ರಗಳು ಇರುವುದು ಕಾಣಿಸುವುದಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸರ್ಕಾರಿ ಕ್ರೀಡಾಕೂಟದ ಸರ್ಟಿಫಿಕೆಟ್ ನಲ್ಲಿ ಮೇರಿ ಮಾತೆ ಏಸುಕ್ರಿಸ್ಥರ ಫೋಟೊ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಯು ಡಿಡಿಪಿಐ ಮಂಜುನಾಥ್ ಅವರು ಒಟ್ಟು ಕ್ರೀಡಾಕೂಟದಲ್ಲಿ ಗೆಲ್ಲುವ ಮಕ್ಕಳಿಗೆ ವಿತರಣೆ ಮಾಡಲು ಸಿದ್ಧಪಡಿಸಿ 700 ಪ್ರಶಸ್ತಿ ಪತ್ರಗಳಿಗೆ ಸಹಿ ಮಾಡುವ ಜವಾಬ್ದಾರಿ ನನ್ನದು. ಈ ಹಿನ್ನಲೆಯಲ್ಲಿ ನನ್ನ ಸಹಿಯನ್ನ ಸ್ಕ್ಯಾನ್ ಮಾಡಿ ವಾಟ್ಸಪ್ ನಲ್ಲಿ ಕಳುಹಿಸಲಾಗಿತ್ತು. ಇದರಿಂದಾಗಿ ನನ್ನ ಗಮನಕ್ಕೆ ಬಾರದೆ, ಪ್ರಶಸ್ತಿ ಪತ್ರದಲ್ಲಿ ನನ್ನ ಸಹಿಯನ್ನ ಹಾಕಲಾಗಿದೆ. ಈ ಸಂಬಂಧವಾಗಿ ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳಿದರು.

ಮುಡಾ ಹಗರಣ: ವೈಟ್ನರ್‌ ಹಿಂದಿನ ಸತ್ಯ ಬಯಲು ಮಾಡಿದ ಸಿಎಂ ಸಿದ್ದರಾಮಯ್ಯ

ಇನ್ನು ಹನೂರು ತಾಲೂಕು ಮಟ್ಟದಲ್ಲಿ ನಡೆಸಲಾದ ಎಲ್ಲ ಪಿಯು ಕಾಲೇಜುಗಳ ಕ್ರೀಡಾಕೂಟದ ಪ್ರಶಸ್ತಿ ವಿಜೇತ ಮಕ್ಕಳಿಗೆ ನೀಡಲಾದ ಪ್ರಮಾಣ ಪತ್ರಗಳನ್ನು ಹಿಂಪಡೆದಿದ್ದೇವೆ. ಬೇರೆ ಪ್ರಮಾಣ ಪತ್ರವನ್ನ ನಾವು ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಿದ್ದೇನೆ. ಈ ವಿಚಾರದ ಕುರಿತು ನಾನು ವಿಷಾದ ವ್ಯಕ್ತ ಪಡಿಸುತ್ತೇನೆ. ಕಾನೂನಾತ್ಮಕವಾಗಿ ಖಂಡಿತ ಕ್ರಮವನ್ನ ತೆಗೆದುಕೊಳ್ಳುತ್ತೇನೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನೋಟಿಸ್ ಕೊಟ್ಟು ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಪದವಿ ಪೂರ್ವ ಇಲಾಖೆ ಡಿಡಿಪಿಐ ಮಂಜುನಾಥ್ ಮಾಹಿತಿ ನೀಡಿದ್ದಾರೆ.

click me!