ಜಿ.ಟಿ. ದೇವೇಗೌಡ ಜೊತೆ ಸುಧಾಕರ್‌ ಚರ್ಚೆ : ಕುತೂಹಲ ಮೂಡಿಸಿದ ನಾಯಕರ ಭೇಟಿ

By Kannadaprabha NewsFirst Published Sep 27, 2021, 12:41 PM IST
Highlights
  • ಕಾಂಗ್ರೆಸ್‌ ಸೇರುವ ನಿರ್ಧಾರದ ಬೆನ್ನಲ್ಲೇ ಡಾ.ಸುಧಾಕರ್ ಭೇಟಿ ಮಾಡಿದ ಜಿ ಟಿ ದೇವೇಗೌಡ
  • ದೇವೇಗೌಡ ಜೊತೆಗೆ ಸುಧಾಕರ್‌ ಕಾಣಿಸಿಕೊಂಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ
  •  

ಚಿಕ್ಕಬಳ್ಳಾಪುರ (ಸೆ.27): ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ (MC Sudhakar) ಮುಂದಿನ ರಾಜಕೀಯ ನಡೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕಾಂಗ್ರೆಸ್‌ (Congress) ಸೇರುವುದಾಗಿ ಇತ್ತೀಚೆಗೆ ಪ್ರಕಟಿಸಿರುವ ಮಾಜಿ ಸಚಿವ ಮೈಸೂರಿನ ಜಿ.ಟಿ.ದೇವೇಗೌಡ (GT Devegowda) ಜೊತೆಗೆ ಸುಧಾಕರ್‌ ಕಾಣಿಸಿಕೊಂಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಾಲಿ ಜೆಡಿಎಸ್‌ ಶಾಸಕರಾಗಿರುವ ಜಿ.ಟಿ.ದೇವೇಗೌಡ ಇತ್ತೀಚೆಗೆ ಪ್ರದೇಶದ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK shivakumar) ಭೇಟಿಗೂ ಮೊದಲು ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಸಹ ಡಿಕೆಶಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದರೆ ಸುಧಾಕರ್‌ ಯಾವುದೇ ಸ್ಪಷ್ಟನಿರ್ಧಾರಕ್ಕೆ ಬಂದಿರಲಿಲ್ಲ.

ಎಚ್‌ಡಿಡಿ ನನಗೆ ದೇವರ ಸಮಾನ : ಜಿಟಿಡಿ

ಆದರೆ ಶಾಸಕ ಟಿ.ಡಿ.ದೇವೇಗೌಡ ಹಲವು ಷರತ್ತುಗಳೊಂದಿಗೆ ಕಾಂಗ್ರೆಸ್‌ ಸೇರ್ಪಡೆ ನಿರ್ಧಾರ ಪ್ರಕಟಿಸಿದ ಬೆನ್ನಲೇ ಮದುವೆ ಕಾರ್ಯಕ್ರಮವೊಂದರಲ್ಲಿ ಜಿ.ಟಿ.ದೇವೇಗೌಡ ಮತ್ತು ಸುಧಾಕರ್‌ ಭೇಟಿ ಮಾಡಿ ಚರ್ಚಿಸಿದ್ದಾರೆ. ಇವರೊಂದಿಗೆ ಚಲನಚಿತ್ರ ನಿರ್ದೇಶಕ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರದ ಆರ್‌.ಚಂದ್ರು ಇದ್ದರು.

2013 ರ ಚುನಾವಣೆ (Election) ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋತಿರುವ ಎಂ.ಸಿ.ಸುಧಾಕರ್‌ , ಕಾಂಗ್ರೆಸ್‌ ಸೇರ್ಪಡೆಗೆ ಒಲವು ತೋರಿದ್ದು ಅದೇ ಕಾರಣಕ್ಕೆ. ಡಿಕೆಶಿ ಬುಲಾವ್‌ ಮೇರೆಗೆ ಒಮ್ಮೆ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಗೌರಿಬಿದನೂರು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವರೆಡ್ಡಿ ಸಹ ಇದ್ದರು. ಆದರೆ ಸುಧಾಕರ್‌ ಸೇರ್ಪಡೆಗೆ ಕೋಲಾರ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ (KH Muniyappa) ಅಡ್ಡಗಾಲು ಆಗಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸುಧಾಕರ್‌ ರಾಜಕೀಯ ನಡೆ ಸಾಕಷ್ಟುಗೊಂದಲದ ಗೂಡಾಗಿದ್ದು ಅತ್ತ ಬಿಜೆಪಿಯನ್ನು (BJP) ಅಪ್ಪಿಕೊಳ್ಳದೇ ಇತ್ತ ಕಾಂಗ್ರೆಸ್‌ ಸೇರ್ಪಡೆ ಬಗ್ಗೆಯೂ ಸ್ಪಷ್ಟನಿಲುವು ತಾಳದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಇಬ್ಬರು ಜೆಡಿಎಸ್ ತೊರೆಯಲು ಸಿದ್ಧ : ಮತ್ತೆ ಆಪರೇಷನ್ ಕಾಂಗ್ರೆಸ್ ಸದ್ದು ಮಾಡಿದೆ. ಇಬ್ಬರು ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್ ಗಾಲ ಹಾಕಿದೆ. ಕಾಂಗ್ರೆಸ್‌ಗೆ ಚಾಮುಂಡೇಶ್ವರಿ ಕ್ಷೇತ್ರದ  ಜಿಟಿ ದೇವೆಗೌಡ ಹಾಗು ಕೋಲಾರದ ಶ್ರೀನಿವಾಸ್‌ ಗೌಡ ಜೆಡಿಎಸ್‌ (JDS) ಬಿಟ್ಟು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ.

ದೇವೇಗೌಡ್ರು ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ

ಇಬ್ಬರು ಮುಖಂಡರು ಡಿಕೆ ಸಿವಕುಮಾರ್ ಭೇಟಿಯಾಗಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ (Election) ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. 

click me!