ಚಿಂತಾಮಣಿ (ಸೆ.27: ತಾಲೂಕಿನ ಮುರುಗಮಲ್ಲಾ ಹೋಬಳಿಯ ಪೆದ್ದೂರಿನಲ್ಲಿ ನಡೆದ ಜೆಡಿಎಸ್ (JDS) ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಶಾಸಕ ಎಂ. ಕೃಷ್ಣಾರೆಡ್ಡಿ (M Krishnareddy) ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ ಕೃಷ್ಣಾರೆಡ್ಡಿ ಜೆಡಿಎಸ್‌ಗೆ ನಿಷ್ಠಾವಂತನಾಗಿದ್ದು ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ. ಶಬ್ದ ದಾರಿದ್ರ್ಯವನ್ನು ಹೊಂದಿರುವ ವ್ಯಕ್ತಿಗಳು ನಾನು ಕ್ಷೇತ್ರವನ್ನು ಬಿಟ್ಟು ಪಲಾಯನ ಮಾಡುತ್ತೇನೆದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗುಡಿಗಿದರು.
ಪ್ರತಿಯೊಬ್ಬರು ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ( Membership Registration Campaign) ಗುರುತರವಾದ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರಾಮಾಣಿಕ ರೀತಿಯಲ್ಲಿ ಮನೆ ಮನೆ ಭೇಟಿ ನೀಡುವುದರ ಮೂಲಕ ಹಾಗೂ ನಮ್ಮ ಜನಪ್ರಿಯ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡ (HD Devegowda), ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿರವರ (HD Kumaraswamy) ಸಾಧನೆಗಳನ್ನು ಹಾಗೂ ಅವರು ಜಾರಿಗೆ ತಂದಿರುವ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದರ ಮೂಲಕ 2023ಕ್ಕೆ 113 ಸ್ಥಾನಗಳನ್ನು ಗೆದ್ದು ಕುಮಾರಸ್ವಾಮಿರನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂದರು.
ಜೆಡಿಎಸ್ ಸೇರುವ ಒಲವು ತೋರಿದ್ರಾ ಕಾಂಗ್ರೆಸ್ ಹಿರಿಯ ನಾಯಕ? ತೋಟದ ಮನೆಯಲ್ಲಿ ಮಹತ್ವದ ಚರ್ಚೆ
ಬೆಂಗಳೂರು-ಮದನಹಳ್ಳಿ-ಕಡಪ ಬೈಸ್ ಪಾಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯು ನಿಮ್ಮದೇ ಕಚೇರಿಯಾಗಿದೆ. ಕ್ಷೇತ್ರದಲ್ಲಿನ ಯಾವೊಬ್ಬ ವ್ಯಕ್ತಿ ಬಂದರು ಅವರಿಗೆ ಆತ್ಮೀಯವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ನಗರಸಭಾ ಸದಸ್ಯ ಅಗ್ರಹಾರ ಮುರಳಿ ಮಾತನಾಡಿ, ಬೂತ್ ಮಟ್ಟದಲ್ಲೇ 150ಕ್ಕೂ ಅಧಿಕ ಸದಸ್ಯತ್ವ ನೋಂದಣಿ ಮಾಡಿಸಬೇಕು ಒಟ್ಟು 15000ಕ್ಕೂ ಹೆಚ್ಚು ಸದಸ್ಯತ್ವ ನೋಂದವಣೆಯನ್ನು ಮಾಡಿಸಲು ಬದ್ಧರಾಗಬೇಕು. ಜೆಡಿಎಸ್ ಪಕ್ಷದ ಮುಂಬರುವ ಚುನಾವಣೆಗಳಿಗೆ ಗೆದ್ದು ಬೀಗಬೇಕಾದರೆ ಬೂತ್ ಮಟ್ಟತಳಪಾಯವಾಗಬೇಕು ಮತ್ತು ಬಲಿಷ್ಟಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸೀಕಲ್‌ನ ಶ್ರೀನಿವಾಸಗೌಡ, ದಿನ್ನಮಿಂದಪಲ್ಲಿ ಬೈರಾರೆಡ್ಡಿ, ಕೈವಾರ ಸುಬ್ಬಾರೆಡ್ಡಿ, ಶಬ್ಬೀರ್, ಯನಮಲಪಾಡಿ ಚಂದ್ರಾರೆಡ್ಡಿ, ಶ್ರೀನಿವಾಸ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಘುನಾಥರೆಡ್ಡಿ, ವರುಣ್‌ರೆಡ್ಡಿ, ದೇವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಮ್ಮ, ಮಾಳಪ್ಪಲ್ಲಿ ಶಂಕರರೆಡ್ಡಿ, ಸಾಧಿಕ್, ರೆಡ್ಡಪ್ಪ, ಬಾಲಾಜಿ, ಮುನುಗನಹಳ್ಳೀ ಶ್ರೀನಿವಾಸ್, ಅಬ್ಬುಗುಂಡು ಮಧು, ಕಾರ್ಯದರ್ಶಿ ಜನಾರ್ಧನ್, ಕಾರ್ಯಾಧ್ಯಕ್ಷ ಕೃಷ್ಣ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.