ನಾರಾಯಣಗೌಡರತ್ತ ಚಪ್ಪಲಿ ತೂರಿದ ಜೆಡಿಎಸ್‌ ಕಾರ‍್ಯಕರ್ತರು

By Divya Perla  |  First Published Nov 19, 2019, 11:34 AM IST

ಕೆ.ಆರ್‌ .ಪೇಟೆ ಉಪಚುನಾವಣೆ ಕದನ ರಣಾಂಗಣವಾಗಿದೆ. ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ಚಪ್ಪಲಿ ತೂರಾಟ ಮಾಡಿದ ಪ್ರಕರಣ ನಡೆದಿದೆ.


"

ಮಂಡ್ಯ(ನ.19): ಕೆ.ಆರ್‌ .ಪೇಟೆ ಉಪಚುನಾವಣೆ ಕದನ ರಣಾಂಗಣವಾಗಿದೆ. ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ಚಪ್ಪಲಿ ತೂರಾಟ ಮಾಡಿದ ಪ್ರಕರಣ ನಡೆದಿದೆ.

Tap to resize

Latest Videos

undefined

ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ನಾಮಪತ್ರ ಸಲ್ಲಿಸಿ ಹೊರಗೆ ಬಂದ ವೇಳೆ ಜೆಡಿಎಸ್‌ ಕಾರ್ಯಕರ್ತರ ಮೆರವಣಿಗೆ ಅಲ್ಲಿಗೆ ಆಗಮಿಸಿತು. ಆ ವೇಳೆ ನಾರಾಯಣಗೌಡರು ಜೆಡಿಎಸ್‌ಗೆ ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೌಡರ ವಿರುದ್ಧ ಧಿಕ್ಕಾರ ಕೂಗಿದಾಗ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ವಾಗ್ಯುದ್ದವೇ ನಡೆಯಿತು. ಬಾವುಟಗಳನ್ನು ಪಕ್ಷದ ಬಾವುಟಗಳನ್ನು ಹಿಡಿದು ಕೆಲವರು ತೂರಾಟವನ್ನು ಮಾಡಿದ್ದಾರೆ.

ಸಾಲ ವಾಪಸ್ ಕೇಳಿದ್ದಕ್ಕೆ ಪೊಲೀಸ್ ಪೇದೆಯಿಂದ ಲೈಂಗಿಕ ಕಿರುಕುಳ

ಈ ವೇಳೆ ಜೆಡಿಎಸ್‌ ಕಾರ್ಯಕರ್ತರ ಗುಂಪಿನಲ್ಲಿದ್ದ ದುಷ್ಕರ್ಮಿಯೊಬ್ಬ ಚಪ್ಪಲಿ ತೂರಿ ಅವಮಾನ ಮಾಡಿದರು. ಈ ವೇಳೆ ಸಚಿವ ಜಿ.ಸಿ.ಮಾಧುಸ್ವಾಮಿ ಮೇಲೂ ತಳ್ಳಾಟ ಮಾಡಿದ್ದಾರೆ. ಪೊಲೀಸರು ಹರಸಾಹಸ ಮಾಡಿ ಎಲ್ಲರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ತಹಸೀಲ್ದಾರ್‌ ಕಚೇರಿ ಬಳಿ ಉದ್ವಿಗ್ನ ಪರಿಸ್ಥಿತಿ ಎದುರಾಯಿತು. ಒಂದು ಹಂತದಲ್ಲಿ ನಾರಾಯಣಗೌಡರು ತಾಲೂಕು ಕಚೇರಿಯೊಳಗೆ ನಾಮಪತ್ರ ಸಲ್ಲಿಸುವ ವೇಳೆ ಹೊರಗಿದ್ದ ಜೆಡಿಎಸ್‌ ಕಾರ್ಯಕರ್ತರು ಬಾಂಬೆ ಕಳ್ಳ, ಬಾಂಬೆ ಕಳ್ಳ ಎಂದು ಕೂಗಾಟವನ್ನು ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಬಿಜೆಪಿ ಕಾರ್ಯಕರ್ತರ ಹಣಾಹಣಿ ಉದ್ವಿಗ್ನವಾಗಿದ್ದು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಆಕ್ರೋಶಗೊಂಡ ಕಾರ್ಯಕರ್ತರನ್ನು ಪಕ್ಷದ ನಾಯಕರು ಸಮಾಧಾನ ಪಡಿಸಿದರು. ಇದರಿಂದಾಗಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಎರಡು ಕಾರ್ಯಕರ್ತರ ಸಂಖ್ಯೆ ಹೆಚ್ಚಿದ್ದರಿಂದ ಪೊಲೀಸರು ನಾರಾಯಣಗೌಡರನ್ನು ಸುರಕ್ಷಿತವಾಗಿ ಉದ್ವಿಗ್ನ ಸ್ಥಳದಿಂದ ಕರೆದೊಯ್ಯುವ ಪ್ರಯತ್ನ ಮಾಡಿದರು. ನಂತರ ಎಸ್ಪಿ ಪರಶುರಾಮ್‌ ಅವರ ಕಾರಿನಲ್ಲಿ ನಾರಾಯಣಗೌಡರನ್ನು ಕರೆದುಕೊಂಡು ಹೋಗುವಾಗಲೂ ಜೆಡಿಎಸ್‌ ಕಾರ‍್ಯಕರ್ತರು ಬಾವುಟವನ್ನು ಎಸೆದು ಧಿಕ್ಕಾರ ಕೂಗಿದ್ದು ಕೇಳಿ ಬಂದಿತು.

ನಿಖಿಲ್‌ ಮುಖ ನೋಡಲಿಲ್ಲ:

ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಪೊಲೀಸರು ಕರೆದುಕೊಂಡು ಹೋಗುವಾಗ ಪಕ್ಕದಲ್ಲೇ ಇದ್ದ ನಿಖಿಲ್‌ ಕುಮಾರಸ್ವಾಮಿ ಮುಖ ಕೂಡ ನೋಡದೆ ನೆರವಾಗಿ ಒಳಗೆ ಹೋದರು. ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಇಂದು ಕೆ.ಆರ್‌ .ಪೇಟೆ ಅಕ್ಷರಶಃ ರಣರಂಗವಾಗಿತ್ತು. ಮೂರು ಪಕ್ಷಗಳ ನಾಯಕರು ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಕಾರ್ಯಕರ್ತರಲ್ಲಿ ಗೆಲುವಿನ ಪ್ರೇರಣೆ ಮಾಡಿದ್ದು ಕಂಡು ಬಂದಿತು. ಕೆ.ಆರ್‌ ಪೇಟೆಯ ತಾಲೂಕು ಕಚೇರಿ ಸುತ್ತಾಮುತ್ತ ನಿಷೇಧಾಜ್ಞೆ ಜಾರಿಯಲ್ಲಿತ್ತು. ಸ್ವತಃ ಜಿಲ್ಲಾ ಎಸ್ಪಿ ಪರಶುರಾಮ್‌ ಉಸ್ತುವಾರಿ ವಹಿಸಿದ್ದರು.

ಚೆನ್ನಾಗಿ ಕಾಣ್ತೀಯಾ ಎಂದು ಕಿಸ್ ಕೊಡ್ತಾನೆ ಈ ಪ್ರಿನ್ಸಿಪಲ್, ವಿದ್ಯಾರ್ಥಿನಿಯರ ಕಣ್ಣೀರು

ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌ .ದೇವರಾಜು ನನಗೆ ಎಕ್ಕಡದಲ್ಲಿ ಹೊಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸುತ್ತಾರೆ. ರಾಜಕಾರಣವನ್ನು ರಾಜಕಾರಣದ ರೀತಿಯಲ್ಲಿ ಮಾಡಬೇಕು. ಚಪ್ಪಲಿ ಎಸೆದಿದ್ದು ಅವರ ಸಂಸ್ಕಾರವನ್ನು ತೋರಿಸುತ್ತದೆ. ನನಗೂ ಜನ ಇದ್ದಾರೆ. ಶಕ್ತಿ ಇದೆ. ಆದರೆ, ನಾನು ಯಾವತ್ತೂ ಅಂತಹ ಕೆಲಸ ಮಾಡಲ್ಲ. ಏಕೆಂದರೆ ನನ್ನ ಅಪ್ಪ ಮತ್ತು ಪಕ್ಷ ಅಂತಹ ಸಂಸ್ಕಾರವನ್ನು ಕಲಿಸಿಲ್ಲ. ನಾವು ಯಾವಾಗಲೂ ತಾಳ್ಮೆಯಿಂದ ಇರುತ್ತೇವೆ. ಎಲ್ಲವನ್ನು ಜನ ನೋಡುತ್ತಿರುತ್ತಾರೆ. ಗುಂಡಾವರ್ತನೆಯನ್ನು ಜನ ಸಹಿಸುವುದಿಲ್ಲ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!