ನಮಗೆ ಇನ್ನೂ ದರ್ಶನ್ ಶಿಫ್ಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ನಾವು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ನಾವು ಪದೇ ಪದೇ ಮಾಡುತ್ತಿಲ್ಲ. ದರ್ಶನ್ ಬಂದ್ರೇ ಒಂದು ಪ್ರತ್ಯೇಕ ರೂಂನಲ್ಲಿ ಇಡುವ ವ್ಯವಸ್ಥೆ ಆಗಿದೆ. ಪ್ರತ್ಯೇಕ ಬ್ಯಾರಿಕ್ ನಂಬರ್ 15ರಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ನಿಗಾ ಇಡುವುದು ಅವಶ್ಯಕತೆ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ಇಡಲಾಗ್ತಿದೆ. ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡ್ತೇವೆ: ಬಳ್ಳಾರಿ ಎಸ್ಪಿ ಶೋಭಾರಾಣಿ
ಬಳ್ಳಾರಿ(ಆ.28): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಬರುವ ಹಿನ್ನಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಎಸ್ಪಿ ಶೋಭಾರಾಣಿ ಅವರು ಇಂದು(ಬುಧವಾರ) ಹೈವೋಲ್ಟೆಜ್ ಸಭೆ ನಡೆಸಿದ್ದಾರೆ.
ಜೈಲಿನಲ್ಲಿ ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಬಳ್ಳಾರಿ ಎಸ್ಪಿ ಶೋಭಾರಾಣಿ ಅವರು, ನಮಗೆ ಇನ್ನೂ ದರ್ಶನ್ ಶಿಫ್ಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ನಾವು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ನಾವು ಪದೇ ಪದೇ ಮಾಡುತ್ತಿಲ್ಲ. ದರ್ಶನ್ ಬಂದ್ರೇ ಒಂದು ಪ್ರತ್ಯೇಕ ರೂಂನಲ್ಲಿ ಇಡುವ ವ್ಯವಸ್ಥೆ ಆಗಿದೆ. ಪ್ರತ್ಯೇಕ ಬ್ಯಾರಿಕ್ ನಂಬರ್ 15ರಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ನಿಗಾ ಇಡುವುದು ಅವಶ್ಯಕತೆ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ಇಡಲಾಗ್ತಿದೆ. ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋದು ಡೌಟ್?
ದರ್ಶನ್ ಯಾವಾಗ ಶಿಫ್ಟ್ ಆಗ್ತಾರೆ ಎನ್ನುವ ಬಗ್ಗೆ ನಮಗೆ ಇನ್ನು ಮಾಹಿತಿ ಕೊಟ್ಟಿಲ್ಲ. ಭದ್ರತೆ ಹಾಗೂ ಕ್ರೌಡ್ ಕಂಟ್ರೊಲ್ ಪೊಲೀಸರಿಗೆ ಹೊಸ ಕೆಲಸ ಅಲ್ಲ ಎಂದು ತಿಳಿಸಿದ್ದಾರೆ.
ಜೈಲಿನಲ್ಲಿ ಗಾಂಜಾ ಸಿಗುತ್ತೆ ಎನ್ನುವ ಮಾಜಿ ಕೈದಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಸ್‌ಪಿ ಶೋಭಾರಾಣಿ, ಇದೆಲ್ಲಾ ಸುಳ್ಳು ಇಷ್ಟು ಜನ ಜೈಲಿನಲ್ಲಿದ್ದಾರೆ. ಇವರೊಬ್ಬರೇ ಆರೋಪ ಮಾಡಿದ್ದಾರೆ. ಪ್ರಚಾರಕ್ಕೆ ಈ ರೀತಿ ಹೇಳಿದಬಹು. ಏನೇ ಇರಲಿ, ಅವರನ್ನ ಕರೆದು ವಿಚಾರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.