ಜೈಲಿಗೆ ಹೋದ ನಾಯಕನ ಉಚ್ಛಾಟನೆಗೆ ಡಿಕೆಶಿ ಹಿಂದೇಟು : ಅಖಂಡ ಮಾತಿಗೆ ಡೋಂಟ್ ಕೇರ್

By Kannadaprabha NewsFirst Published Nov 26, 2020, 7:50 AM IST
Highlights

ಜೈಲಿಗೆ ಹೋದ ಕೈ ಮುಖಂಡರೋರ್ವರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಾಗಿಲ್ಲ.  ದೂರಿಗೂ ಕ್ಯಾರೆ ಎನ್ನುತ್ತಿಲ್ಲ

ಬೆಂಗಳೂರು (ನ.26):  ಡಿ.ಜೆ.ಹಳ್ಳಿ - ಕೆ.ಜೆ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ  ಸಂಪತ್ ರಾಜ್ ಮೇಲೆ ಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷರು ಹಿಂದೇಟು ಹಾಕುತ್ತಿದ್ದಾರೆ. 

ಜೈಲಿಗೆ ಹೋಗಿರುವ ಸಂಪತ್ ರಾಜ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಂಪತ್ ರಾಜ್ ಪಕ್ಷದಿಂದ ಉಚ್ಛಾಟನೆ ಮಾಡಿ ಅಂತ ಮನವಿ ಮಾಡಿದ್ದ ಅಖಂಡ ಶ್ರೀನಿವಾಸಮೂರ್ತಿ ಮಾತಿಗೆ ಅಧ್ಯಕ್ಷರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. 

ಸಿಬಿಐ ವಿಚಾರಣೆ ಅಂತ್ಯ: ವಡೋದರಾದತ್ತ ಡಿಕೆ ಶಿವಕುಮಾರ್...! .

ಖುದ್ದು ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಿ ಸಂಪತ್ ರಾಜ್ ಉಚ್ಛಾಟನೆಗೆ ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದ್ದು, ಆದರೆ ಅಖಂಡ ಶ್ರೀನಿವಾಸಮೂರ್ತಿ ಮನವಿಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಯಾರೆ ಎನ್ನುತ್ತಿಲ್ಲ. 

ಸಂಪತ್ ರಾಜ್ ಮೇಲೆ ಕ್ರಮ ಕೈಗೊಳ್ಳಲು ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದ ಡಿಕೆಶಿ  ಶಿಸ್ತು ಸಮಿತಿಗೆ ಪ್ರಕರಣ ಶಿಫಾರಸ್ಸು ಮಾಡದೇ ಹಾಗೆ ಮೌನವಹಿಸಿದ್ದಾರೆ. 

ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿಗೆ ಪ್ರಕರಣದ ವರ್ಗಾವಣೆ ಮಾಡಬೇಕಿತ್ತು. ಇನ್ನೂ ನಮಗೆ ಯಾವುದೇ ಪ್ರಕರಣ ಶಿಫಾರಸ್ಸು ಆಗಲೇ ಇಲ್ಲ ಎಂದು ರೆಹಮಾನ್ ಖಾನ್ ಹೇಳಿದ್ದು,  ಶಿಸ್ತು ಕ್ರಮ ಜರುಗಿಸುವ ಯಾವುದೇ ಕ್ರಮಕ್ಕೂ ಕೆಪಿಸಿಸಿ ಅಧ್ಯಕ್ಷರು ಮುಂದಾಗಿಲ್ಲ.  

click me!