ವಾರ್ನಿಂಗ್ ಕೊಟ್ಟ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

Kannadaprabha News   | Asianet News
Published : Nov 26, 2020, 08:40 AM ISTUpdated : Nov 26, 2020, 08:43 AM IST
ವಾರ್ನಿಂಗ್ ಕೊಟ್ಟ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಸಾರಾಂಶ

ಮಂಡ್ಯದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ ಅವರು ನೀಡಿದ ಎಚ್ಚರಿಕೆ ಯಾರಿಗೆ..?

ಮಂಡ್ಯ (ನ.26): ಬಡವರ ಹಣ ತಿಂದು ನಮಗ್ಯಾಕೆ ಕೆಟ್ಟ ಹೆಸರು ತರುತ್ತೀರಾ ಎಂದು ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. 

 ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ಹಣ ಎಗರಿಸಿದ ಸಿಬ್ಬಂದಿಗೆ  ಸಾರ್ವಜನಿಕ ಸಭೆಯಲ್ಲಿ  ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. 

ನಾಗಮಂಗಲ ತಾಲೂಕಿನ ಜಯಮ್ಮ ಎಂಬ ವೃದ್ಧೆಗೆ ಬರಬೇಕಾದ ಹಣ ಪಾಂಡವಪುರದ ಜಯಮ್ಮ ಎನ್ನುವರ ಖಾತೆಗೆ ಜಮೆ ಆಗಿತ್ತು. ನಕಲಿ ದಾಖಲೆ ನೀಡಿ ವೃದ್ಧೆಯ ಹಣವನ್ನು ಸಿಬ್ಬಂದಿ ದುರುಪಯೋಗ ಮಾಡಿದ್ದರು. 

ಎತ್ತುಗಳ ಮೇಲೆ 14 ಟನ್‌ ಕಬ್ಬು: ಪ್ರಕರಣ ದಾಖಲು ...

ವಿಚಾರ ಬಯಲಾಗುತ್ತಿದ್ದಂತೆ ವೃದ್ಧೆಗೆ 20ಸಾವಿರ ಹಣ ಹಿಂದಿರುಗಿಸಲಾಗಿತ್ತು. ಆದ್ರೆ ಸಿಬ್ಬಂದಿಗಳ ಅಕ್ರಮಕ್ಕೆ ಸಾರ್ವಜನಿಕವಾಗಿಯೇ  ಶಾಸಕ ಸುರೇಶ್ ಗೌಡ ಚಳಿ ಬಿಡಿಸಿದ್ದಾರೆ.  

ನಿಮಗೆ ಸರ್ಕಾರ ಸಂಬಳ ಕೊಡಲ್ವ.? ಲಂಚ ಕೊಟ್ಟು ನೀವಿಲ್ಲಿ ಕೆಲಸ ಮಾಡ್ತಿಲ್ಲ. ನಾವು ಯಾವತ್ತಾದರು ಏನಾದರು ಕೇಳಿದ್ದೀವಾ.? 
ನಿಮ್ಮ ಅಕ್ರಮಗಳೆಲ್ಲವೂ ಗೊತ್ತಿದೆ. ನೀನು ಹೆಣ್ಣುಮಗಳು ಅಂತ ಸುಮ್ಮನಾಗಿದ್ದೇನೆ.  ಇಲ್ಲದಿದ್ರೆ ಸಸ್ಪೆಂಡ್ ಮಾಡ್ತಿದ್ದೆ ಎಂದು ಸಿಬ್ಬಂದಿಗೆ ಗದರಿ ಎಚ್ಚರಿಕೆ ನೀಡಿದ್ದಾರೆ. 

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ