ಚಿಕ್ಕಮಗಳೂರು ನಗರದ ಬೀದಿಯಲ್ಲಿ ನಿಂತು ಕತ್ತೆ ಹಾಲು ಕರೆದು ಅಲ್ಲಿಯೇ ಜನರಿಗೆ ನೀಡುತ್ತಿರುವುದು ಕಳೆದೆರಡು ದಿನಗಳಿಂದ ಸಾಮಾನ್ಯವಾಗಿದೆ. ನಗರದ ಹೌಸಿಂಗ್ ಬೋಡ್, ಕೋಟೆ ಬಡಾವಣೆ ಸುತ್ತಮುತ್ತ ಗುಡಿಸಲು ಹಾಕಿಕೊಂಡು 40ಕ್ಕೂ ಹೆಚ್ಚು ಕತ್ತೆಗಳೊಂದಿಗೆ ಸುಮಾರು 15 ಮಂದಿ ತಂಡವೊಂದು ಬೀಡು ಬಿಟ್ಟಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.28): ನಗರದಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ ಕಂಡು ಬರುತ್ತಿದೆ. ಚಿಕ್ಕಮಗಳೂರಿನಲ್ಲಿ ಪ್ರಸ್ತುತ ಕತ್ತೆ ಹಾಲು ಭರ್ಜರಿಯಾಗಿ ಮಾರಾಟವಾಗುತ್ತಿದೆ. ನಗರದ ಬೀದಿ ಬೀದಿಯಲ್ಲಿ ನಿಂತು ಕತ್ತೆ ಹಾಲು ಕರೆದು ಅಲ್ಲಿಯೇ ಜನರಿಗೆ ನೀಡುತ್ತಿರುವುದು ಕಳೆದೆರಡು ದಿನಗಳಿಂದ ಸಾಮಾನ್ಯವಾಗಿದೆ. ನಗರದ ಹೌಸಿಂಗ್ ಬೋಡ್, ಕೋಟೆ ಬಡಾವಣೆ ಸುತ್ತಮುತ್ತ ಗುಡಿಸಲು ಹಾಕಿಕೊಂಡು 40ಕ್ಕೂ ಹೆಚ್ಚು ಕತ್ತೆಗಳೊಂದಿಗೆ ಸುಮಾರು 15 ಮಂದಿ ತಂಡವೊಂದು ಬೀಡು ಬಿಟ್ಟಿದೆ.
50 ರೂ ನಂತೆ ಮಾರಾಟ :
ನಿತ್ಯ ಬೆಳಗ್ಗೆ ವಿವಿಧ ಬಡಾವಣೆಗಳಿಗೆ ತೆರಳಿ, ಕತ್ತೆ ಹಾಲು ಎಂದು ಕೂಗುತ್ತಾ ಮಾರಾಟ ಮಾಡುತ್ತಿದೆ. ಅದ್ರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮೂರು ದಿನಗಳ ಕಾಲ ಇದನ್ನು ಕುಡಿಸಿದ್ರೆ ಕೆಮ್ಮು, ನೆಗಡಿ ಗುಣವಾಗಲಿದೆ. ಅಲ್ಲದೆ ಜೀರ್ಣಶಕ್ತಿ ವೃದ್ಧಿಸಲಿದೆ ಎಂದು ತಮಿಳುನಾಡಿನ ಈ ತಂಡ ಪ್ರಚಾರ ಮಾಡುತ್ತಿದೆ. ಸಾವಿರಾರು ಹಣ ಸಂಪಾದಿಸುತ್ತಿದ್ದು ಭರ್ಜರಿಯಾಗಿ ಕತ್ತೆ ಹಾಲು ವ್ಯಾಪಾರ ಮಾಡುತ್ತಿದೆ.ಒಂದು ಲೋಳ್ಳೆ ಕತ್ತೆ ಹಾಲುಗೆ 50 ರೂನಂತೆ ಮಾರಾಟವನ್ನು ಮಾಡುತ್ತಿದ್ದಾರೆ.
ಪ್ರವಾಸಿ ತಾಣಗಳಲ್ಲಿ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೇ ಟೋಪಿ? ಕಳಸ ಡಿಆರ್‌ಎಫ್‌ಒ ಅಮಾನತು
ಕತ್ತೆ ಹಾಲಿನಲ್ಲಿ ಔಷಧಿ ಗುಣ !
ಹಲವು ದಿನಗಳಿಂದ ಅಲ್ಲಲ್ಲಿ ಕತ್ತೆ ಹಾಲನ್ನು ಮಕ್ಕಳಿಗೆ ನೀಡುತ್ತಿದ್ದ ಬಹುತೇಕ ನಾಗರಿಕರು, ಇಂದು ಬಹಿರಂಗವಾಗಿ ಮಾರಾಟ ಮಾಡುತ್ತಿರುವುದನ್ನು ಕಂಡು ಖರೀದಿಸಲು ಮುಂದಾಗುತ್ತಿದ್ದಾರೆ. ಅಲ್ಲದೆ ಕೆಲವರಂತೂ ಒಂದ್ ಸಲ ಟೇಸ್ಟ್ ನೋಡೋಣ ಎಂದು ಸ್ಥಳದಲ್ಲೇ ಹಾಲನ್ನು ಸೇವಿಸುತ್ತಿದ್ದಾರೆ. ಇನ್ನು ಕೆಲವರು ಮಕ್ಕಳಿಗೆ ಉತ್ತಮ ಔಷಧಿ ಎಂದು ನಂಬಿ, ಮುಗಿಬಿದ್ದು ಆಂಧ್ರಪ್ರದೇಶ,ತಮಿಳುನಾಡು ತಂಡದವರಿಂದ ಖರೀದಿಸುತ್ತಿದ್ದಾರೆ.ಇನ್ನು ವೃದ್ದರು, ಗರ್ಭಹಿಣೀಯರು ಸಹ ಕತ್ತೆಯನ್ನು ಖರೀದಿಸಿ ಕುಡಿಯುತ್ತಿದ್ದಾರೆ.ಮಲೆನಾಡಿನಲ್ಲಿ ಮಲೆನಾಡು ಗಿಡ್ಡ ಹಸುವಿನ ತಳಿಯ ಹಾಲಿಗಿಂತ ಕತ್ತೆ ಹಾಲೇ ಶ್ರೇಷ್ಟತೆ ಎಂಬಂತೆ ಪ್ರಚುರಪಡಿಸುವಲ್ಲಿ ಈ ತಂಡ ಮುಂದಾಗುತ್ತಿದೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಒಟ್ಟಾರೆ ಕತ್ತೆ ಹಾಲಿನಲ್ಲಿ ಜೌಷಧಿ ಗುಣವಿದೆ ಎನ್ನುವ ನಂಬಿಕೆಯ ಮೇಲೆ ಜನರು ಹಾಲು ಖರೀದಿಸಿ ಕುಡಿಯುತ್ತಿದ್ದಾರೆ. ಈ ಮೂಲಕ ಕತ್ತೆಗೂ ಶುಕ್ರ ದಸೆ ಬಂದಿದೆ ಎನ್ನಬಹುದಾಗಿದೆ.