Shivamogga: ಹುಟ್ಟು​ಹ​ಬ್ಬ​ದಂದೇ ಕಣ್ಣೀರಿಟ್ಟ ಜೆಡಿಎಸ್‌ ಅಭ್ಯರ್ಥಿ ಶಾರದ ಅಪ್ಪಾಜಿಗೌಡ

By Govindaraj S  |  First Published Jan 2, 2023, 9:21 PM IST

ವಿಧಾನಸಭಾ ಕ್ಷೇತ್ರದ ಜೆಡಿ​ಎಸ್‌ ಅಭ್ಯರ್ಥಿ ಶಾರದ ಅಪ್ಪಾಜಿಗೌಡ ಹುಟ್ಟುಹಬ್ಬ ಪಕ್ಷದ ಜಿಲ್ಲಾ ಯುವ ಘಟಕ, ವಿವಿಧ ಸಂಘಟನೆಗಳಿಂದ, ಅಭಿಮಾನಿಗಳಿಂದ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು. 


ಭದ್ರಾವತಿ (ಜ.02): ವಿಧಾನಸಭಾ ಕ್ಷೇತ್ರದ ಜೆಡಿ​ಎಸ್‌ ಅಭ್ಯರ್ಥಿ ಶಾರದ ಅಪ್ಪಾಜಿಗೌಡ ಹುಟ್ಟುಹಬ್ಬ ಪಕ್ಷದ ಜಿಲ್ಲಾ ಯುವ ಘಟಕ, ವಿವಿಧ ಸಂಘಟನೆಗಳಿಂದ, ಅಭಿಮಾನಿಗಳಿಂದ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ಅಪ್ಪಾಜಿಗೌ​ಡರ ನಿವಾಸದಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್‌ ನೇ​ತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಸಾವಿರಾರು ಮಂದಿಗೆ ಲಾಡು ವಿತರಿಸಲಾಯಿತು. ಅನಂತರ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣ ಮುಂಭಾಗ ಆಟೋ ಚಾಲಕರು ಹಮ್ಮಿಕೊಂಡಿದ್ದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ ಕೇಕ್‌ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಇಲ್ಲೂ ಲಾಡು ವಿತರಿಸಲಾಯಿತು.

ಕಣ್ಣೀರಿಟ್ಟ ಶಾರದ ಅಪ್ಪಾಜಿಗೌಡ: ಶಾರದ ಅಪ್ಪಾಜಿಗೌಡ ಮಾತ​ನಾ​ಡಿ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಅವರ ಮೇಲೆ ಕ್ಷೇತ್ರದ ಜನರು ಹೊಂದಿರುವ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿ ಅವರು ಕೈಗೊಂಡಿರುವ ಜನಪರ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅವರೊಂದಿಗೆ ಇದ್ದು, ಎಲ್ಲ ರೀತಿಯಲ್ಲೂ ಬೆಳವಣಿಗೆಯೊಂದಿದ ಬಹಳಷ್ಟುಮಂದಿ ಇಂದು ಅವರಿಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಂದು ಹೇಳುವ ಮೂಲಕ ಶಾರದ ಅಪ್ಪಾಜಿ ಕಣ್ಣೀರಿಟ್ಟರು. ಕ್ಷೇತ್ರದ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Tap to resize

Latest Videos

ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್

ಪ್ರತಿಮೆಗಳಿಗೆ ಮಾಲಾರ್ಪಣೆ: ಹುಟ್ಟುಹಬ್ಬದ ಅಂಗವಾಗಿ ಅಂಡರ್‌ ಬ್ರಿಡ್ಜ್‌ ಬಳಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತಿಮೆ ಹಾಗೂ ತರೀಕೆರೆ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಸೇರಿದಂತೆ ಮಹಾನ್‌ ವ್ಯಕ್ತಿಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಬಳಿ ಇರುವ ಶ್ರೀ ಮಾರಿಮ್ಮದೇವಿ ದೇವಸ್ಥಾನಕ್ಕೆ ತೆರಳಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ನಗರದ ತರೀಕೆರೆ ರಸ್ತೆಯಲ್ಲಿರುವ ಸೈಯದ್‌ ಸಾದತ್‌ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್‌. ಕರುಣಾಮೂರ್ತಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬ್ರೆಡ್‌, ಹಣ್ಣು ವಿತರಿಸಿದರು.

ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರದ ಆದ್ಯತೆ: ಸಂಸದ ರಾಜಾ ಅಮರೇಶ್ವರ ನಾಯಕ

ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್‌, ಪ್ರಮುಖರಾದ ಆರ್‌. ಕರುಣಾಮೂರ್ತಿ, ಜೆ.ಪಿ ಯೋಗೇಶ್‌, ಟಿ.ಡಿ. ಶ್ರೀಧರ್‌, ಉಮೇಶ್‌, ಎನ್‌. ರಾಮಕೃಷ್ಣ, ಗೊಂದಿ ಜಯರಾಂ, ಭಾಗ್ಯಮ್ಮ, ಪುಷ್ಪಾವತಿ, ನಗರಸಭಾ ಸದಸ್ಯರಾದ ವಿಜಯ, ನಾಗರತ್ನ, ಸವಿತಾ, ಜಯಶೀಲ, ರೇಖಾ, ರೂಪಾವತಿ, ಬಸವರಾಜ ಬಿ. ಆನೇಕೊಪ್ಪ, ಉದಯ್‌ಕುಮಾರ್‌, ಕೋಟೇಶ್ವರ ರಾವ್‌, ಮಾಜಿ ಸದಸ್ಯರಾದ ಎಚ್‌.ಬಿ ರವಿಕುಮಾರ್‌, ಎಂ.ರಾಜು, ಆನಂದ್‌, ಮೈಲಾರಪ್ಪ, ವಿಶಾಲಾಕ್ಷಿ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

click me!