Haveri: ಸಿಎಂ ಬೊಮ್ಮಾಯಿ ನಂಬಿಕಸ್ಥನಲ್ಲ: ಜಯಮೃತ್ಯುಂಜಯ ಸ್ವಾಮೀಜಿ

By Govindaraj S  |  First Published May 29, 2022, 7:39 PM IST

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 


ಹಾವೇರಿ (ಮೇ.29): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಇಂದು ರಾಣೆಬೇನ್ನೂರ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಸಿಎಂ ವಿರುದ್ದ ಜಯ ಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದರು. ಪಾದಯಾತ್ರೆ ಸಮಯದಲ್ಲಿ ಮೀಸಲಾತಿ ಭರವಸೆ ನೀಡಿ ಈಗ ಮಾತು ವರಸುತ್ತಿದ್ದಾರೆ. ಶಿಗ್ಗಾಂವಿಯಲ್ಲಿ ನಮ್ಮ ಸಮಾಜದ ಮುಖಂಡರಾದ ಸೋಮಣ್ಣ ಬೇವಿನಮರದ, ಕುನ್ನೂರ  ಬೊಮ್ಮಾಯಿನ ನಂಬಬೇಡಿ ಸ್ವಾಮೀಜಿ ಎಂದು ಹೇಳಿದ್ದರು. 

ನಾವು ಬೊಮ್ಮಾಯಿ ಅವರನ್ನು ಇಂದ್ರ-ಚಂದ್ರ ಎಂದು ಹೊಗಳಿಸಿ ಶಿಗ್ಗಾವಿಯಲ್ಲಿ ಶಾಸಕ  ಮಾಡಿ ಸಿಎಂ ಮಾಡಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟವಾಗಲಿದೆ. ಮೀಸಲಾತಿ ವಿಚಾರವಾಗಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಾಳೆ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಇಪ್ಪತ್ತು ಲಕ್ಷ ಜನರು ಸೇರಿಸಿ ಹೋರಾಟ ಮಾಡಲಾಗುವುದು. ಆಶ್ವಾಸನೆ ನೀಡಿದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

undefined

ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿ‌ಪಕ್ಷಕ್ಕೆ ಶಿಫ್ಟ್

ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಕೂಡಲ ಶ್ರೀ: ವಿಧಾನಸಭೆಯ ಪ್ರಸಕ್ತ ಅಧಿವೇಶನ ಮುಗಿಯುವುದರೊಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು, ಏ.14ರೊಳಗೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಿಸದಿದ್ದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪ್ರಮುಖರೊಂದಿಗಿನ ಮೀಸಲಾತಿ ಕುರಿತ ದುಂಡುಮೇಜಿನ ಸಭೆಯ ಬಳಿಕ ಮಾತನಾಡಿದರು.

‘2021 ಮಾ.15ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿವೇಶನದಲ್ಲಿ ಮುಂದಿನ ಆರು ತಿಂಗಳಲ್ಲಿ ಮೀಸಲಾತಿ ನೀಡುವುದಾಗಿ ಮಾತುಕೊಟ್ಟಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಅಕ್ಟೋಬರ್‌ನಲ್ಲಿ ಸಭೆ ಕರೆದು ಒಂದಿಷ್ಟು ಕಾಲಾವಕಾಶ ಕೇಳಿಕೊಂಡು ಬಜೆಟ್‌ ಅಧಿವೇಶನ ಮುಕ್ತಾಯವಾಗುವುದೊಳಗೆ ತೀರ್ಮಾನಿಸಲಾಗುವುದು ಎಂದಿದ್ದರು. ಆದರೆ, ಕಳೆದ 10 ದಿನಗಳಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಮೀಸಲಾತಿ ನೀಡುವ ಕುರಿತು ಚರ್ಚೆಗಳಾಗಿಲ್ಲ. ಮೀಸಲಾತಿ ಕುರಿತು ಜಯಪ್ರಕಾಶ್‌ ಹೆಗ್ಡೆ ಅವರ ಹಿಂದುಳಿದ ಆಯೋಗದ ವರದಿಯನ್ನೇ ಸರ್ಕಾರ ಪಡೆದುಕೊಂಡಿಲ್ಲ. ಹೀಗಾಗಿ, ಸರ್ಕಾರಕ್ಕೆ ಏ.14 ಅಂತಿಮ ಗಡುವು ನೀಡಲಾಗಿದೆ’ ಎಂದರು.

Haveriಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

‘ಸುಮಾರು ಒಂದು ವರ್ಷ ಮೂರು ತಿಂಗಳಿಂದ ಮೀಸಲಾತಿ ಹೋರಾಟ ಜೀವಂತವಾಗಿದೆ. ಸಮುದಾಯದ ಮುಖಂಡರಲ್ಲಿ ಪ್ರಾಮಾಣಿಕರು ಹೆಚ್ಚಿದ್ದು, ಹೋರಾಟ ಹತ್ತಿಕ್ಕಲು ಸಾಕಷ್ಟು ಪ್ರಯತ್ನಗಳಾದರು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ನೀಡಿದ್ದ ಕಾಲಾವಕಾಶ ಮುಕ್ತಾಯವಾಗಿದೆ. ಇನ್ನಷ್ಟುಸಮಯ ನೀಡಿದರೆ ವಿಧಾನಸಭೆ ಚುನಾವಣೆ ಬಂದು ನೀತಿ ಸಂಹಿತೆ ಎನ್ನುತ್ತಾರೆ. ಅಂಬೇಡ್ಕರ್‌ ಜಯಂತಿಯೊಳಗೆ ಸರ್ಕಾರ ನಮಗೆ ಮೀಸಲಾತಿ ನೀಡಿದಿದ್ದರೆ ಎಲ್ಲರೂ ಕೂಡಲಸಂಗಮಕ್ಕೆ ಬನ್ನಿ ಅಲ್ಲಿಂದಲೇ ಉಗ್ರ ಹೋರಾಟ ನಡೆಸೋಣ ಎಂದು ಕರೆಕೊಟ್ಟರು. ಅಧಿವೇಶನದಲ್ಲಿರುವ ಸಮುದಾಯದ ಜನಪ್ರತಿನಿಧಿಗಳು ಮೀಸಲಾತಿ ಕುರಿತು ದನಿ ಎತ್ತಬೇಕು, ಸಮುದಾಯದ ಋುಣದಲ್ಲಿರುವ ಇತರೆ ಸಮುದಾಯದ ಜನಪ್ರತಿನಿಧಿಗಳು ಬೆಂಬಲ ನೀಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

click me!