ಗೊಂದಲ : ಮರು ಚುನಾವಣೆ ನಡೆಸಲು ಹೆಚ್ಚಿದೆ ಪಟ್ಟು

By Kannadaprabha NewsFirst Published Nov 5, 2020, 11:37 AM IST
Highlights

ಗೊಂದಲವಾದ ಹಿನ್ನೆಲೆಯಲ್ಲಿ  ಮರು ಚುನಾವಣೆ ನಡೆಸಲು ಆಗ್ರಹ ಹೆಚ್ಚಾಗಿದೆ.  ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ

ಹಾಸನ (ನ.05):  ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿ ಹಾಸನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ನಗರಸಭೆಯ ಜೆಡಿಎಸ್‌ ಸದಸ್ಯರು   ಪ್ರತಿಭಟನೆ ನಡೆಸಿದರು.

ಹಾಸನ ನಗರಸಭೆಯ ಜೆ.ಡಿ.ಎಸ್‌ ಸದಸ್ಯರು 2020 ಅಕ್ಟೋಬರ್‌ 29 ರಂದು ಬೆಳಗ್ಗೆ ಹಾಸನ ನಗರಸಭಾ ಕಾರ್ಯಾಲಯಕ್ಕೆ ಹಾಜರಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ತೆರಳಿದಾಗ ಅಲ್ಲಿಯ ಸಿಬ್ಬಂದಿಗಳು ಚುನಾವಣಾಧಿಕಾರಿ ಈಗಷ್ಟೆಉಪವಿಭಾಗಾಧಿಕಾರಿಗಳು ಹೊರಗೆ ಹೋಗಿದ್ದು, ಅಲ್ಲಿಗೆ ಹೋಗಿ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದ್ದರಿಂದ ಚುನಾಯಿತ ನಗರಸಭಾ ಜೆ.ಡಿ.ಎಸ್‌ ಸದಸ್ಯರು ಹಾಸನದ ಉಪವಿಭಾಗಾದಿಕಾರಿಗಳ ಕಛೇರಿಗೆ ನಾಮಪತ್ರ ಸಲ್ಲಿಸಲು ಮುಂದಾದಾಗ ಅಲ್ಲಿಯ ಸಿಬ್ಬಂದಿಯು ಚುನಾವಣಾದಿಕಾರಿಗಳು ಈಗಷ್ಟೆಹಾಸನ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಛೇರಿಗೆ ತರಳದರೆಂದು ತಿಳಿಸಿದರು ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದಾಗ ಸ್ವೀಕರಿಸದೆ ಒತ್ತಾಯಕ್ಕೆ ಮಣಿದು ಏಕಪಕ್ಷೀಯವಾಗಿ ನಡೆದುಕೊಂಡಿರುವುದಾಗಿ ಗಂಭೀರವಾಗಿ ಆರೋಪಿಸಿದರು.

ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ರಾಕೀಯ ಒತ್ತಡ ಮತ್ತು ಉದ್ದೇಶಪೂರ್ವಕವಾಗಿ ನಗರಸಭೆಯಲ್ಲಿ ಬಹುಮತ ಹೊಂದಿರುವ ಜೆ.ಡಿ.ಎಸ್‌ ಪಕ್ಷದ ಸದಸ್ಯರುಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿದೆ. ನಾವುಗಳು ಈಗ ಹಾಸನ ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರೂ ಸಹ ಸಭೆಯಲ್ಲಿಯೆ ಇದ್ದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರ ಅಣತಿಯಂತೆ ನೀವು ನಮಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಿಲ್ಲ ಎಂದರು.

ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ

ಹಾಸನ ನಗರಸಭೆಯ ಅಧ್ಯಕ್ಷ/ಉಪಾಧ್ಯಕ್ಷ ಚುನಾವಣಾಧಿಕಾರಿಗಳು ಚುನಾವಣಾ ಪ್ರಕ್ರಿಯೆಯ ಸಭೆಯಲ್ಲಿ ನಡೆದ ಎಲ್ಲಾ ಪರ ಮತ್ತು ವಿರೋಧ ಹೇಳಿಕೆಗಳನ್ನು ದಾಖಲಿಸದೆ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ನಡೆದುಕೊಂಡಿದ್ದಾರೆ. ಕೂಡಲೇ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಹೆಚ್‌.ಪಿ. ಸ್ವರೂಪ್‌, ಕಮಲ್‌ ಕುಮಾರ್‌, ಇರ್ಷಾದ್‌ ಪಾಷ, ಭಾನುಪ್ರಕಾಶ್‌, ಮಹೇಶ್‌, ಪ್ರೇಮಮ್ಮ, ನಗರಸಭೆ ಸದಸ್ಯರಾದ ಸಿ.ಆರ್‌. ಶಂಕರ್‌, ಸಯ್ಯದ್‌ ಅಕ್ಬರ್‌, ಚಂದ್ರೇಗೌಡ, ಪ್ರಶಾಂತ್‌, ಜೆ. ಮಂಜುನಾಥ್‌ ಇತರರು ಪಾಲ್ಗೊಂಡಿದ್ದರು.

click me!